ಕಾರು ಉರುಳಿ ಮೈಸೂರಿನ ವಕೀಲ ಸಾವು
ಮೈಸೂರು

ಕಾರು ಉರುಳಿ ಮೈಸೂರಿನ ವಕೀಲ ಸಾವು

June 16, 2018

ಮೈಸೂರು:  ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಜಕದ ಮೇಲೇರಿ, ನಂತರ ಮೂರು ಪಲ್ಟಿ ಹೊಡೆದ ಪರಿಣಾಮ ಮೈಸೂರಿನ ವಕೀಲ ಸಾವನ್ನಪ್ಪಿ, ಇತರ ಇಬ್ಬರು ಗಾಯ ಗೊಂಡಿರುವ ಘಟನೆ ಕಳೆದ ಮಧ್ಯರಾತ್ರಿ ಬಿಳಿಕೆರೆ ಸಮೀಪ ಎಳನೀರು ಬೋರೆ ಬಳಿ ಹುಣಸೂರು ರಸ್ತೆಯಲ್ಲಿ ಸಂಭವಿಸಿದೆ.

ಮೈಸೂರಿನ ಮಂಚೇಗೌಡನಕೊಪ್ಪಲು, ಅಭಿಷೇಕ್ ಸರ್ಕಲ್ ನಿವಾಸಿ ಶ್ರೀನಿವಾಸ ಗೌಡರ ಮಗ ಬಾಲಕೃಷ್ಣ(42) ಸಾವನ್ನಪ್ಪಿದ ವಕೀಲ. ಅಪಘಾತದಿಂದ ಗಾಯಗೊಂಡಿ ರುವ ಎಂಜಿ ಕೊಪ್ಪಲಿನ ಹುಚ್ಚೇಗೌಡ ಮತ್ತು ನಾರಾಯಣ ಅವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಹೊರ ರೋಗಿಗ ಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಗುರುವಾರ ತಡ ರಾತ್ರಿ ಬಾಲಕೃಷ್ಣ, ಇಬ್ಬರು ಸ್ನೇಹಿತರೊಂದಿಗೆ ತನ್ನ ಮಹಿಂದ್ರ ನೋವಾ ಸ್ಪೋರ್ಟ್ (ಕೆಎಂ 9, ಎಂಡಿ 4118) ಕಾರಿನಲ್ಲಿ ಮೈಸೂರಿನಿಂದ ಹುಣ ಸೂರಿಗೆ ತೆರಳುತ್ತಿದ್ದರು. ಬಾಲಕೃಷ್ಣರೇ ಚಾಲಿ ಸುತ್ತಿದ್ದ ಕಾರು, ನಿಯಂತ್ರಣ ಕಳೆದು ಕೊಂಡು ಬಿಳಿಕೆರೆ ಸಮೀಪ, ಸೀಗೇಹಳ್ಳಿ ಮತ್ತು ಎಳನೀರು ಬೋರೆ ನಡುವೆ ಹುಣ ಸೂರು ರಸ್ತೆಯಲ್ಲಿ ತಿರುವಿನಲ್ಲಿ ರಸ್ತೆ ವಿಭಜಕ ಏರಿ, ಮೂರು ಪಲ್ಟಿ ಹೊಡೆದು, ಬಿದ್ದಿದೆ.

ಪರಿಣಾಮ ಚಾಲನೆ ಮಾಡುತ್ತಿದ್ದ ವಕೀಲ ಬಾಲಕೃಷ್ಣ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ. ಗಾಯಗಳಾ ಗಿದ್ದ ಹುಚ್ಚೇಗೌಡ ಮತ್ತು ನಾರಾಯಣ ನನ್ನು ದಾರಿಹೋಕರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆ ತಂದರು.
ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದಾವಿಸಿದ ಬಿಳಿಕೆರೆ ಠಾಣೆ ಪೊಲೀಸರು ಬಾಲಕೃಷ್ಣನ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಶವಾಗಾರಕ್ಕೆ ಸಾಗಿಸಿದರು. ಘಟನೆಯಿಂದ ಕಾರು ತೀವ್ರವಾಗಿ ಜಖಂ ಗೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಬಾಲಕೃಷ್ಣ ಅವರ ಅಣ್ಣನ ಮಗ ಸುಜನ್ ಮೈಸೂರು-ವಿರಾಜಪೇಟೆ ರಸ್ತೆಯಲ್ಲಿ ಪಿರಿಯಾಪಟ್ಟಣ ತಾಲೂಕು ಪಂಚವಳ್ಳಿ ಬಳಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದ. ಈ ವೇಳೆ ಅದೇ ಬೈಕ್‍ನಲ್ಲಿದ್ದ ಯುವತಿಯೂ ಬಲಿಯಾಗಿ ದ್ದಳು. ಈ ದುರಂತ ನಂತರ ಬಾಲಕೃಷ್ಣ ಅವರು ಮಾನಸಿಕ ತೊಳಲಾಟಕ್ಕೀಡಾ ಗಿದ್ದರು ಎಂದು ಹೇಳಲಾಗಿದೆ.

Translate »