ಮಡಿಕೇರಿ: ಕಾರ್ಮಿಕರು ರಾಷ್ಟ್ರದ ಶಿಲ್ಪಿಗಳು, ಕಾರ್ಮಿಕರಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾ ಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾ ಜಿಕ ಭದ್ರತಾ ಮಂಡಳಿ ಹಾಗೂ ಕರ್ನಾ ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಮಿಕರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ…
ಒಂಟಿ ಮಹಿಳೆ ಹತ್ಯೆ ಪ್ರಕರಣ: ಮೂವರು ಹಂತಕರ ಬಂಧನ: ಹಣ, ಆಭರಣಕ್ಕೆ ನಡೆದ ಕೊಲೆ
March 2, 2019ಮಡಿಕೇರಿ: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಳದಾಳು ಗ್ರಾಮದಲ್ಲಿ ಫೆ.21ರಂದು ನಡೆದಿದ್ದ ಕರ್ಣಯನ ರಾಧ(72) ಎಂಬ ಒಂಟಿ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಶಾಲನಗರ ಗೋಂದಿ ಬಸವನಹಳ್ಳಿ ನಿವಾಸಿ ಸುಬ್ರಮಣಿ (24), ಮುಳ್ಳುಸೋಗೆಯ ಪಾಕಮುಕ್ಕಾಟಿ ಮದನ್(20) ಮತ್ತು ಗೋಂದಿ ಬಸವನಹಳ್ಳಿಯ ಕಾವ್ಯ ಅಲಿಯಾಸ್ ಶ್ವೇತ ಬಂಧಿತ ಆರೋಪಿಗಳಾಗಿದ್ದು, ಚಿನ್ನಾಭರಣ ಮತ್ತು ಹಣ ದೋಚುವ ಉದ್ದೇಶದಿಂದಲೇ ಕೊಲೆ ಮಾಡಿರುವುದಾಗಿ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಘಟನೆ ಹಿನ್ನಲೆ: ಫೆ.21ರಂದು…
ಗಾಂಜಾ ಬೆಳೆ: ಓರ್ವನ ಬಂಧನ
March 2, 2019ಮಡಿಕೇರಿ:ಮಡಿಕೇರಿ ಸಮೀಪದ ಬೆಟ್ಟ ತ್ತೂರು ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಪತ್ತೆ ಹಚ್ಚಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು ಮಾಲು ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಬೆಟ್ಟತ್ತೂರು ಗ್ರಾಮದ ನಿವಾಸಿ ಧರ್ಮಪ್ಪ ಆರೋಪಿಯಾಗಿದ್ದು, ಈತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾ ಗಿದೆ. ಆರೋಪಿಯಿಂದ 5.5 ಕೆ.ಜಿ.ಯ 3 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಕಲಂ 20(ಎ) ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ವಿವಿಧೆಡೆ ಒಂಟಿ ಮಹಿಳೆಯರು ವಾಸ ವಿದ್ದರೆ, ಅವರು ತಮ್ಮ…
ಕುಶಾಲನಗರ, ಪೊನ್ನಂಪೇಟೆ, ಸಾಲಿಗ್ರಾಮ, ಶಾಂತಿಗ್ರಾಮ ನೂತನ ತಾಲೂಕು
March 1, 2019ಕುಶಾಲನಗರ: ಕುಶಾಲನಗರ ಮತ್ತು ಪೊನ್ನಂಪೇಟೆಯನ್ನು ತಾಲೂಕು ಕೇಂದ್ರ ಮಾಡ ಬೇಕೆಂಬ ಜಿಲ್ಲೆಯ ಜನತೆಯ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಿದೆ. ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧಿಕೃತವಾಗಿ ಘೋಷಣೆ ಮಾಡಿ ದರು. ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ 62 ತಾಲೂಕುಗಳಿಗೆ ಮೂಲಭೂತ ಸೌಕರ್ಯ ಗಳನ್ನು ಒದಗಿಸುವ ನಿಟ್ಟಿನಲ್ಲಿ ತಲಾ ರೂ.50 ಲಕ್ಷ ವಿಶೇಷ ಅನುದಾನವನ್ನು ಬಿಡುಗಡೆ ಮಾಡು ವುದಾಗಿ ಭರವಸೆ ನೀಡಿದರು. ಕೊಡಗು ಜಿಲ್ಲಾಡಳಿತದ ವತಿಯಿಂದ ಬಸವನ ಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ…
ದಿಡ್ಡಳ್ಳಿ ನಿರಾಶ್ರಿತ ಗಿರಿಜನರಿಗೆ ಮನೆ ಹಸ್ತಾಂತರ
March 1, 2019ಕುಶಾಲನಗರ: ಕೊಡಗು ಜಿಲ್ಲೆ ಪ್ರಕೃತಿ ವಿಕೋಪದಿಂದ ಕಂಗೆಟ್ಟ ನಂತರ ಸಂತ್ರಸ್ತರಿಗೆ ನವ ಜೀವನಕ್ಕಾಗಿ ಎಲ್ಲಾ ರೀತಿ ಯಲ್ಲಿಯೂ ಸರ್ಕಾರ ಸೌಕರ್ಯ ಕಲ್ಪಿಸು ತ್ತಿದೆ. ಗ್ರಾಮೀಣ ಪ್ರದೇಶದ ರಸ್ತೆಗಳ ದುರ ಸ್ಥಿಗೆ ಶೀಘ್ರಗತಿಯಲ್ಲಿ ಮುಂದಾಗಿದೆ. ಸಂತ್ರ ಸ್ತರಿಗೆ ಅಗತ್ಯ ನೆರವು ನೀಡಲು ಸರ್ಕಾರ ಎಲ್ಲಾ ರೀತಿಯ ಆರ್ಥಿಕ ಸಹಕಾರ ನೀಡು ತ್ತಿದೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದರು. ಕೊಡಗು ಜಿಲ್ಲಾಡಳಿತದ ವತಿಯಿಂದ ಬಸವನಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪ ಡಿಸಿದ್ದ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ…
ಬಸವನಹಳ್ಳಿ, ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರ: ಇಂದು ಮುಖ್ಯಮಂತ್ರಿಯಿಂದ ದಿಡ್ಡಳ್ಳಿ ನಿರಾಶ್ರಿತರಿಗೆ ಮನೆ ಹಸ್ತಾಂತರ
February 28, 2019ಗಿರಿಜನ ಹೋರಾಟಗಾರ್ತಿ ಮುತ್ತಮ್ಮ ಹೋರಾಟಕ್ಕೆ ಸಿಕ್ಕಿತು ಫಲ ಕುಶಾಲನಗರ: ದಿಡ್ಡಳ್ಳಿ ನಿರಾಶ್ರಿತ ಗಿರಿಜನರಿಗೆ ತಾಲೂಕಿನ ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ 300 ಹೊಸ ಮನೆಗಳನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಫೆ.28 ರಂದು ಹಸ್ತಾಂತರಿಸಲಿದ್ದಾರೆ. ಸಮೀಪದ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬಸವನಹಳ್ಳಿ ಹಾಗೂ ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವ ಸತಿ ಕೇಂದ್ರದಲ್ಲಿ ಕೈಗೊಂಡಿರುವ ವಸತಿ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, 528 ಮನೆಗಳ ಪೈಕಿ ಪೂರ್ಣಗೊಂಡಿ ರುವ 300 ಹೊಸ ಮನೆಗಳನ್ನು ಹಸ್ತಾಂ ತರ ಮಾಡಲು ಸಿದ್ಧತೆ…
ಪೊನ್ನಂಪೇಟೆಗೆ ತಾಲೂಕು ಭಾಗ್ಯ: ಪದ್ಮಿನಿ ಪೊನ್ನಪ್ಪಗೆ ಸನ್ಮಾನ
February 28, 2019ಗೋಣಿಕೊಪ್ಪಲು,: ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿರುವುದರಿಂದ ಶೀಘ್ರವಾಗಿ ತಹಶೀಲ್ದಾರ್ ನೇಮಕಕ್ಕೆ ಹೋರಾಟ ನಡೆಸಬೇಕಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಪೊನ್ನಂಪೇಟೆ ತಾಲೂಕು ರಚನೆ ಘೋಷಣೆಗೆ ಕಾರಣಕರ್ತರಾದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಪದ್ಮಿನಿ ಪೊನ್ನಪ್ಪ ಅವರಿಗೆ ನಗರದ ಗಾಂಧಿ ಪ್ರತಿಮೆ ಆವರಣದಲ್ಲಿ ಪೊನ್ನಂಪೇಟೆ ಹಿರಿಯ ನಾಗರಿಕ ಹೋರಾಟ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕು ರಚನೆ ವಿಚಾರದಲ್ಲಿ ಹಲವು ವರ್ಷ ಗಳಿಂದ…
13 ಚೀಲ ಕರಿಮೆಣಸು, 2.85 ಲಕ್ಷ ರೂ. ನಗದು ಕಳವು ಪ್ರಕರಣ
February 28, 2019ಮೂವರು ಕಳ್ಳರಿಗೆ 1 ವರ್ಷ ಸಾದಾ ಸಜೆ ಮಡಿಕೇರಿ: ಅಂಗಡಿಯೊಂದರ ಬೀಗ ಮುರಿದು 2.85 ಲಕ್ಷ ನಗದು ಮತ್ತು 13 ಚೀಲ ಕರಿಮೆಣಸು ಕಳವು ಮಾಡಿದ್ದ ಮೂವರು ಕಳ್ಳರಿಗೆ ಮಡಿಕೇರಿ ಜೆಎಂಎಫ್‍ಸಿ ನ್ಯಾಯಾಲಯ 1 ವರ್ಷ ಸಾದಾ ಸಜೆ ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಿದೆ. ಪನಕ್ಕಲ್ ಚಂದ್ರನ್, ಪಿಚ್ಚೆಘÀನಿ, ರಜೀಶ್ ಅಪರಾಧಿಗಳಾಗಿದ್ದು, ಜೆಎಂಎಫ್‍ಸಿ ನ್ಯಾಯಾಧೀಶರಾದ ಬಿ.ಕೆ.ಮನು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಹಿನ್ನೆಲೆ: ಮೂರ್ನಾಡು ಕೆ.ಎ.ಅಬ್ದುಲ್ ಖಾಸಿಂ ಎಂಬುವರು ಸುಗುಣ ಕಾಂಪ್ಲೆಕ್ಸ್‍ನಲ್ಲಿ ಕಾಫಿ…
ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ
February 28, 2019ಮಡಿಕೇರಿ: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯು ಮಾರ್ಚ್ 1 ರಿಂದ 18 ರವರೆಗೆ ನಡೆಯಲಿದ್ದು, ಪರೀಕ್ಷೆ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಭೆಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯು ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳು ವುದು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವುದು, ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ತಂಡಗಳ ನಿಯೋಜನೆ ಮತ್ತಿತರ ಕ್ರಮಕ್ಕೆ ನಿರ್ದೇಶನ…
‘ಸರ್ಜಿಕಲ್ ಸ್ಟ್ರೈಕ್’ಗೆ ಜಿಲ್ಲಾದ್ಯಂತ ವಿಜಯೋತ್ಸವ
February 27, 2019ಪಟಾಕಿ ಸಿಡಿಸಿ ಸಂಭ್ರಮಿಸಿದ ವಿವಿಧ ಸಂಘಟನೆಯ ಕಾರ್ಯಕರ್ತರು ಮಡಿಕೇರಿ: ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಮಂಗಳವಾರ ಮುಂಜಾನೆ ಭಾರತೀಯ ವಾಯುಪಡೆ ನಡೆಸಿದ 2ನೇ ಸರ್ಜಿಕಲ್ ಸ್ಟ್ರೈಕ್‍ಗೆ ಜಿಲ್ಲೆಯ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳಿಂದ ವಿಜಯೋತ್ಸವ ಆಚರಿಸಿ, ಭಾರತೀಯ ಸೇನಾ ಪಡೆಗೆ ಅಭಿನಂದನೆ ಸಲ್ಲಿಸಲಾಯಿತು. ಮಡಿಕೇರಿ ವರದಿ: ದಾಳಿಗೆ ಭಾರತದ ವಾಯು ಪಡೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‍ಗೆ ಹರ್ಷ ವ್ಯಕ್ತಪಡಿಸಿದ ಬಿಜೆಪಿ ಮತ್ತು ವಿವಿಧ ಹಿಂದೂ ಪರ ಸಂಘಟನೆಗಳು ಮಡಿಕೇರಿ ಯಲ್ಲಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ನಗರದ ಇಂದಿರಾ…