ಮಡಿಕೇರಿ:ಮಡಿಕೇರಿ ಸಮೀಪದ ಬೆಟ್ಟ ತ್ತೂರು ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಪತ್ತೆ ಹಚ್ಚಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು ಮಾಲು ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಬೆಟ್ಟತ್ತೂರು ಗ್ರಾಮದ ನಿವಾಸಿ ಧರ್ಮಪ್ಪ ಆರೋಪಿಯಾಗಿದ್ದು, ಈತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾ ಗಿದೆ. ಆರೋಪಿಯಿಂದ 5.5 ಕೆ.ಜಿ.ಯ 3 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಕಲಂ 20(ಎ) ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ವಿವಿಧೆಡೆ ಒಂಟಿ ಮಹಿಳೆಯರು ವಾಸ ವಿದ್ದರೆ, ಅವರು ತಮ್ಮ ಮಾಹಿತಿಯನ್ನು ನೆರೆ ಹೊರೆ ಯವರಲ್ಲಿ ಹಂಚಿಕೊಳ್ಳುವಂತೆ ಎಸ್‍ಪಿ ಡಾ.ಸುಮನ ಡಿ. ಪೆನ್ನೇಕರ್ ಮನವಿ ಮಾಡಿದ್ದಾರೆ.
ಗಾಂಜಾ ಮತ್ತಿತ್ತರ ಅಕ್ರಮ ಮಾದಕ ವಸ್ತುಗಳ ಸಾಗಾಟ, ಮಾರಾಟ ಮತ್ತು ಬೆಳೆದಿರುವುದು ಕಂಡು ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.