ಆಡಳಿತದಲ್ಲಿ ಕನ್ನಡ ಬಳಕೆಗೆ 316 ಆದೇಶ ಹೊರಡಿಸಿದರೂ ನಿರೀಕ್ಷಿತ ಫಲ ದೊರೆತಿಲ್ಲ
ಮೈಸೂರು

ಆಡಳಿತದಲ್ಲಿ ಕನ್ನಡ ಬಳಕೆಗೆ 316 ಆದೇಶ ಹೊರಡಿಸಿದರೂ ನಿರೀಕ್ಷಿತ ಫಲ ದೊರೆತಿಲ್ಲ

June 16, 2018
  •  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾಧ
  •  ಆಡಳಿತ ತರಬೇತಿ ಸಂಸ್ಥೆ, ದಸರಾ ವಸ್ತು ಪ್ರದರ್ಶನ ಕಚೇರಿಯಲ್ಲಿ ಕನ್ನಡ ಬಳಕೆ ಸಂಬಂಧ ಪರಿಶೀಲನೆ

ಮೈಸೂರು:  ಆಡಳಿತದಲ್ಲಿ ಕನ್ನಡ ಭಾಷೆ ಕಡ್ಡಾಯ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇದು ವರೆಗೂ 316 ಆದೇಶಗಳನ್ನು ಹೊರಡಿ ಸಿದ್ದರೂ ಕೆಲವು ಇಲಾಖೆ ಕಚೇರಿಗಳಲ್ಲಿ ಅನ್ಯ ಭಾಷೆಗಳ ವ್ಯಾಮೋಹದಿಂದ, ಕನ್ನಡವನ್ನು ಕಡೆಗಣಿಸುವ ವರ್ತನೆಗಳು ನಡೆಯುತ್ತಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ವಿಷಾದಿಸಿದ್ದಾರೆ.

ಆಡಳಿತದಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಕುರಿತು ಶುಕ್ರವಾರ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಆಡಳಿತದಲ್ಲಿ ಕನ್ನಡ ಕಡ್ಡಾಯ ಸಂಬಂಧಿ ಸಿದಂತೆ ರಾಜ್ಯ ಸರ್ಕಾರ 2002ರಲ್ಲಿಯೇ ಆದೇಶ ಹೊರಡಿಸಿದೆ. ಕನ್ನಡ ಭಾಷೆ ಬಳಕೆಗೆ ಹಿಂದೇಟು ಹಾಕುವ ಅಧಿಕಾರಿ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡ ಭಾಷೆ ಬಳಕೆಗೆ ಸಂಬಂಧಿಸಿ ದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿದ ಸೂಚನೆ ಹಾಗೂ ಎಚ್ಚರಿಕೆ ಧಿಕ್ಕರಿಸಿದ ಇಬ್ಬರು ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಇ-ಗರ್ವನ್ಸ್ ಇಲಾಖೆಯಲ್ಲಿ ಶ್ರೀವತ್ಸ ಎಂಬ ಐಎಎಸ್ ಅಧಿಕಾರಿಯನ್ನು ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಕೇಂದ್ರ ಸೇವೆಗೆ ಕಳುಹಿಸಿದೆ. ಹಾಗೆಯೇ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಕನ್ನಡ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಟಿಐ: ಮೈಸೂರಿನ ಲಲಿತಮಹಲ್ ರಸ್ತೆಯಲ್ಲಿರುವ ಆಡಳಿತ ತರಬೇತಿ ಕೇಂದ್ರಕ್ಕೆ ಇಂದು ಬೆಳಿಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದ ರಾಮಯ್ಯ, ಪ್ರಾಧಿಕಾರದ ಸದಸ್ಯರೊಂದಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ದರು. ಗ್ರಂಥಾಲಯ ಹಾಗೂ ಅಬಕಾರಿ ಇಲಾಖೆಗೆ ಹೊಸದಾಗಿ ಆಯ್ಕೆಯಾಗಿ ರುವ ಅಧಿಕಾರಿಗಳಿಗೆ ನೀಡುತ್ತಿರುವ ತರ ಬೇತಿಯನ್ನು ಪರಿಶೀಲಿಸಿದರು. ಇಂತಹ ಯುವ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಅವರು, ಕನ್ನಡ ಭಾಷೆ ಬಳಸು ತ್ತಿದ್ದಾರೆಯೇ? ಇಲ್ಲ ಇಂಗ್ಲೀಷ್ ಬಳಸ ಲಾಗುತ್ತಿದೆಯೇ ಎಂದು ಪ್ರಶ್ನಿಸಿದರಲ್ಲದೆ, ಕನ್ನಡ ಭಾಷೆ ಬಳಕೆಯ ಮಹತ್ವವನ್ನು ವಿವರಿಸಿದರು. ಇದಕ್ಕೆ ಯುವ ಅಧಿಕಾರಿ ಗಳು, ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಯಲ್ಲಿ ತರಬೇತಿ ನೀಡುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಕನ್ನಡ ಭಾಷೆಯನ್ನು ಬಳಸಲಾಗುತ್ತಿದೆ. ಆಯ್ಕೆಯಾಗಿರುವ ಬಹುತೇಕರ ಮಾತೃ ಭಾಷೆ ಕನ್ನಡವೇ ಆಗಿದೆ. ನಾವೆಲ್ಲ ಆಡಳಿತದಲ್ಲಿ ಕನ್ನಡ ಭಾಷೆ ಬಳಸುವುದಾಗಿ ವಾಗ್ದಾನ ಮಾಡಿದರು.

ಪರಿಶೀಲನಾ ಸಭೆ: ಇದಕ್ಕೂ ಮುನ್ನ ಎಟಿಐ ಆವರಣದಲ್ಲಿರುವ ಕಬಿನಿ ಅತಿಥಿ ಗೃಹದ ಸಭಾಂಗಣದಲ್ಲಿ ಕನ್ನಡ ಭಾಷಾ ಬಳಕೆಯ ಕುರಿತ ಪರಿಶೀಲನಾ ಸಭೆ ನಡೆಸಿ ದರು. ಈ ವೇಳೆ ಎಇಇಯೊಬ್ಬರು ಟಿಪ್ಪಣಿ ಯನ್ನು ಇಂಗ್ಲೀಷ್‍ನಲ್ಲಿ ಬರೆದಿರುವುದನ್ನು ಗಮನಿಸಿ, ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಬಳಸು ವುದಾಗಿ ಆ ಅಧಿಕಾರಿ ಸಮಜಾಯಿಷಿ ನೀಡಿದರು.
ಕನ್ನಡ ನಿರ್ಲಕ್ಷಿಸಬೇಡಿ: ಆಡಳಿತ ತರಬೇತಿ ಸಂಸ್ಥೆಯಲ್ಲಿ ಬೇರೆ ಭಾಷಿಗರು ತರಬೇತಿಗೆ ಬರುತ್ತಾರೆ. ಈ ವೇಳೆ ಇತರೆ ಭಾಷೆ ವ್ಯಾಮೋಹದಿಂದ ಕನ್ನಡವನ್ನು ನಿರ್ಲಕ್ಷಿಸಬಾರದು. ಸ್ಥಳೀಯ ಭಾಷೆಗೆ ಪ್ರಾಮುಖ್ಯತೆ ಕೊಡಬೇಕು. ಎಟಿಐಗೆ ತರಬೇತಿಗೆ ಬರುವವರಿಗೆ ಕನ್ನಡ ಬಳಸು ವಂತೆ ಪ್ರೇರೇಪಣೆ ನೀಡಿದರೆ, ಮುಂದಿನ ದಿನಗಳಲ್ಲಿ ಅವರು ಕನ್ನಡ ಭಾಷೆ ಬಳಕೆಗೆ ನೆರವಾಗುತ್ತದೆ. ಈ ಸಂಸ್ಥೆ, ಮನೆ ಕಟ್ಟಲು ಭದ್ರ ಬುನಾದಿ ಹಾಕುವಂತೆ ಸರ್ಕಾರಿ ಸೇವೆಗೆ ಸೇರುವ ಅಧಿಕಾರಿಗಳಿಗೆ ತರ ಬೇತಿ ನೀಡುವ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು.

ಅಧ್ಯಯನ ಸಾಮಾಗ್ರಿ ಕನ್ನಡದಲ್ಲೇ ಇರಲಿ: ಇಲ್ಲಿನ ಪ್ರಶಿಕ್ಷಣಾರ್ಥಿಗಳಿಗೆ ಎಟಿಐ ವತಿಯಿಂದ ನೀಡುವ ಅಧ್ಯಯನ ಸಾಮಗ್ರಿ ಗಳನ್ನು ಇಂಗ್ಲಿಷ್ ಜೊತೆಗೆ ಕನ್ನಡದ ಲ್ಲಿಯೂ ಮುದ್ರಿಸಲು ಕ್ರಮ ಕೈಗೊಳ್ಳಬೇಕು. ಅನುದಾನವಿಲ್ಲ ಎಂಬ ಕಾರಣ ನೀಡದೆ ಕನ್ನಡ ಭಾಷೆಯಲ್ಲಿ ಅಧ್ಯಯನ ಸಾಮಗ್ರಿ (ಸ್ಟಡಿ ಮೆಟೀರಿಯಲ್) ಮುದ್ರಿಸದೆ ಇರಬಾರದು. ಜೊತೆಗೆ ಗ್ರಂಥಾಲಯಕ್ಕೂ ಕನ್ನಡ ಪುಸ್ತಕಗಳನ್ನು ಖರೀದಿಸುವಂತೆ ಸಲಹೆ ನೀಡಿದರು.

ಕನ್ನಡದಲ್ಲಿಯೇ ಇರಲಿ ವೆಬ್‍ಸೈಟ್: ಎಟಿಐ ವೆಬ್‍ಸೈಟ್‍ನಲ್ಲಿ ಕನ್ನಡ ಕಣ್ಮರೆ ಯಾಗಿದೆ. ಆಡಳಿತ ತರಬೇತಿ ಸಂಸ್ಥೆ ಎಂಬ ಶೀರ್ಷಿಕೆ ಮಾತ್ರ ಕನ್ನಡದಲ್ಲಿ ಇದೆ. ಉಳಿದ ಎಲ್ಲಾ ಪೇಜ್‍ಗಳಲ್ಲಿ ಇಂಗ್ಲೀಷ್ ರಾರಾಜಿ ಸುತ್ತಿದೆ. ಕನ್ನಡಕ್ಕೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.

ಇದಕ್ಕೆ ಎಟಿಐ ಸಂಸ್ಥೆಯ ಮಹಾ ನಿರ್ದೇ ಶಕ ಡಾ.ಸಂದೀಪ್ ದವೆ ಪ್ರತಿಕ್ರಿಯಿಸಿ, ಇದು ಹಳೆಯ ವೆಬ್‍ಸೈಟ್. ಹೊಸ ವೆಬ್ ಸೈಟ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, 20 ದಿನ ಕಾಲಾವಕಾಶ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮೀ, ಉಪನಿರ್ದೇಶಕಿ ಹೆಚ್.ಎಸ್. ಯಶಸ್ವಿನಿ, ಎಇಇ ಜಿ.ಹರೀಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಪ್ಪ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್, ಕನ್ನಡಪರ ಹೋರಾಟಗಾರರಾದ ಎಂ.ಬಿ.ವಿಶ್ವನಾಥ್, ರಂಗಕರ್ಮಿ ರಾಜಶೇಖರ್ ಕದಂಬ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

ದಸರಾ ವಸ್ತು ಪ್ರದರ್ಶನ: ದಸರಾ ವಸ್ತು ಪ್ರದರ್ಶನದ ಆವರಣದಲ್ಲಿರುವ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಯಲ್ಲೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕೆಲ ಕಡತ ಗಳು ಹಾಗೂ ಟೆಂಡರ್ ಪ್ರಕ್ರಿಯೆ ದಾಖಲೆ ಗಳು ಇಂಗ್ಲೀಷ್‍ನಲ್ಲಿರುವುದಕ್ಕೆ ಅಸಮಾ ಧಾನ ವ್ಯಕ್ತಪಡಿಸಿದರು. ಇಂಗ್ಲೀಷ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಥಳೀಯರು ಪಾಲ್ಗೊಳ್ಳುತ್ತಿಲ್ಲ ಎಂದು ವಿಷಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ಶಶಿಕುಮಾರ್, ಲೋಕೋಪಯೋಗಿ ಇಲಾಖೆಯ ಗೈಡ್‍ಲೈನ್ಸ್‍ನಂತೆ ಟೆಂಡರ್ ಪ್ರಕ್ರಿಯೆಯಲ್ಲಿ ಇಂಗ್ಲೀಷ್ ಬಳಸಲಾಗಿದೆ. ಗ್ಲೋಬಲ್ ಟೆಂಡರ್ ಆಗಿರುವುದ ರಿಂದ ಇಂಗ್ಲೀಷ್ ಬಳಕೆಗೆ ಆದ್ಯತೆ ನೀಡ ಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಕ್ರಿಯೆಯನ್ನು ಕನ್ನಡದಲ್ಲಿಯೇ ನಡೆಸು ವುದಾಗಿ ಭರವಸೆ ನೀಡಿದರು. ಈ ಸಂದರ್ಭ ದಲ್ಲಿ ಎಇಇ ಸಿಂಧು ಸೇರಿದಂತೆ ಇನ್ನಿ ತರರು ಉಪಸ್ಥಿತರಿದ್ದರು.

ಸಿನಿಮಾ ನೋಡಿ ಕನ್ನಡ ಕಲಿತೆ

ನಾನು ಸೇವೆಗೆ ಸೇರಿದ್ದಾಗ ಕನ್ನಡ ಬರುತ್ತಿರಲಿಲ್ಲ. ಆ ಅವಧಿಯಲ್ಲಿ ಮೊಬೈಲ್, ಇಂಟರ್‍ನೆಟ್ ಇರಲಿಲ್ಲ. ವಿದ್ಯುನ್ಮಾನ ಮಾಧ್ಯಮಗಳು ಸಹ ಹೆಚ್ಚಾಗಿರಲಿಲ್ಲ. ಕರ್ನಾಟಕದಲ್ಲಿ ಸೇವೆ ಸಲ್ಲಿಸುವಾಗ ಇಲ್ಲಿನ ಜನರೊಂದಿಗೆ ಕನ್ನಡದಲ್ಲಿಯೇ ಮಾತನಾಡುವುದು ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಸಿನಿಮಾ ನೋಡಿ ಕನ್ನಡ ಕಲಿತೆ. ಜನರೊಂದಿಗೆ ಹೇಗೆ ಮಾತನಾಡಬೇಕು. ಸಂದರ್ಭಕ್ಕನು ಸಾರ ಯಾವ ಪದಗಳನ್ನು ಬಳಸಬಹುದು ಎನ್ನುವುದನ್ನು ಕಲಿತುಕೊಂಡೆ. ಸಾಹಿತ್ಯಕ್ಕಿಂತಲೂ ಸಿನಿಮಾ ಕನ್ನಡ ಭಾಷೆ ಕಲಿಯಲು ಸುಲಭ ಮಾಧ್ಯಮವಾಗಿದೆ. – ಡಾ.ಸಂದೀಪ್ ದವೆ, ಎಟಿಐ ಮಹಾನಿರ್ದೇಶಕ

ಕನ್ನಡ ತನಿಖಾ ಸಮಿತಿ ರಚಿಸಿ

ಪ್ರತಿಯೊಂದು ಸಂಸ್ಥೆಯಲ್ಲೂ ಕನ್ನಡ ತನಿಖಾ ಸಮಿತಿಯನ್ನು ರಚಿಸಬೇಕು. ಈ ಸಮಿತಿ ಆಯಾಯ ಸಂಸ್ಥೆಗಳಲ್ಲಿ ಆಡಳಿತದಲ್ಲಿ ಕನ್ನಡ ಭಾಷೆ ಬಳಸುತ್ತಿ ರುವುದನ್ನು ಪರಿಶೀಲಿಸಬೇಕು. ಅಲ್ಲದೆ ಯಾವ ಅಧಿಕಾರಿಗಳು ಕನ್ನಡ ಭಾಷೆ ಬಳಸಲು ಹಿಂದೇಟು ಹಾಕುತ್ತಾರೋ ಅಂತಹವರ ಬಗ್ಗೆ ಮಾಹಿತಿ ನೀಡಬೇಕು. ಕಚೇರಿಯಲ್ಲಿ ಭಾಷೆ ಬಳಕೆಯ ಬಗ್ಗೆ ನಡೆಯುವ ಚಟುವಟಿಕೆಯ ಬಗ್ಗೆ ಪ್ರತಿ ತಿಂಗಳು ಪ್ರಾಧಿಕಾರಕ್ಕೆ ವರದಿ ನೀಡಬೇಕು. ಇತರೆ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸುವಾಗ ಕನ್ನಡಕ್ಕೆ ಆದ್ಯತೆ ನೀಡಬೇಕು. ವಿದೇಶಿ ಪ್ರವಾಸಿಗರಿಗೆ ವಸ್ತು ಪ್ರದರ್ಶನದ ಟಿಕೆಟ್‍ನ ಹಿಂಭಾಗ ದಿನ ಬಳಕೆಯ ಕನ್ನಡ ಪದಗಳನ್ನು ಇಂಗ್ಲೀಷ್‍ನೊಂದಿಗೆ ಮುದ್ರಿಸಿ ಪರಿಚಯ ಮಾಡಿಕೊಡುವತ್ತ ಕ್ರಮ ಕೈಗೊಳ್ಳಬೇಕು. – ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Translate »