ದಿಡ್ಡಳ್ಳಿ ನಿರಾಶ್ರಿತ ಗಿರಿಜನರಿಗೆ ಮನೆ ಹಸ್ತಾಂತರ
ಕೊಡಗು

ದಿಡ್ಡಳ್ಳಿ ನಿರಾಶ್ರಿತ ಗಿರಿಜನರಿಗೆ ಮನೆ ಹಸ್ತಾಂತರ

March 1, 2019

ಕುಶಾಲನಗರ: ಕೊಡಗು ಜಿಲ್ಲೆ ಪ್ರಕೃತಿ ವಿಕೋಪದಿಂದ ಕಂಗೆಟ್ಟ ನಂತರ ಸಂತ್ರಸ್ತರಿಗೆ ನವ ಜೀವನಕ್ಕಾಗಿ ಎಲ್ಲಾ ರೀತಿ ಯಲ್ಲಿಯೂ ಸರ್ಕಾರ ಸೌಕರ್ಯ ಕಲ್ಪಿಸು ತ್ತಿದೆ. ಗ್ರಾಮೀಣ ಪ್ರದೇಶದ ರಸ್ತೆಗಳ ದುರ ಸ್ಥಿಗೆ ಶೀಘ್ರಗತಿಯಲ್ಲಿ ಮುಂದಾಗಿದೆ. ಸಂತ್ರ ಸ್ತರಿಗೆ ಅಗತ್ಯ ನೆರವು ನೀಡಲು ಸರ್ಕಾರ ಎಲ್ಲಾ ರೀತಿಯ ಆರ್ಥಿಕ ಸಹಕಾರ ನೀಡು ತ್ತಿದೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದರು.

ಕೊಡಗು ಜಿಲ್ಲಾಡಳಿತದ ವತಿಯಿಂದ ಬಸವನಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪ ಡಿಸಿದ್ದ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿ ವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಹಾಗೂ ದಿಡ್ಡಳ್ಳಿ ಗಿರಿಜನರ ನಿರಾಶ್ರಿತರಿಗೆ ಮನೆಗಳ ಹಸ್ತಾಂತರ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

6 ತಿಂಗಳ ಹಿಂದಿನ ಪ್ರಕೃತಿ ವಿಕೋಪ ದಿಂದಾಗಿ ಅರ್ಧ ಕುಸಿದಿರುವ ಬೆಟ್ಟ ಗುಡ್ಡ ಗಳು ಈ ವರ್ಷದ ಮಳೆಗಾಲದಲ್ಲಿ ಪೂರ್ಣ ಕುಸಿಯುವ ಸಾಧ್ಯತೆ ಹಿನ್ನಲೆಯಲ್ಲಿ ಜಿಲ್ಲಾ ಧಿಕಾರಿಗಳು ಪರಿಣಿತರನ್ನು ಕರೆಸಿಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊ ಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಮುಕ್ತ ಸ್ವಾತಂತ್ರ್ಯ ನೀಡಿದೆ. ಯಾವುದೇ ನಿರ್ಧಾರ ಕೈಗೊಳ್ಳಲೂ ಕೊಡಗು ಜಿಲ್ಲಾಧಿಕಾರಿ ಸ್ವಾತಂತ್ರರಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶ ದಂತೆ ರಾಜ್ಯದಲ್ಲಿ ಆದಿವಾಸಿಗಳನ್ನು ಒಕ್ಕ ಲೆಬ್ಬಿಸಲು ಅವಕಾಶ ನೀಡುವುದಿಲ್ಲ. ಈಗಾ ಗಲೇ ನ್ಯಾಯಾಲಯದ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ರಾಜ್ಯದ ಅಡ್ವೋ ಕೇಟ್ ಜನರಲ್‍ಗೆ ಸೂಚಿಸಲಾಗಿದೆ ಎಂದು ಹೇಳಿದ ಕುಮಾರಸ್ವಾಮಿ, ಆದಿವಾಸಿ ಗಳನ್ನು ಖಂಡಿತಾ ಸಂಕಷ್ಟಕ್ಕೆ ತಳ್ಳಲಾರೆವು ಎಂದು ಭರವಸೆ ನೀಡಿದರು.

ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ದಲ್ಲಿ ಆಸ್ತಿ ಕಳೆದುಕೊಂಡವರಿಗೆ ಹೆಕ್ಟೇರ್‍ಗೆ 25 ಸಾವಿರ ರೂ.ನಂತೆ ಪರಿಹಾರ ನೀಡ ಲಾಗುತ್ತದೆ. ಮಳೆಗಾಲಕ್ಕೆ ಮುನ್ನ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನೀಡುವ ನಿಟ್ಟಿನಲ್ಲಿ ತುರ್ತು ಕಾರ್ಯ ಕೈಗೊಳ್ಳಲಾಗು ತ್ತದೆ ಎಂದು ಮುಖ್ಯಮಂತ್ರಿಗಳು ನುಡಿದರು.

ಪ್ರಕೃತಿ ವಿಕೋಪದಿಂದ ಜಿಲ್ಲೆಯ ರಸ್ತೆ ಗಳು ಸಂಪೂರ್ಣ ಹಾನಿಯಾಗಿದ್ದು, ರಸ್ತೆಗಳ ದುರಸ್ತಿಗೆ ರೂ.150 ಕೋಟಿ ಅನು ದಾನ ಅವಶ್ಯಕತೆ ಎಂದು ಶಾಸಕರು ಬೋಪಯ್ಯ ತಿಳಿಸಿದ್ದಾರೆ. ಈಗಾಗಲೇ ಲೋಕೋಪಯೋಗಿ ಇಲಾಖೆಗೆ ರೂ.90 ಕೋಟಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ ರೂ.50 ಕೋಟಿ ಅನುದಾನ ವನ್ನು ಬಿಡುಗಡೆ ಮಾಡಲಾಗಿದೆ.ಜಿಲ್ಲೆಯ ಎಲ್ಲ ರಸ್ತೆಗಳನ್ನು ತ್ವರಿತಗತಿಯಲ್ಲಿ ಅಭಿ ವೃದ್ಧಿ ಪಡಿಸಲು ಅಧಿಕಾರಿಗಳು ಕ್ರಮ ಕೈಗೊ ಳ್ಳಬೇಕು. ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸಿದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗ್ರಾಮೀ ಣಾಭಿವೃದ್ಧಿ ಇಲಾಖಾಧಿಕಾರಿಗಳಿಗೆ ಸಿಎಂ ಎಚ್ಚರಿಕೆ ನೀಡಿದರು.

ಜಲಪ್ರಳಯದಿಂದ ಮನೆ ಮಠ ಕಳೆದು ಕೊಂಡ 800 ಕುಟುಂಬಗಳಿಗೆ ಮನೆ ನಿರ್ಮಿಸುವ ಕೆಲಸ ತ್ವರಿತಗತಿಯಲ್ಲಿ ನಡೆ ಯುತ್ತಿದ್ದು, ಸರ್ಕಾರ ಪ್ರಕೃತಿಕ ವಿಕೋಪದ ನಿಯಮವನ್ನು ಬದಿಗಿಟ್ಟು ಎಲ್ಲ ರೀತಿ ಸಹ ಕಾರ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಈ ಬಗ್ಗೆ ಸಂತ್ರಸ್ತರು ಆತಂಕ ಪಡುವ ಅಗತ್ಯವಿಲ್ಲ ಎಂದರು. ಅದೇ ರೀತಿ ಬೀದಿ ಬದಿ ವ್ಯಾಪಾರಿಗಳು ಅಧಿಕ ಬಡ್ಡಿ ಸಾಲ ಮಾಡಿ ತೊಂದರೆ ಅನುಭವಿ ಸುವುದನ್ನು ತಪ್ಪಿಸಲು ಜೀವನ ಸುಧಾರ ಣೆಗಾಗಿ ರೂ. 1 ರಿಂದ 10 ಸಾವಿರದ ವರೆಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭ ವೇದಿಕೆಯಲ್ಲಿ ಸಣ್ಣ ನೀರಾ ವರಿ ಸಚಿವ ಪುಟ್ಟರಾಜು, ಶಾಸಕಿ ವೀಣಾ ಅಚಯ್ಯ, ಮಾಜಿ ಸಚಿವ ಬಿ.ಎ.ಜೀವಿಜಯ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಪಂ ಅಧ್ಯಕ್ಷೆ ಪುಷ್ಪಾರಾಜೇಶ್, ಉಪಾ ಧ್ಯಕ್ಷ ಅಭಿಮನ್ಯುಕುಮಾರ್, ಜಿಪಂ ಸದಸ್ಯ ರಾದ ಕೆ.ಪಿ.ಚಂದ್ರಕಲಾ, ಪಿ.ಎಂ.ಲತೀಶ್, ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಭಾರತಿ, ಡಿಸಿಸಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಜೆಡಿಎಸ್ ಮುಖಂಡ ಶರೀಫ್ , ಐಜಿಪಿ ಉಮೇಶ್ ಕುಮಾರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಪಂ ಸಿಇಒ ಲಕ್ಷ್ಮಿ ಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಉಪಸ್ಥಿತರಿದ್ದರು.

ಸಿಎಂಗೆ ತಾಲೂಕು ಹೋರಾಟ ಸಮಿತಿ ಯಿಂದ ಸನ್ಮಾನ: ಕೊಡಗು ಜಿಲ್ಲೆಯ ಕುಶಾ ಲನಗರ ಹಾಗೂ ಪೊನ್ನಂಪೇಟೆ ಪಟ್ಟಣ ಗಳನ್ನು ಕೇಂದ್ರವಾಗಿರಿಸಿಕೊಂಡು ನೂತನ ವಾಗಿ ಎರಡು ತಾಲೂಕುಗಳನ್ನು ಘೋಷಣೆ ಮಾಡುವ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಭೂ ಕುಸಿತದಿಂದ ಮೃತಪಟ್ಟ ವಿದ್ಯಾರ್ಥಿನಿ ಮಂಜುಳಾ ಕುಟುಂಬಕ್ಕೆ ವಿಶೇಷ ನೆರವು
ಮಡಿಕೇರಿ: ಕೊಡಗಿನಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪದಿಂದಾದ ಭೂ ಕುಸಿತದಲ್ಲಿ ಸಾವನ್ನಪ್ಪಿದ ಮಡಿಕೇರಿ ತಾಲೂಕಿನ ಜೋಡು ಪಾಲ ಗ್ರಾಮದ 10ನೇ ತರಗತಿ ವಿದ್ಯಾರ್ಥಿನಿ ಮಂಜುಳಾಳ ಕುಟುಂಬಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 5 ಲಕ್ಷ ರೂ.ಗಳ ವಿಶೇಷ ಪರಿಹಾರ ಘೋಷಿಸಿದ್ದಾರೆ.
ಭೂಮಿ ಕಳೆದುಕೊಂಡ ಮಂಜುಳಾಳ ಕುಟುಂಬಕ್ಕೆ ಭೂಮಿ ನೀಡಲಾಗುವುದೆಂದು ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಒಂದು ನಿರ್ಧಾರ ಆ ಬಡಕುಟುಂಬದಲ್ಲಿ ಬದುಕಿನ ಭರವಸೆಯ ಆಶಾಕಿರಣ ಮೂಡಿಸಿದೆ. ಜೋಡುಪಾಲದ ತನ್ನ ಅತ್ತೆ ಮಾವನ ಮನೆಯಲ್ಲಿದ್ದ ಈಕೆ ಅವರೊಂದಿಗೆ ಭೂ ಕುಸಿತದಲ್ಲಿ ಕೊಚ್ಚಿ ಹೋಗಿದ್ದಳು.

ಅತ್ತೆ ಮಾವನ ದೇಹ ಸಿಕ್ಕರೂ ಮಂಜುಳಾಳ ದೇಹ ಮಾತ್ರ ಇದುವರೆಗೂ ಸಿಕ್ಕಿಲ್ಲ. ನಿರಂತರ ಹುಡುಕಾಟದ ಹೊರತಾಗಿಯೂ ಆಕೆ ದೇಹ ಪತ್ತೆಯಾಗದ್ದರಿಂದ ಮಂಜುಳಾಳ ಕುಟುಂಬಸ್ಥರು ಆಕೆಯ ದೇಹದ ಪ್ರತಿಕೃತಿ ಮಾಡಿ ಆತ್ಮವನ್ನು ಆಹ್ವಾ ನಿಸಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »