ಕೊಡಗಿನಲ್ಲಿ ಇಂದಿನಿಂದ ಮಳೆ
ಮೈಸೂರು

ಕೊಡಗಿನಲ್ಲಿ ಇಂದಿನಿಂದ ಮಳೆ

August 25, 2018

ಬೆಂಗಳೂರು: ಕೊಡಗು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಮಳೆ ಸುರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಇಲಾಖೆ ಎಚ್ಚರಿಕೆ ನೀಡಿದೆ.ಬಂಗಾಳಕೊಲ್ಲಿ ಒಡಿಶಾ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಸುಮಾರು 30ರಿಂದ 35 ಮಿ.ಮೀ.ವರೆಗೂ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ. ಕಳೆದ 7 ದಿನಗಳ ಮಳೆ ಪ್ರಮಾಣ ಗಮನಿಸಿದರೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕ್ರಮೇಣ ಮಳೆ ಕಡಿಮೆ ಯಾಗಿದೆ. ಮುಂದಿನ 24 ಗಂಟೆಯಲ್ಲಿ ಬಂಗಾಳಕೊಲ್ಲಿ ಒಡಿಶಾ ಭಾಗದಲ್ಲಿ ವಾಯು ಭಾರ ಕುಸಿತ ಆಗುವ ಸಾಧ್ಯತೆ ಇದೆ. ವಾಯು ಭಾರ ಕುಸಿತವಾದರೆ ಮೋಡಗಳು ಮತ್ತೆ ಘಟ್ಟ ಪ್ರದೇಶದ ಕಡೆ ಚಲಿಸಲಿವೆ.

ಕಳೆದ ಮೂರು ದಿನಗಳಿಂದ ಮಲೆ ನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಬಿಡುವು ನೀಡಿತ್ತು. ಇದರಿಂದ ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರ ಹಾಗೂ ಭೂ ಕುಸಿತದಿಂದ ನಾಪತ್ತೆ ಯಾದ ಜನರ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಬಿಡುವು ನೀಡಿದ್ದ ಮಳೆ ಮತ್ತೆ ಮುಂದುವರಿದರೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುವ ಅತಂಕ ಇದ್ದು, ಮತ್ತಷ್ಟು ಭೂ ಕುಸಿತ ಸಂಭವಿಸುವ ಭಯ ಜನರನ್ನು ಕಾಡುತ್ತಿದೆ.

Translate »