Tag: Kodagu

ಕೊಡಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ನೀರವ ಮೌನ
ಮೈಸೂರು

ಕೊಡಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ನೀರವ ಮೌನ

August 28, 2018

ಮಡಿಕೇರಿ: ಧಾರಾಕಾರ ಮಳೆ, ಭೂಕುಸಿತದಂತಹ ಭಾರೀ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯ ವಿವಿಧೆಡೆ ಶಾಲಾ-ಕಾಲೇಜುಗಳು ಆರಂಭವಾದರೂ ಒಂದು ರೀತಿಯ ನೀರವ ಮೌನ. ಜೊತೆಗೆ ಆತಂಕ. ಲವ ಲವಿಕೆಯಿಂದ ಇರಬೇಕಾದ ವಿದ್ಯಾರ್ಥಿಗಳಲ್ಲಿ ಭಯ ಹಾಗೂ ದುಃಖ ಮನೆ ಮಾಡಿದೆ. ಜಿಲ್ಲೆಯಾದ್ಯಂತ ಈಗಾಗಲೇ ಶಾಲೆಗಳು ಆರಂಭವಾಗಿ ಮೂರ್ನಾಲ್ಕು ದಿನ ಕಳೆದಿದೆ. ಕೆಲವು ಪದವಿ ಪೂರ್ವ ಕಾಲೇಜುಗಳಲ್ಲಿ ಇಂದಿನಿಂದ ತರಗತಿಗಳು ಆರಂಭವಾಗಿವೆ. ಸುಮಾರು 21 ದಿನಗಳ ಬಳಿಕ ಆರಂಭ ವಾದ ತರಗತಿಗೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಮನೆ ಕಳೆದುಕೊಂಡ ಕುಟುಂಬದ…

ರಾಜ್ಯದಲ್ಲಿ ಮಳೆ ಹಾನಿಯ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ
ಮೈಸೂರು

ರಾಜ್ಯದಲ್ಲಿ ಮಳೆ ಹಾನಿಯ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ

August 28, 2018

ಬೆಂಗಳೂರು: ಕೊಡಗು ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳಿನಿಂದ ಬಿದ್ದ ಭಾರೀ ಮಳೆಯಿಂದ ಉಂಟಾಗಿ ರುವ ನಷ್ಟಕ್ಕೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಸನ, ಶಿವ ಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಮೈಸೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಆಗಿರುವ ಹಾನಿಯ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಸುಮಾರು 800 ಮನೆಗಳು…

ಕೊಡಗಿನ ನೆರೆ ಸಂತ್ರಸ್ತರಿಗೆ ಪ್ರತ್ಯೇಕ ವಸತಿ ನೀತಿ ಜಾರಿ
ಮೈಸೂರು

ಕೊಡಗಿನ ನೆರೆ ಸಂತ್ರಸ್ತರಿಗೆ ಪ್ರತ್ಯೇಕ ವಸತಿ ನೀತಿ ಜಾರಿ

August 28, 2018

ಬೆಂಗಳೂರು:  ಮಳೆ-ನೆರೆಯಿಂದ ಸೂರು ಕಳೆದುಕೊಂಡ ಕೊಡ ಗಿನ ಸಂತ್ರಸ್ತರಿಗೆ ಶಾಶ್ವತ ವಸತಿ ಕಲ್ಪಿಸಲು ಪ್ರತ್ಯೇಕ ವಸತಿ ನೀತಿ ಜಾರಿಗೊಳಿಸಲಾಗುವುದು ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಕಳೆದು ಕೊಂಡ 758 ಕುಟುಂಬಗಳಿಗೆ ದೇಶದಲ್ಲೇ ಮಾದರಿಯಾದ ವಸತಿಗಳನ್ನು ನಿರ್ಮಿಸಲಾಗುವುದು ಎಂದರು. ಈಗಾಗಲೇ ಸೂರು ಕಲ್ಪಿಸುವ ಉದ್ದೇಶದಿಂದ 42 ಎಕರೆ ಭೂಮಿ ಗುರುತಿಸಲಾಗಿದೆ, ಕುಟುಂಬದ ಜನಸಂಖ್ಯೆಗೆ ಅನು ಗುಣವಾಗಿ 1-2-3 ಕೊಠಡಿಗಳ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಬಡಾವಣೆಗಳಿಗೆ ಕುಡಿಯುವ ನೀರು,…

ಮಂಗಳೂರು, ಕೊಡಗಿನಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಮೈಸೂರು

ಮಂಗಳೂರು, ಕೊಡಗಿನಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

August 28, 2018

ಮಂಗಳೂರು: ಈಗಾಗಲೇ ಮಹಾಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ನಲುಗಿರುವ ಕೊಡಗು ಹಾಗೂ ಮಂಗಳೂರಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಎಚ್ಚರಿಕೆ ನೀಡಿದೆ. ಈ ಸಂಬಂಧ ಹವಾಮಾನ ಇಲಾಖೆ ಮಂಗಳೂರು ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ಎರಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಮಂಗಳವಾರ ಮತ್ತು ಬುಧವಾರ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಕರಾವಳಿ…

ಕೊಡಗಿನಲ್ಲಿ ಪರಿಹಾರ ಮತ್ತು ಪುನರ್ವಸತಿ: ಮನೆಗೆ ಹಿಂತಿರುಗಿದ ಸಂತ್ರಸ್ತರಿಗೆ ಸ್ವಚ್ಛತೆಯ ಸವಾಲು
ಕೊಡಗು

ಕೊಡಗಿನಲ್ಲಿ ಪರಿಹಾರ ಮತ್ತು ಪುನರ್ವಸತಿ: ಮನೆಗೆ ಹಿಂತಿರುಗಿದ ಸಂತ್ರಸ್ತರಿಗೆ ಸ್ವಚ್ಛತೆಯ ಸವಾಲು

August 28, 2018

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಸುರಿದ ಮರಣ ಮಳೆಯಿಂದ ಪ್ರವಾಹ ಮತ್ತು ಭಾರೀ ಭೂ ಕುಸಿತ ಸಂಭವಿಸಿದ್ದು, ಸಾವಿರಾರು ಮಂದಿ ತಮ್ಮ ಮನೆ, ಮಠ, ಜಾನುವಾರುಗಳನ್ನು ಕಳೆದುಕೊಂಡು ಕೊಡಗಿನ ವಿವಿಧೆಡೆ ಸ್ಥಾಪಿಸಿರುವ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈಗ ಮಳೆಯ ಪ್ರಮಾಣ ಕಡಿಮೆಯಾಗಿದೆ. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರು ತಂಡೋಪತಂಡವಾಗಿ ನಿಧಾನವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಆದರೇನು ಅವರು ಅನುಭವಿಸುವ ತೊಂದರೆ ಮತ್ತು ಹತಾಶೆ ಗಳು ಮುಂದುವರೆದಿವೆ. ಮನೆಯತ್ತ ಸಾಗಿದವರಿಗೆ ಮತ್ತೊಂದು ರೀತಿಯ ಸಮಸ್ಯೆ…

ನೆರೆ ಸಂತ್ರಸ್ತ ಮಹಿಳೆ ಹೃದಯಾಘಾತದಿಂದ ಸಾವು
ಕೊಡಗು

ನೆರೆ ಸಂತ್ರಸ್ತ ಮಹಿಳೆ ಹೃದಯಾಘಾತದಿಂದ ಸಾವು

August 28, 2018

ಗುಡ್ಡೆಹೊಸೂರು: ಮಡಿಕೇರಿ ತಾಲೂಕಿನ ಹಾಲೇರಿ ಕಾಡನಕೊಲ್ಲಿ ನಿವಾಸಿ ಮಣಿಯಪ್ಪನ ದಿ.ಪೂವಯ್ಯ ಅವರ ಪತ್ನಿ ಚಂದ್ರಾವತಿ(65) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಡಿಕೇರಿ ಸುತ್ತಮುತ್ತ ನಡೆದ ಜಲಪ್ರಳಯದಲ್ಲಿ ತಮ್ಮ ಮನೆ ಮತ್ತು 8 ಎಕರೆ ಕಾಫಿ ತೋಟ ಕಳೆದುಕೊಂಡು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ವಾಸಕ್ಕೆ ಇದ್ದ ಒಂದೇ ಮನೆ ಮತ್ತು ಜಾಗ ಹಾಗೂ ತನ್ನ ಪತಿಯನ್ನು ಕಳೆದುಕೊಂಡಿದ್ದ ಚಂದ್ರಾವತಿ ಅತೀವ ನೋವಿನಿಂದ ಇದೀಗ ಹೃದಯಾಘಾತವಾಗಿ ಇಂದು ಬಸವನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ. ತನ್ನ ತಾಯಿ, ತಂದೆ, ಮನೆ ಆಸ್ತಿ ಎಲ್ಲವನ್ನು ಕಳೆದುಕೊಂದ 25…

ಮಡಿಕೇರಿ ನಿರಾಶ್ರಿತರ ಕೇಂದ್ರದಲ್ಲಿ ಮೊಳಗಿತು ಮಂಗಳವಾದ್ಯ
ಮೈಸೂರು

ಮಡಿಕೇರಿ ನಿರಾಶ್ರಿತರ ಕೇಂದ್ರದಲ್ಲಿ ಮೊಳಗಿತು ಮಂಗಳವಾದ್ಯ

August 27, 2018

ಮಡಿಕೇರಿ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಜನರು ತತ್ತರಿಸಿದ್ದರು. ಮನೆ ಕಳೆದುಕೊಂಡು ಚಿಂತಾಕ್ರಾಂತರಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಹಲವು ಕುಟುಂಬಗಳು ಆಸ್ತಿ-ಪಾಸ್ತಿ ಕಳೆದುಕೊಂಡು ಚಿಂತೆಯಲ್ಲಿದ್ದ ಸಂತ್ರಸ್ತರಿಗೆ, ಭರವಸೆ ಕಲ್ಪಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ಮುಂದುವರೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಸಂತ್ರಸ್ತ ಕುಟುಂಬವೊಂದರ ಮನೆ ಮಗಳ ಮದುವೆ ಸಡಗರ, ಸಂಭ್ರಮದಿಂದ ನಿರಾಶ್ರಿತ ಕೇಂದ್ರದಲ್ಲಿ ನಡೆಯಿತು. ಮಕ್ಕಂದೂರು ಗ್ರಾಮದ ರಾಟೆ ಮನೆ ಪೈಸಾರಿ ನಿವಾಸಿ ಆರ್.ಮಂಜುಳಾ ಮತ್ತು ಕೇರಳದ ಕೂತುಪರಂಬು ನಿವಾಸಿ ರಜೀಶ್ ಅವರ ವಿವಾಹ ಈ…

ಕೊಡಗಿನ ನಿರಾಶ್ರಿತರ ಪರಿಹಾರ ಕೇಂದ್ರದ ನಿರ್ವಹಣೆಯಲ್ಲಿ ಗೊಂದಲದ ಗೂಡಾಗಿರುವ ಜಿಲ್ಲಾಡಳಿತ
ಮೈಸೂರು

ಕೊಡಗಿನ ನಿರಾಶ್ರಿತರ ಪರಿಹಾರ ಕೇಂದ್ರದ ನಿರ್ವಹಣೆಯಲ್ಲಿ ಗೊಂದಲದ ಗೂಡಾಗಿರುವ ಜಿಲ್ಲಾಡಳಿತ

August 27, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮರಣ ಮಳೆಯಿಂದ ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ವಿವಿಧೆಡೆ ತೆರೆಯಲಾಗಿರುವ 31 ನಿರಾಶ್ರಿತ ಕೇಂದ್ರಗಳಲ್ಲಿ ಒಟ್ಟು 3824 ಮಂದಿ ಆಶ್ರಯ ಪಡೆದಿದ್ದಾರೆ. ಹಲವು ಮಂದಿ ಸಂತ್ರಸ್ತರು ಸಂಬಂಧಿಕರ ಮನೆ ಸೇರಿದರೆ, ಮತ್ತೆ ಕೆಲವರು ಹೋಂ ಸ್ಟೇಗಳಲ್ಲಿ ಇಂದಿಗೂ ಆಶ್ರಯ ಪಡೆದಿದ್ದಾರೆ. ಆರ್‍ಎಸ್‍ಎಸ್‍ನ ಅಂಗಸಂಸ್ಥೆ ಸೇವಾ ಭಾರತೀಯ 9 ನಿರಾಶ್ರಿತ ಕೇಂದ್ರಗಳಲ್ಲಿ 1500 ಮಂದಿ ಆಶ್ರಯ ಪಡೆದಿದ್ದು, ಈ ಕೇಂದ್ರದಲ್ಲಿರುವವರಿಗೆ ಮಾತ್ರವೇ ಗುರುತಿನ ಚೀಟಿ ನೀಡಲಾಗಿದೆ. ಈ ಕೇಂದ್ರಕ್ಕೆ ದಾಖಲಾಗಿರುವ ಪ್ರತಿಯೊಬ್ಬರ ವಿವರವನ್ನು ಕೂಡ ದಾಖಲು…

ಕೊಡಗಿನ ಭೂ ಕುಸಿತ ಪ್ರದೇಶಗಳ ಭೇಟಿಗೆ ಪ್ರವಾಸಿಗರಿಗೆ ನಿಷೇಧ
ಮೈಸೂರು

ಕೊಡಗಿನ ಭೂ ಕುಸಿತ ಪ್ರದೇಶಗಳ ಭೇಟಿಗೆ ಪ್ರವಾಸಿಗರಿಗೆ ನಿಷೇಧ

August 27, 2018

ಮಡಿಕೇರಿ: ಕೊಡಗಿನಲ್ಲಿ ಪ್ರಕೃತಿ ವಿಕೋಪ ದಿಂದ ತೀವ್ರ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿರುವುದು ಪ್ರವಾಸಿಗರ ಜೀವ ಹಾನಿಗೆ ಕಾರಣವಾಗಬಹುದೆಂದು ಪರಿಗಣಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿ ರುವ ಧಾರಾಕಾರ ಮಳೆಯಿಂದ ಉಂಟಾಗುತ್ತಿರುವ ಪ್ರವಾಹ, ಭೂ ಕುಸಿತ ಮತ್ತು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾನಿಯಾಗಿದ್ದು, ಅಪಾಯದ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲಿನ ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ…

ಅಂಗನವಾಡಿ ಕಾರ್ಯಕರ್ತೆಯರಿಂದ ಕೊಡಗಿನ ನಿರಾಶ್ರಿತರಿಗೆ ನೆರವು
ಮೈಸೂರು

ಅಂಗನವಾಡಿ ಕಾರ್ಯಕರ್ತೆಯರಿಂದ ಕೊಡಗಿನ ನಿರಾಶ್ರಿತರಿಗೆ ನೆರವು

August 27, 2018

ಮೈಸೂರು:  ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಬದುಕನ್ನೇ ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಬಡವ-ಬಲ್ಲಿದ ಎನ್ನದೆ ಎಲ್ಲರೂ ಕೈಜೋಡಿಸುತ್ತಿದ್ದಾರೆ. ಮೈಸೂರಿನ ಪುರಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿರುವ ನೆರವು ಸಂಗ್ರಹ ಕೇಂದ್ರಕ್ಕೂ ಸಹೃದಯಿಗಳು ಅಗತ್ಯ ವಸ್ತುಗಳನ್ನು ತಂದು ನೀಡುತ್ತಿದ್ದಾರೆ. ಹಾಗೆಯೇ ಪಿರಿಯಾಪಟ್ಟಣ ತಾಲೂಕಿನ ಅನೇಕ ಅಂಗನವಾಡಿ ಕಾರ್ಯಕರ್ತರು ಹಾಗೂ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಸದಸ್ಯರು ಸುಮಾರು 20 ಸಾವಿರ ರೂ.ಗಳನ್ನು ಒಟ್ಟುಗೂಡಿಸಿ, ಅದರಲ್ಲಿ 40 ಬ್ಲಾಂಕೆಟ್‍ಗಳನ್ನು ಖರೀದಿಸಿ, ನೆರವು ಸಂಗ್ರಹ ಕೇಂದ್ರಕ್ಕೆ ನೀಡಿದ್ದಾರೆ. ತಮ್ಮ ಅತ್ಯಲ್ಪ ವೇತನದಲ್ಲಿ ಕುಟುಂಬ ನಿರ್ವಹಿಸುವುದೇ…

1 67 68 69 70 71 84
Translate »