ಕೊಡಗಿನ ನೆರೆ ಸಂತ್ರಸ್ತರಿಗೆ ಪ್ರತ್ಯೇಕ ವಸತಿ ನೀತಿ ಜಾರಿ
ಮೈಸೂರು

ಕೊಡಗಿನ ನೆರೆ ಸಂತ್ರಸ್ತರಿಗೆ ಪ್ರತ್ಯೇಕ ವಸತಿ ನೀತಿ ಜಾರಿ

August 28, 2018

ಬೆಂಗಳೂರು:  ಮಳೆ-ನೆರೆಯಿಂದ ಸೂರು ಕಳೆದುಕೊಂಡ ಕೊಡ ಗಿನ ಸಂತ್ರಸ್ತರಿಗೆ ಶಾಶ್ವತ ವಸತಿ ಕಲ್ಪಿಸಲು ಪ್ರತ್ಯೇಕ ವಸತಿ ನೀತಿ ಜಾರಿಗೊಳಿಸಲಾಗುವುದು ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಕಳೆದು ಕೊಂಡ 758 ಕುಟುಂಬಗಳಿಗೆ ದೇಶದಲ್ಲೇ ಮಾದರಿಯಾದ ವಸತಿಗಳನ್ನು ನಿರ್ಮಿಸಲಾಗುವುದು ಎಂದರು.

ಈಗಾಗಲೇ ಸೂರು ಕಲ್ಪಿಸುವ ಉದ್ದೇಶದಿಂದ 42 ಎಕರೆ ಭೂಮಿ ಗುರುತಿಸಲಾಗಿದೆ, ಕುಟುಂಬದ ಜನಸಂಖ್ಯೆಗೆ ಅನು ಗುಣವಾಗಿ 1-2-3 ಕೊಠಡಿಗಳ ಮನೆಗಳನ್ನು ನಿರ್ಮಾಣ ಮಾಡಲಾಗುವುದು.

ಬಡಾವಣೆಗಳಿಗೆ ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸರಬರಾಜು ಸೇರಿ ದಂತೆ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಿ ಸಂತ್ರಸ್ತರಿಗೆ ತೃಪ್ತಿಯಾಗುವಂತಹ ವಸತಿಗಳನ್ನು ನೀಡಲಾಗುವುದು. ಒಂದು ವೇಳೆ ಸಂತ್ರಸ್ತರು ತಾವು, ತಮ್ಮ ಜಮೀನು ಇಲ್ಲವೆ, ಸ್ವಂತ ನಿವೇಶನದಲ್ಲೇ ಮನೆ ನಿರ್ಮಿಸಿಕೊಳ್ಳಲು ಆಸಕ್ತಿ ಹೊಂದಿದ್ದರೆ ಸರ್ಕಾರದ ಕಾರ್ಯಕ್ರಮದಡಿಯೇ ಅವರುಗಳ ಜಾಗದಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಲಾಗುವುದು. ಭಾಗಶಃ ಹಾನಿಯಾದ ಮನೆಗಳಿಗೆ ಪೂರಕ ಪರಿಹಾರ ನೀಡಲಾಗುವುದು, ಇದಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸಿ ನೀಲ ನಕಾಶೆ ಸಿದ್ಧಪಡಿಸಲಾಗಿದೆ. ಕೊಡಗನ್ನು ಪುನರ್ ನಿರ್ಮಾಣ ಮಾಡಬೇಕಿದೆ, ಈ ಕಾರ್ಯದಲ್ಲಿ ವಸತಿ ಇಲಾಖೆ ಪಾತ್ರ ಮಹತ್ವದ್ದಾಗಿದೆ ಎಂದರು. ಮುಖ್ಯಮಂತ್ರಿ ವಸತಿ ಯೋಜನೆಯಡಿ 3 ತಿಂಗಳಲ್ಲಿ 49,000 ಮನೆಗಳ ನಿರ್ಮಾಣ ಆರಂಭಿಸಲಾಗುವುದು. ಇದಕ್ಕಾಗಿ ಬೆಂಗಳೂರು ಸುತ್ತ 257 ಎಕರೆ ಭೂಮಿ ಗುರುತಿಸಿ, ಎ-ಬಿ-ಸಿ ಶ್ರೇಣಿ ಗಳಾಗಿ ವಿಂಗಡಿಸಲಾಗಿದೆ ಎಂದರು.

Translate »