Tag: Kodagu

ಚೇರಂಬಾಣೆಯಿಂದ ತಾಳತ್‍ಮನೆಗೆ ಸಂತ್ರಸ್ತರ ಸ್ಥಳಾಂತರ: ಸೌಲಭ್ಯಗಳಿಲ್ಲದೇ ಸಂತ್ರಸ್ತರ ಪರದಾಟ
ಕೊಡಗು

ಚೇರಂಬಾಣೆಯಿಂದ ತಾಳತ್‍ಮನೆಗೆ ಸಂತ್ರಸ್ತರ ಸ್ಥಳಾಂತರ: ಸೌಲಭ್ಯಗಳಿಲ್ಲದೇ ಸಂತ್ರಸ್ತರ ಪರದಾಟ

August 27, 2018

ನಾಪೋಕ್ಲು: ಇಲ್ಲಿಗೆ ಸಮೀಪದ ಚೇರಂಬಾಣೆ ಪ್ರೌಢಶಾಲಾ ಆವರಣದಲ್ಲಿ ಕಳೆದ ಒಂಬತ್ತು ದಿನಗಳಿಂದ ಪರಿಹಾರ ಕೇಂದ್ರದಲ್ಲಿ ತಂಗಿದ್ದ ಸಂತ್ರಸ್ತರನ್ನು ಭಾನುವಾರ ದಿಢೀರಾಗಿ ತಾಳತ್ತಮನೆ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿದ್ದರಿಂದ ತೊಂದರೆ ಉಂಟಾಗಿದೆ ಎಂದು ಎರಡನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ದಿನೇಶ್ ಹಾಗೂ ಕಾರ್ತಿಕ್ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಚೇರಂಬಾಣೆ ಪ್ರೌಢಶಾಲೆಯಿಂದ ಸಂತ್ರಸ್ತರನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದ್ದು, ತಾಳತ್ತಮನೆಯ ಸರ್ಕಾರಿ ಶಾಲೆಗೆ ತೆರಳಿದ ಸಂತ್ರಸ್ತರು ಯಾವೊಂದು ವ್ಯವಸ್ಥೆಯು ಇಲ್ಲದೆ ಸಮಸ್ಯೆಯಲ್ಲಿ ಸಿಲುಕಿರುವ ಬಗ್ಗೆ ಮದೆನಾಡು ಗ್ರಾಮಪಂಚಾಯಿತಿ ಅಧ್ಯಕ್ಷರ ಹಾಗೂ ರೆವಿನ್ಯೂ ಅಧಿಕಾರಿಗಳ ಗಮನಕ್ಕೆ…

ಕೊಡಗಿಗೆ 12 ತಂತ್ರಜ್ಞರೊಂದಿಗೆ ಎ.ಹೆಚ್.ವಿಶ್ವನಾಥ್ ಭೇಟಿ
ಕೊಡಗು

ಕೊಡಗಿಗೆ 12 ತಂತ್ರಜ್ಞರೊಂದಿಗೆ ಎ.ಹೆಚ್.ವಿಶ್ವನಾಥ್ ಭೇಟಿ

August 27, 2018

ಜಿಲ್ಲೆ ಪುನರ್‍ನಿರ್ಮಾಣ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧಾರ ಮಡಿಕೇರಿ: ಸತತ ಮಳೆಯಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ಕುರಿತು ಊಹಾಪೋಹದ ವರದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಶಾಸಕ ಎ.ಹೆಚ್. ವಿಶ್ವನಾಥ್ ನೇತೃತ್ವ ದಲ್ಲಿ 12 ತಂತ್ರಜ್ಞರ ತಂಡ ಮಡಿಕೇರಿಗೆ ಭೇಟಿ ನೀಡಿ ಮಾಹಿತಿ ಪಡೆದಿದೆ. ಮಳೆಯ ರುದ್ರನರ್ತನದಿಂದ ಕಂಗೆಟ್ಟ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಕಾರ್ಯ ಹೇಗೆ ನಡೆಯಬೇಕು? ಈಗಿನ ಪರಿಸ್ಥಿತಿಗೆ ಏನು ಕಾರಣ? ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗ…

ರಾಜ್ಯ ಸರ್ಕಾರಿ ನೌಕರರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 102 ಕೋಟಿ ರೂ.
ಕೊಡಗು

ರಾಜ್ಯ ಸರ್ಕಾರಿ ನೌಕರರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 102 ಕೋಟಿ ರೂ.

August 27, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾ ಗಿದ್ದು, ಸಾವಿರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಒಂದು ದಿನದ ವೇತನ 102 ಕೋಟಿ ರೂ.ವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ರಾಮು ತಿಳಿಸಿದ್ದಾರೆ. ನಗರದ ಹೋಟೆಲ್‍ವೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ…

ಮನೆ ಇಲ್ಲ… ತೋಟವೂ ಹೋಯಿತು… ಮುಂದೇನು? ಇಗ್ಗೋಡ್ಲು ಬೆಳೆಗಾರರ ಕಣ್ಣೀರ ಕಥೆ
ಕೊಡಗು

ಮನೆ ಇಲ್ಲ… ತೋಟವೂ ಹೋಯಿತು… ಮುಂದೇನು? ಇಗ್ಗೋಡ್ಲು ಬೆಳೆಗಾರರ ಕಣ್ಣೀರ ಕಥೆ

August 27, 2018

ಸೋಮವಾರಪೇಟೆ: ತಮ್ಮದೇ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು, ಸ್ವಂತ ಮನೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಕುಟುಂಬ ಇದೀಗ ಎಲ್ಲವನ್ನೂ ಕಳೆದುಕೊಂಡು ಬರಿಗೈಯಲ್ಲಿ ನಿಂತಿದೆ. ಮನೆಯಿಲ್ಲ, ತೋಟವಿಲ್ಲ, ಮುಂದೇನೆಂಬ ಬಗ್ಗೆ ಗೊತ್ತಿಲ್ಲದ ಈ ಕುಟುಂಬ ಉಟ್ಟ ಬಟ್ಟೆ ಯಲ್ಲೇ ಮನೆಯಿಂದ ಹೊರಬಂದ ಪರಿಣಾಮ ಜೀವ ಮಾತ್ರ ಉಳಿದಿದೆ. ಮಿಕ್ಕಿ ದೆಲ್ಲವೂ ಮಣ್ಣುಪಾಲಾಗಿದೆ. ಇಂತಹ ನತದೃಷ್ಟ ಕುಟುಂಬಗಳು ತಾಲೂಕಿನ ಮಾದಾಪುರ ಸಮೀಪದ ಇಗ್ಗೋ ಡ್ಲಿನಲ್ಲಿದ್ದವು. ಇದೀಗ ಇಲ್ಲವಾಗಿವೆ. ಇಗ್ಗೋಡ್ಲು ಗ್ರಾಮದ ಜಗ್ಗಾರಂಡ ಕಾವೇರಪ್ಪ-ಫ್ಯಾನ್ಸಿ, ಜಗ್ಗಾರಂಡ ದೇವಯ್ಯ-ನಳಿನಿ ಮತ್ತು ರೀತ್‍ಕುಮಾರ್ ಅವರ…

ತೀವ್ರ ಹಾನಿ ಪ್ರದೇಶಕ್ಕೆ ಪ್ರವಾಸಿಗರ ಭೇಟಿ, ಕ್ರಮಕ್ಕೆ ಸೂಚನೆ
ಕೊಡಗು

ತೀವ್ರ ಹಾನಿ ಪ್ರದೇಶಕ್ಕೆ ಪ್ರವಾಸಿಗರ ಭೇಟಿ, ಕ್ರಮಕ್ಕೆ ಸೂಚನೆ

August 27, 2018

ಮಡಿಕೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುತ್ತಿರುವ ಪ್ರವಾಹ, ಭೂ ಕುಸಿತ ಮತ್ತು ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾನಿಯಾಗಿದ್ದು, ಅಪಾಯದ ಮಟ್ಟದಲ್ಲಿರುವ ಹಿನ್ನಲೆಯಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲಿನ ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ ಗೃಹಗಳಲ್ಲಿ ಆಗಸ್ಟ್ 31 ರವರೆಗೆ ಪ್ರವಾಸಿಗರ ವಾಸ್ತವ್ಯ ವನ್ನು ರದ್ದುಪಡಿಸಲು ಈ ಹಿಂದೆ ಆದೇಶಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿನ ಕೆಲವು ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ…

ನೆರೆ ಸಂತ್ರಸ್ತರಿಗೆ ಆದಿಚುಂಚನಗಿರಿ ಮಠ ನೆರವು
ಕೊಡಗು

ನೆರೆ ಸಂತ್ರಸ್ತರಿಗೆ ಆದಿಚುಂಚನಗಿರಿ ಮಠ ನೆರವು

August 27, 2018

ಮಡಿಕೇರಿ:  ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಹಾಮಳೆಯ ಆರ್ಭಟದಿಂದ ಉಂಟಾಗಿರುವ ಪ್ರಾಕೃತಿಕ ವಿಕೋಪಗಳಿಂದ ನಲುಗಿರುವ ಗ್ರಾಮಗಳಲ್ಲಿನ ಪರಿಹಾರ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಶ್ರೀ ಆದಿಚುಂಚನಗಿರಿ ಮಠ ಕೈಜೋಡಿಸಿ ಶ್ರಮಿಸಲಿದೆಯೆಂದು ಶ್ರೀ ಡಾ.ನಿರ್ಮಲಾನಂದ ಮಹಾ ಸ್ವಾಮೀಜಿ ತಿಳಿಸಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ, ಮಡಿಕೇರಿಯ ಗೌಡ ಸಮಾಜದ ಸಭಾಂಗಣದಲ್ಲಿ ಶ್ರೀಮಠದಿಂದ ಆಯೋಜಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಆದಿಚುಂಚನಗಿರಿ ಮಠಾಧೀಶ ಶ್ರೀ ಡಾ.ನಿರ್ಮಲಾನಂದ ಮಹಾ ಸ್ವಾಮೀಜಿ, ಕೊಡಗಿನಲ್ಲಿ ಭಾರೀ ಮಳೆಯಿಂದ ಪ್ರಾಕೃ…

ಇದ್ದುದೆಲ್ಲವ ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಕೊಡಗಿನ ಈ ಕುಟುಂಬದ ಸ್ಥಿತಿಯಂತೂ ಕರುಣಾಜನಕ…
ಮೈಸೂರು

ಇದ್ದುದೆಲ್ಲವ ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಕೊಡಗಿನ ಈ ಕುಟುಂಬದ ಸ್ಥಿತಿಯಂತೂ ಕರುಣಾಜನಕ…

August 26, 2018

ಮೈಸೂರು: ಕೊಡಗಿನಲ್ಲಿ ತಿಂಗಳು ಗಟ್ಟಲೆ ಸುರಿದ ಮಳೆ, ಅದರಿಂದ ಉಂಟಾದ ಪ್ರವಾಹ, ಇದರಿಂದ ಕುಸಿದು ಬಿದ್ದ ಸಾವಿರಾರು ಎಕರೆ ಬೆಟ್ಟ-ಗುಡ್ಡ, ಸಾವಿರಾರು ಮಂದಿಯ ಸ್ವಾಭಿಮಾನದ ಬದುಕನ್ನು ನುಚ್ಚು ನೂರು ಮಾಡಿದೆ. ಕಷ್ಟ ಎಂದವರಿಗೆ ಕೈ ಎತ್ತಿ ಕೊಡುತ್ತಿದ್ದವರು ಮುಂದಿನ ದಾರಿ ಕಾಣದೆ ಕಂಗಾಲಾಗಿ ಕುಳಿತಿದ್ದಾರೆ. ಈ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅಕ್ಷರಶಃ ಬೀದಿಗೆ ಬಿದ್ದಿರುವ ತುಂಬು ಕುಟುಂಬವೊಂದರ ದುಸ್ಥಿತಿ ನೋಡಿದರೆ ಕಲ್ಲು ಹೃದಯಿಗಳಲ್ಲೂ ಮರುಕ ಮಡುಗಟ್ಟುತ್ತದೆ. ಮಡಿಕೇರಿ ಸಮೀಪದ ಮಕ್ಕಂದೂರು ಬಳಿಯ ಮೇಘತಾಳು ಗ್ರಾಮದ ತಂಬುಕುತ್ತಿರ ಕುಟುಂಬ,…

ನಿರಾಶ್ರಿತರಿಗೆ 50 ಸಾವಿರ ಆಹಾರ ಕಿಟ್ ವಿತರಣೆಗೆ ಚಾಲನೆ
ಕೊಡಗು

ನಿರಾಶ್ರಿತರಿಗೆ 50 ಸಾವಿರ ಆಹಾರ ಕಿಟ್ ವಿತರಣೆಗೆ ಚಾಲನೆ

August 26, 2018

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂತ್ರಸ್ಥರಾಗಿ ರುವ 50 ಸಾವಿರ ಕುಟುಂಬಗಳಿಗೆ ‘ವಿಶೇಷ ಅನ್ನಭಾಗ್ಯ ಯೋಜನೆ ಯಡಿ ಆಹಾರ ಕಿಟ್’ಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಖಾನ್ ವಿತರಣೆ ಮಾಡಿದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿನಲ್ಲಿ ಸಾಂಕೇತಿಕವಾಗಿ ನಡೆದ ‘ಆಹಾರ ಕಿಟ್’ ವಿತರಿಸಿ ಮಾತನಾಡಿದ ಸಚಿವರು, ನೆರೆಗೆ ಸಿಲುಕಿ ಸಂತ್ರಸ್ಥರಾಗಿರುವ ಕುಟುಂಬಗಳಿಗೆ 15 ದಿನದಲ್ಲಿ ತಾತ್ಕಾಲಿಕ ಪಡಿತರ ಚೀಟಿ ವಿತರಿಸಲಾಗುವುದು ಎಂದು ಅವರು ತಿಳಿಸಿದರು. ಆಹಾರ ಕಿಟ್‍ನಲ್ಲಿ 10 ಕೆ.ಜಿ ಅಕ್ಕಿ,…

ಕೊಡಗಿನ ನೆರೆ ಸಂತ್ರಸ್ತ ಪ್ರದೇಶಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಮೈಸೂರು

ಕೊಡಗಿನ ನೆರೆ ಸಂತ್ರಸ್ತ ಪ್ರದೇಶಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

August 25, 2018

ಮಡಿಕೇರಿ: ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಸಚಿವರು ಮೈಸೂರಿನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹಾರಂಗಿಯ ಹೆಲಿಪ್ಯಾಡ್‍ನಲ್ಲಿ ಇಂದು ಬೆಳಿಗ್ಗೆ ಬಂದಿಳಿದರು. ಈ ವೇಳೆ ಜಿಲ್ಲಾಧಿಕಾರಿ ಶ್ರೀವಿದ್ಯಾ, ಸಂಸದ ಪ್ರತಾಪ್ ಸಿಂಹ ಹಾಗೂ ಸೇನಾಧಿಕಾರಿಗಳು ಅವರನ್ನು ಬರಮಾಡಿಕೊಂಡರು. ಸಚಿವರು ಕುಶಾಲನಗರಕ್ಕೆ ಭೇಟಿ ನೀಡಬೇಕಿತ್ತಾದರೂ, ಅಲ್ಲಿ ಹಾರಂಗಿ ಜಲಾಶಯದಿಂದ ಹೊರ ಬಿಟ್ಟ ನೀರು ಮನೆಗಳಿಗೆ ನುಗ್ಗಿರುವುದು ಬಿಟ್ಟರೆ, ದೊಡ್ಡ ಮಟ್ಟದ ಅನಾಹುತಗಳು ಸಂಭವಿಸಿಲ್ಲ…

ಕೊಡಗಿನಲ್ಲಿ ಇಂದಿನಿಂದ ಮಳೆ
ಮೈಸೂರು

ಕೊಡಗಿನಲ್ಲಿ ಇಂದಿನಿಂದ ಮಳೆ

August 25, 2018

ಬೆಂಗಳೂರು: ಕೊಡಗು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಮಳೆ ಸುರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಇಲಾಖೆ ಎಚ್ಚರಿಕೆ ನೀಡಿದೆ.ಬಂಗಾಳಕೊಲ್ಲಿ ಒಡಿಶಾ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಸುಮಾರು 30ರಿಂದ 35 ಮಿ.ಮೀ.ವರೆಗೂ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ. ಕಳೆದ 7 ದಿನಗಳ ಮಳೆ ಪ್ರಮಾಣ ಗಮನಿಸಿದರೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕ್ರಮೇಣ ಮಳೆ ಕಡಿಮೆ ಯಾಗಿದೆ….

1 68 69 70 71 72 84
Translate »