Tag: Kodagu

ಕೊಡಗಿನ ಪ್ರಕೃತಿ ವಿಕೋಪದಲ್ಲಿ 10 ಮಂದಿ ಸಾವು: 9 ಮಂದಿ ನಾಪತ್ತೆ ಅವರಲ್ಲಿ ನಾಲ್ವರು ಬದುಕಿರುವ ಸಾಧ್ಯತೆ ಕಡಿಮೆ: ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು
ಕೊಡಗು

ಕೊಡಗಿನ ಪ್ರಕೃತಿ ವಿಕೋಪದಲ್ಲಿ 10 ಮಂದಿ ಸಾವು: 9 ಮಂದಿ ನಾಪತ್ತೆ ಅವರಲ್ಲಿ ನಾಲ್ವರು ಬದುಕಿರುವ ಸಾಧ್ಯತೆ ಕಡಿಮೆ: ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು

August 25, 2018

ಮಡಿಕೇರಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಇದುವರೆಗೆ ಒಟ್ಟು 10 ಮಂದಿ ಸಾವಿಗೀಡಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ನಾಲ್ವರು ಬದುಕಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ ಇದೆ. ನಾಪತ್ತೆಯಾಗಿರುವವರ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇ ಶಕಿ ನೀಲಮಣಿ ರಾಜು ತಿಳಿಸಿದರು. ಮಡಿಕೇರಿಯ ಪೊಲೀಸ್ ವರಿಷ್ಠಾಧಿಕಾರಿ ಗಳ ಕಚೇರಿಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರಕೃತಿ ವಿಕೋಪಕ್ಕೆ ತುತ್ತಾದವರ ನೆರವಿಗಾಗಿ ಪೊಲೀಸ್ ಇಲಾಖೆ ವತಿಯಿಂದ ಸಿಬ್ಬಂದಿಗಳ ಒಂದು ದಿನದ…

ಮುಳುಗಿದ ಬದುಕಲಿ ಚಿಗುರಿದ ಆಶಾಕಿರಣ
ಕೊಡಗು

ಮುಳುಗಿದ ಬದುಕಲಿ ಚಿಗುರಿದ ಆಶಾಕಿರಣ

August 25, 2018

ಇಬ್ಬರು ಯುವತಿಯರಿಗೆ ನಿಗದಿತ ದಿನದಂದೇ ವಿವಾಹ ಸಚಿವ ಸಾ.ರಾ.ಮಹೇಶ್, ಸೇವಾ ಭಾರತಿ ನೆರವು ಮಡಿಕೇರಿ:  ಮಹಾಮಳೆಯ ವಕ್ರದೃಷ್ಠಿಗೆ ತುತ್ತಾಗಿ ಮನೆ ಮಾತ್ರವಲ್ಲದೆ ಮದುವೆಯೂ ಅತಂತ್ರಗೊಂಡು ಮಡಿಕೇರಿಯ ನಿರಾಶ್ರಿತರ ಶಿಬಿರ ಸೇರಿದ್ದ ಇಬ್ಬರು ಹೆಣ್ಣು ಮಕ್ಕಳ ಬಾಳಲ್ಲಿ ಹೊಸ ಆಶಾಕಿರಣ ಉದಯಿ ಸಿದೆ. ಆರ್‍ಎಸ್‍ಎಸ್ ಅಂಗಸಂಸ್ಥೆ ಸೇವಾ ಭಾರತಿಯ ಆಶ್ರಯದಲ್ಲಿರುವ ರಂಜಿತಾ ಮತ್ತು ಮಂಜುಳಾ ಅವರು ಮದುವೆಯ ದಿನ ನಿಗದಿಪಡಿಸಿರುವ ಶುಭ ಘಳಿಗೆಯ ಲ್ಲಿಯೇ ವಿವಾಹ ಮಾಡಲು ಸೇವಾ ಭಾರತಿ ನಿರ್ಧರಿಸಿದೆ. ನಗರದ ಓಂಕಾರೇಶ್ವರ ದೇವಾ ಲಯದಲ್ಲಿ ಆರತಕ್ಷತೆ…

ಕೇಂದ್ರ ರಕ್ಷಣಾ ಸಚಿವರಿಂದ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ
ಕೊಡಗು

ಕೇಂದ್ರ ರಕ್ಷಣಾ ಸಚಿವರಿಂದ ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ಸಮೀಕ್ಷೆ

August 25, 2018

ಕುಶಾಲನಗರ: ಇಲ್ಲಿನ ನೆರೆ ಪೀಡಿತ ಪ್ರದೇಶಗಳನ್ನು ಶುಕ್ರವಾರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವೈಮಾನಿಕ ಸಮೀಕ್ಷೆ ನಡೆಸಿ ಪರಿಶೀಲಿಸಿದರು. ಕೊಡಗಿಗೆ ಆಗಮಿಸಿದ ಕೇಂದ್ರ ಸಚಿವರನ್ನು ಜಿಲ್ಲಾಡಳಿತದ ವತಿಯಿಂದ ಹಾರಂಗಿ ಹೆಲಿಪ್ಯಾಡ್ ನಲ್ಲಿ ಬರಮಾಡಿ ಕೊಳ್ಳಲಾಯಿತು. ಹಾರಂಗಿ ಜಲಾಶಯ ಹಾಗೂ ಹಿನ್ನೀರು ಪ್ರದೇಶ ವೀಕ್ಷಣೆ ಮಾಡಿದ ನಂತರ ಹಾರಂಗಿಯಿಂದ ಗುಡ್ಡೆಹೊಸೂರು ಮಾರ್ಗವಾಗಿ ಮಡಿಕೇರಿಗೆ ತೆರಳಿದರುಈ ಸಂದರ್ಭ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮಾನ್ ಪಣ್ಣೇಕರ್, ನೀರಾವರಿ…

ನಿರಾಶ್ರಿತರ ಶಿಬಿರದಲ್ಲಿ ಮೊಳಗುತ್ತಿದೆ ಸಂಗೀತ, ನೃತ್ಯ
ಕೊಡಗು

ನಿರಾಶ್ರಿತರ ಶಿಬಿರದಲ್ಲಿ ಮೊಳಗುತ್ತಿದೆ ಸಂಗೀತ, ನೃತ್ಯ

August 25, 2018

ಮಡಿಕೇರಿ: ಪ್ರಕೃತಿ ವಿಕೋಪದಿಂದಾಗಿ ತತ್ತರಿಸಿ ವಿವಿಧ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರ ಮನದಲ್ಲಿರುವ ದುಗುಡ ದೂರ ಮಾಡಿ, ವಾಸ್ತವ ಬದುಕಿನತ್ತ ಕರೆತರಲು ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಮುಂದಾಗಿದ್ದಾರೆ. ಶಿಬಿರಗಳಲ್ಲಿ ಸಂಗೀತ, ನೃತ್ಯ, ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆ ನಡೆಸುವ ಮೂಲಕ ನೋವಿನಲ್ಲಿ ನಗು ಮೂಡುವಂತೆ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆ ಹಿಂದೆಂದೂ ಕಂಡು ಕೇಳರಿ ಯದಂತಹ ಪ್ರಕೃತಿ ವಿಕೋಪಕ್ಕೆ ಮೈಯೊಡ್ಡಿ, ಅಪಾರ ಪ್ರಮಾಣದ ಹಾನಿಗೆ ತುತ್ತಾಗಿದೆ. ಇದ ರಿಂದ ಕೊಡಗಿನ ಭೂಪಟದ ಚಿತ್ರಣವೇ ಬದಲಾಗಿದೆ. ಗ್ರಾಮ-ಗ್ರಾಮಗಳ ನಡುವೆ…

ಕೊಡಗು ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧಾರ
ಮೈಸೂರು

ಕೊಡಗು ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧಾರ

August 24, 2018

ಹೈದರಾಬಾದ್ ಭೂ ವಿಜ್ಞಾನಿಗಳ ವರದಿ ಅನ್ವಯ ಕ್ರಮ ತಕ್ಷಣದಿಂದಲೇ ಭೂ ಪರಿವರ್ತನೆ ನಿಷೇಧ ಪುನರ್ ನಿರ್ಮಾಣ ಸಂಬಂಧ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿಉನ್ನತ ಸಮಿತಿ ರಚನೆ 6 ತಿಂಗಳಲ್ಲಿ ಪುನರ್ ನಿರ್ಮಾಣ, ಇದಕ್ಕೆ ಕೇಂದ್ರದ ನೆರವು ನಿರೀಕ್ಷೆ ಬೆಂಗಳೂರು: ಭಾರೀ ಮಳೆ, ಪ್ರವಾಹದಿಂದ ತನ್ನ ಸ್ವಾಭಾವಿಕ ಸ್ವರೂಪವನ್ನೇ ಕಳೆದುಕೊಂಡಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ನಿಷೇಧ ಮಾಡಿರುವುದಲ್ಲದೆ, ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ…

ಸಂತ್ರಸ್ತರಿಗೆ 42 ಎಕರೆ ಪ್ರದೇಶದಲ್ಲಿ ಶೀಘ್ರ ಮಾದರಿ ಮನೆಗಳ ನಿರ್ಮಾಣ
ಮೈಸೂರು

ಸಂತ್ರಸ್ತರಿಗೆ 42 ಎಕರೆ ಪ್ರದೇಶದಲ್ಲಿ ಶೀಘ್ರ ಮಾದರಿ ಮನೆಗಳ ನಿರ್ಮಾಣ

August 24, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಗ್ರಾಮಸ್ಥರಿಗೆ ಮಡಿಕೇರಿ, ಸೋಮವಾರಪೇಟೆ ತಾಲೂಕಿನ ವಿವಿಧೆಡೆ 42 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸಮರೋಪಾದಿಯಲ್ಲಿ ನವ ತಂತ್ರಜ್ಞಾನ ಬಳಸಿ ಮಾದರಿ ಮನೆಗಳನ್ನು ಸರ್ಕಾರ ನಿರ್ಮಿಸಿಕೊಡಲಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈಗಾಗಲೇ 42 ಎಕರೆ ಜಾಗವನ್ನು ಮಡಿಕೇರಿ ತಾಲೂಕಿನ ಕೆ.ನಿಡುಗಣೆ, 1ನೇ ಮೊಣ್ಣಂಗೇರಿ, ಕರ್ಣಂಗೇರಿ, ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮಗಳಲ್ಲಿ ಗುರುತಿಸಲಾಗಿದೆ. ಪ್ರತಿ ಪಂಚಾಯತ್ ನಿಂದಲೂ ಲಭ್ಯವಿರುವ ಜಮೀನಿನ…

ಪ್ರಧಾನಿ ಮೋದಿ ಕೊಡಗಿಗೆ ಭೇಟಿ ನೀಡಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ
ಕೊಡಗು

ಪ್ರಧಾನಿ ಮೋದಿ ಕೊಡಗಿಗೆ ಭೇಟಿ ನೀಡಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ

August 24, 2018

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯಿಂದಾಗಿ 5 ರಿಂದ 6 ಸಾವಿರ ಮಂದಿ ನಿರಾಶ್ರಿತರಾಗಿ ರುವುದು ಅತ್ಯಂತ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಪ್ರಧಾನ ಮಂತ್ರಿಗಳು ಕೇರಳಕ್ಕೆ ಭೇಟಿ ನೀಡಿದಂತೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಸೂಕ್ತ ಪರಿಹಾರವನ್ನು ಘೋಷಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಆಗ್ರಹಿಸಿದರು. ವಿವಿಧ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದ ನಂತರ…

ವೃದ್ಧ ದಂಪತಿ ಸೇರಿ ಮೂವರ ರಕ್ಷಣೆ
ಕೊಡಗು

ವೃದ್ಧ ದಂಪತಿ ಸೇರಿ ಮೂವರ ರಕ್ಷಣೆ

August 24, 2018

ಮಡಿಕೇರಿ:  ಮಹಾ ಮಳೆಯಿಂದ ಸಂತ್ರಸ್ಥರಾದ ಜನರನ್ನು ರಕ್ಷಿಸುವ ಕಾರ್ಯಾಚರಣೆ ಗುರುವಾರವೂ ಮುಂದು ವರೆದಿದ್ದು, ಲೈನ್‍ಮನೆಯೊಂದರಲ್ಲಿ ಸಿಲು ಕಿದ್ದ ವೃದ್ಧ ದಂಪತಿಗಳನ್ನು ಎನ್‍ಡಿಆರ್ ಎಫ್, ಪೊಲೀಸ್, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ರಕ್ಷಿಸಿದ್ದಾರೆ. ಹೆಮ್ಮೆತ್ತಾಳು ಸಮೀಪದ ಕಾಂಡನಕೊಲ್ಲಿ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕವಿಲ್ಲದೆ ತೋಟದ ಲೈನ್ ಮನೆಯಲ್ಲಿ ಪಳನಿ ಮತ್ತು ಶಾಂತ ದಂಪತಿಗಳು ಕಳೆದು 4 ದಿನಗಳಿಂದ ಸಿಲುಕಿಕೊಂಡ್ಡಿದ್ದರು. ಮೊಬೈಲ್ ಸಂಪರ್ಕ ವ್ಯವಸ್ಥೆಯಿಲ್ಲದ್ದರಿಂದಾಗಿ ಈ ವೃದ್ಧ ದಂಪತಿಗಳಿಗೆ ಯಾರನ್ನೂ ಸಂಪರ್ಕಸಲು ಸಾಧ್ಯವಾಗಿರಲಿಲ್ಲ. ಮಾತ್ರವಲ್ಲದೆ ತೀವ್ರ ಅನಾರೋಗ್ಯ ಮತ್ತು…

ಕೊಡಗಿನ ಸಂತ್ರಸ್ತರ ಸ್ಥಿತಿ ಕಂಡು ಮರುಗಿದ ರೈತ ಸಂಘದ ಮುಖಂಡರು.!
ಕೊಡಗು

ಕೊಡಗಿನ ಸಂತ್ರಸ್ತರ ಸ್ಥಿತಿ ಕಂಡು ಮರುಗಿದ ರೈತ ಸಂಘದ ಮುಖಂಡರು.!

August 24, 2018

ಸಂತ್ರಸ್ತರಿಗೆ ಅಗತ್ಯ ಸಾಮಗ್ರಿ ವಿತರಣೆ ಗೋಣಿಕೊಪ್ಪಲು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ತಂಡವು ಕೊಡಗು ಜಿಲ್ಲೆಯ ರೈತ ಸಂಘದ ಅಧ್ಯಕ್ಷ ಕಾಡ್ಯ ಮಾಡ ಮನು ಸೋಮಯ್ಯ ಮುಂದಾಳತ್ವ ದಲ್ಲಿ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ತೊಂದರೆ ಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ನೈಜ್ಯ ಪರಿಸ್ಥಿತಿಯನ್ನು ವೀಕ್ಷಿಸಿತು. ಈ ತಂಡದಲ್ಲಿ ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಮುಖಂಡರು ಆದ ಹಿರಿಯ ಸಾಹಿತಿ ದೇವನೂರು ಮಹದೇವ, ಸ್ವರಾಜ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯ ದರ್ಶಿ ದರ್ಶನ್…

ಕೊಡಗಿನ ಭೂ ಕುಸಿತಕ್ಕೆ ಹಾರಂಗಿ ಡ್ಯಾಂ ಕಾರಣ
ಕೊಡಗು

ಕೊಡಗಿನ ಭೂ ಕುಸಿತಕ್ಕೆ ಹಾರಂಗಿ ಡ್ಯಾಂ ಕಾರಣ

August 24, 2018

ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅಭಿಮತ ಹಾರಂಗಿ ಜಲಾಶಯ ನೆಲಸಮಕ್ಕೆ ಆಗ್ರಹ 30 ಸಾವಿರ ಕೋಟಿ ಪರಿಹಾರಕ್ಕೆ ಒತ್ತಾಯ ಮಡಿಕೇರಿ: ಕೊಡಗಿನ ಉತ್ತರ ಮತ್ತು ವಾಯುವ್ಯ ಭಾಗದಲ್ಲಿ ಸಂಭವಿಸಿ ರುವ ಭೂ ಕುಸಿತಕ್ಕೆ ಹಾರಂಗಿ ಜಲಾ ಶಯವೇ ಮೂಲ ಕಾರಣ ಎಂದು ಆರೋ ಪಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಮತ್ತು ಕೃಷಿ ಭೂಮಿಯನ್ನು ಕಲ್ಪಿಸಲು 30 ಸಾವಿರ ಕೋಟಿ ರೂ. ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

1 69 70 71 72 73 84
Translate »