ಪೊನ್ನಂಪೇಟೆಗೆ ತಾಲೂಕು ಭಾಗ್ಯ: ಪದ್ಮಿನಿ ಪೊನ್ನಪ್ಪಗೆ ಸನ್ಮಾನ
ಕೊಡಗು

ಪೊನ್ನಂಪೇಟೆಗೆ ತಾಲೂಕು ಭಾಗ್ಯ: ಪದ್ಮಿನಿ ಪೊನ್ನಪ್ಪಗೆ ಸನ್ಮಾನ

February 28, 2019

ಗೋಣಿಕೊಪ್ಪಲು,: ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿರುವುದರಿಂದ ಶೀಘ್ರವಾಗಿ ತಹಶೀಲ್ದಾರ್ ನೇಮಕಕ್ಕೆ ಹೋರಾಟ ನಡೆಸಬೇಕಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಪೊನ್ನಂಪೇಟೆ ತಾಲೂಕು ರಚನೆ ಘೋಷಣೆಗೆ ಕಾರಣಕರ್ತರಾದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಪದ್ಮಿನಿ ಪೊನ್ನಪ್ಪ ಅವರಿಗೆ ನಗರದ ಗಾಂಧಿ ಪ್ರತಿಮೆ ಆವರಣದಲ್ಲಿ ಪೊನ್ನಂಪೇಟೆ ಹಿರಿಯ ನಾಗರಿಕ ಹೋರಾಟ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕು ರಚನೆ ವಿಚಾರದಲ್ಲಿ ಹಲವು ವರ್ಷ ಗಳಿಂದ ಹೋರಾಟ ನಡೆದಿದ್ದರೂ, ಕೊನೆಯ ಹಂತದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಮಾರ್ಗದರ್ಶನದಂತೆ ಘೋಷಣೆಯಾಗುತ್ತಿರು ವುದು ಸಂತೋಷದ ವಿಚಾರ. ಕುಶಾಲನಗರ ತಾಲೂಕು ಘೋಷಣೆಯೊಂದಿಗೆ ತಹಶೀಲ್ದಾರ್ ಕೂಡ ನಿಯುಕ್ತಿಗೊಂಡಿದ್ದಾರೆ. ಈ ನಿಟ್ಟಿನಲ್ಲಿ ನಾವೂ ತಹಶೀಲ್ದಾರ್ ನೇಮಕಕ್ಕೆ ಹೆಚ್ಚು ಒತ್ತಡ ಹೇರ ಬೇಕು. ಇಚ್ಛಾಶಕ್ತಿ ಕೊರತೆಯಿಂದ ತಾಲೂಕು ಘೋಷಣೆಗೆ ಹಿನ್ನಡೆಯಾಗಿತ್ತು. ಆದರೆ, ಈಗ ಅಧಿಕೃತ ಘೋಷಣೆ ಸ್ವಾಗತಾರ್ಹ, ಹೋರಾಟದ ಮುಂಚೂಣಿಯಲ್ಲಿದ್ದ ಪದ್ಮಿನಿ ಪೊನ್ನಪ್ಪ ಅಭಿನಂದ ನಾರ್ಹರು ಎಂದರು. ಹೋರಾಟ ಸಮಿತಿ ಸಂಚಾಲಕ ಎಂ.ಎಂ. ರವೀಂದ್ರ ಮಾತನಾಡಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸರ್ಕಾರವಿ ದ್ದಾಗ ಸಾಕಷ್ಟು ಮನವಿ ಮಾಡಿಕೊಂಡಿದ್ದರೂ ಸ್ಪಂದನೆ ದೊರಕಿರಲಿಲ್ಲ. ಈಗಿನ ಸರ್ಕಾರ ವಿಶೇಷ ಕಾಳಜಿ ವಹಿಸಿದ ಕಾರಣ ನಮ್ಮ ಹೋರಾಟ ಫಲ ಕಂಡಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ ಅವರು ನೀಡಿದ್ದ ಭರವಸೆ ಈಡೇರಿದ್ದು, ಉತ್ಸಾಹ ಮೂಡಿಸಿದೆ ಎಂದರು.

ಕಾನೂನು ಸಲಹೆಗಾರ ಮತ್ರಂಡ ಅಪ್ಪಚ್ಚು ಮಾತ ನಾಡಿ, ಕಳೆದ ಚುನಾವಣೆ ಸಂದರ್ಭ ಆಗಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾಗ, ಅರುಣ್ ಮಾಚಯ್ಯ ಅವರನ್ನು ಮತ ಹಾಕಿ ಶಾಸಕರನ್ನಾಗಿ ಆಯ್ಕೆ ಮಾಡಿದರೆ ತಾಲೂಕು ರಚನೆ ಮಾಡುವುದಾಗಿ ಹೇಳಿದರು. ಇದರಿಂದ ನಾವು ನೊಂದು ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಟ್ಟಿ ದ್ದೆವು. ಆದರೆ, ಈಗಿನ ಸರ್ಕಾರ ಘೋಷಣೆಗೆ ಮುಂದಾ ಗಿರುವುದರಿಂದ ನಮ್ಮ 12 ವರ್ಷದ ಹೋರಾಟ ಫಲ ಕಂಡಿದೆ ಎಂದರು.

ಇದೇ ಸಂದರ್ಭ ಗಾಂಧಿ ಪ್ರತಿಮೆಗೆ ಮಾಲಾ ರ್ಪಣೆ ಮಾಡಲಾಯಿತು. ಬಳಿಕ ಪದ್ಮಿನಿ ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಮೂಕಳೇರ ಕುಶಾಲಪ್ಪ, ದಯಾ ಚೆಂಗಪ್ಪ ಮಾತನಾಡಿದರು. ಹಿರಿಯ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಪೂಣಚ್ಚ, ಪೊನ್ನಂಪೇಟೆ ಗ್ರಾಪಂ ಅಧ್ಯಕ್ಷೆ ಮೂಕಳೇರ ಸುಮಿತ, ಉಪಾಧ್ಯಕ್ಷೆ ಮಂಜುಳ, ಜಿಪಂ ಸದಸ್ಯೆ ಶ್ರೀಜಾ ಸಾಜಿ, ಪ್ರಮು ಖರಾದ ಎರ್ಮು ಹಾಜಿ, ಚೆಪ್ಪುಡೀರ ಪೊನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.

Translate »