ಕೊಡಗಿನ ಭೂ ಕುಸಿತಕ್ಕೆ ಹಾರಂಗಿ ಡ್ಯಾಂ ಕಾರಣ
ಕೊಡಗು

ಕೊಡಗಿನ ಭೂ ಕುಸಿತಕ್ಕೆ ಹಾರಂಗಿ ಡ್ಯಾಂ ಕಾರಣ

August 24, 2018
  • ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅಭಿಮತ
  • ಹಾರಂಗಿ ಜಲಾಶಯ ನೆಲಸಮಕ್ಕೆ ಆಗ್ರಹ
  • 30 ಸಾವಿರ ಕೋಟಿ ಪರಿಹಾರಕ್ಕೆ ಒತ್ತಾಯ

ಮಡಿಕೇರಿ: ಕೊಡಗಿನ ಉತ್ತರ ಮತ್ತು ವಾಯುವ್ಯ ಭಾಗದಲ್ಲಿ ಸಂಭವಿಸಿ ರುವ ಭೂ ಕುಸಿತಕ್ಕೆ ಹಾರಂಗಿ ಜಲಾ ಶಯವೇ ಮೂಲ ಕಾರಣ ಎಂದು ಆರೋ ಪಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಮತ್ತು ಕೃಷಿ ಭೂಮಿಯನ್ನು ಕಲ್ಪಿಸಲು 30 ಸಾವಿರ ಕೋಟಿ ರೂ. ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರಂಗಿ ಜಲಾಶಯವನ್ನು ಸಂಪೂರ್ಣವಾಗಿ ತೆರವು ಮಾಡಬೇಕು ಎಂದು ಒತ್ತಾಯಿಸಿದರು. ಭೂಗರ್ಭ ಇಲಾಖೆ ಯ ವಿಶ್ಲೇಷಣೆಯಂತೆ ಅಣೆಕಟ್ಟೆಗಳಿಂದ ನೆಲಮಟ್ಟದಲ್ಲಿ 120 ಕಿ.ಮೀ. ಅಂತರ ಹಾಗೂ ಅಂತರಿಕ್ಷ ಮಟ್ಟದಲ್ಲಿ 60 ಕಿ.ಮೀ. ಅಂತರದ ವ್ಯಾಪ್ತಿ ಆಪತ್ತು ಸೃಷ್ಟಿಯ ಪ್ರದೇಶವಾಗಿದೆ. ಅದೇ ರೀತಿ ಹಾರಂಗಿ ಅಣೆಕಟ್ಟೆಯಿಂದ ಮಡಿಕೇರಿವರೆಗೆ ಅಂತರಿಕ್ಷ ಮಟ್ಟದ ಅಂತರ 15 ಕಿ.ಮೀ ಹಾಗೂ ನೆಲ ಮಟ್ಟದ ಅಂತರ 30 ಕಿ.ಮೀ.ಗಳಾಗಿವೆ. ಅಲ್ಲದೆ ಹಾರಂಗಿ ಅಣೆಕಟ್ಟೆಯಲ್ಲಿ ವರ್ಷವಿಡೀ ನೀರು ಶೇಖರಿಸಿಡುವುದರಿಂದ ಹಿನ್ನೀರು ಭೂಮಿಯಡಿಯಲ್ಲಿ ಜಲಾನಯನ ಪ್ರದೇಶ ವಾದ ಗಾಳಿಬೀಡು ಸುತ್ತಮುತ್ತಲ ಪ್ರದೇಶ ದವರೆಗೂ ವ್ಯಾಪಿಸಿ ಮಣ್ಣು ಸಡಿಲಗೊಳ್ಳುತ್ತಿದೆ. ಇದೇ ಕಾರಣದಿಂದ ಹಟ್ಟಿಹೊಳೆ, ಮಕ್ಕಂ ದೂರು, ತಂತಿಪಾಲ, ಕಾಲೂರು, ದೇವಸ್ತೂರು, 2ನೇ ಮೊಣ್ಣಂಗೇರಿ, ಜೋಡುಪಾಲದವ ರೆಗಿನ ಬೆಟ್ಟ ಪ್ರದೇಶಗಳು ಕುಸಿತಗೊಂಡಿವೆ ಎಂದು ವಿಶ್ಲೇಷಿಸಿದರು.

ಹಾರಂಗಿ ಜಲಾಶಯದ ಶೇಖರಣಾ ಸಾಮಥ್ರ್ಯ 8.5 ಟಿ.ಎಂ.ಸಿ ಆಗಿದ್ದು, ಈಗಾ ಗಲೇ ಅಣೆಕಟ್ಟೆಯಲ್ಲಿ 7.77ಟಿಎಂಸಿ ನೀರು ಶೇಖರಣೆಗೊಂಡಿದೆ. ಇದಕ್ಕೆ ಬರುವ ನದಿ ತೊರೆಗಳ ಜಲನಾಳಗಳು ಸೀಳಿ ಹೋಗಿ ಅದರಿಂದ ಬಸಿದು ಬರುವ ಒಂದು ರೀತಿಯ ಕಂದು ಬಣ್ಣದ ಲವಣ ಪ್ರಸಕ್ತ ಅಣೆಕಟ್ಟೆಯ ಕ್ರೆಸ್ಟ್‍ಗೇಟ್‍ಗಳ ಮೂಲಕ ಹೊರಬರುತ್ತಿರುವುದನ್ನು ನಾವು ಕಾಣಬಹು ದಾಗಿದೆ. ಅತಿ ಹೆಚ್ಚು ಪ್ರಮಾಣದ ಲವಣಾಂಶ ಯುಕ್ತ ಮಣ್ಣು ಜಲಾನಯನ ಪ್ರದೇಶದ ನದಿ ಪಾತ್ರಗಳನ್ನು ಸೀಳಿ ಬರುತ್ತಿರುವುದು ಭೂ ಕುಸಿತಕ್ಕೆ ಪ್ರಮುಖ ಕಾರಣ ಎಂದು ನಾಚಪ್ಪ ಅಭಿಪ್ರಾಯಪಟ್ಟರು.

ಕೊಡಗಿನ ಭೂಕುಸಿತ 2017ರ ಡಿ.17 ರಂದು ನಡೆದ ಚಿಲಿ ದೇಶದ ಭೂ ಕುಸಿತ ವನ್ನೂ ಮೀರಿಸುವಂತಿದ್ದು, ಈ ದುರಂತ ವನ್ನು ಅಂತರ ರಾಷ್ಟ್ರೀಯ ದುರಂತ ಮತ್ತು ರಾಷ್ಟ್ರೀಯ ಉತ್ಪಾತ ಎಂದು ಪರಿಗಣಿಸಿ, ವಿಶ್ವಸಂಸ್ಥೆ, ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರಗಳು ವಿಪತ್ತು ನಿರ್ವ ಹಣಾ ಕೆಲಸದಲ್ಲಿ ಭಾಗಿಯಾಗಬೇಕು. ಅಲ್ಲದೆ ಈ ಘಟನೆಯನ್ನು ಅಂತರರಾಷ್ಟ್ರೀಯ ದುರಂತ ಮತ್ತು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.

ಕೊಡಗಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಎರಡು ರೀತಿಯ ಪ್ಯಾಕೇಜ್ ಗಳನ್ನು ನೀಡಬೇಕು. ಪ್ರಥಮವಾಗಿ ಪ್ರತಿಯೊಬ್ಬ ವ್ಯಕ್ತಿ ತನ್ನ ಮೂಲ ನೆಲದ ಲ್ಲಿಯೇ ಸ್ವಾಭಿಮಾನದಿಂದ, ಸ್ವತಂತ್ರವಾಗಿ ಬದುಕಲು ಕನಿಷ್ಟ ತಲಾ 2 ಕೋಟಿ ರೂ. ಗಳನ್ನು ಒದಗಿಸಬೇಕು. ನಿರಾಶ್ರಿತರಾಗಿರುವ ಸುಮಾರು 15 ಸಾವಿರ ಮಂದಿಗೆ ಒಟ್ಟು 30 ಸಾವಿರ ಕೋಟಿ ರೂ.ಗಳನ್ನು ಕೇಂದ್ರ, ರಾಜ್ಯ ಮತ್ತು ವಿಶ್ವಸಂಸ್ಥೆಯ ಆಪತ್ತು ನಿರ್ವಹಣಾ ನಿಧಿಯಿಂದ ಒದಗಿಸಬೇಕು. ಒಂದು ಅಪರೂಪದ ನಾಗರಿಕತೆಯನ್ನೇ ಅಳಿಸಿ ಹಾಕಿದ ಹಾರಂಗಿ ಜಲಾಶಯ ವನ್ನು ನೆಲಮಟ್ಟದಿಂದಲೇ ಅಳಿಸಿ ಹಾಕ ಬೇಕು ಮತ್ತು ನಿರಾಶ್ರಿತರಿಗೆ ಶಾಶ್ವತವಾದ ಪುನರ್ವಸತಿ ಕಲ್ಪಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.

ಸಂತ್ರಸ್ತರಾದ ಚನ್ನಪಂಡ ಮುತ್ತಣ್ಣ ಹಾಗೂ ಎ.ಟಿ.ಮಾದಪ್ಪ ಸುದ್ದಿಗೋಷ್ಠಿ ಯಲ್ಲಿ ಉಪಸ್ಥಿತರಿದ್ದು, ಪ್ರಕೃತಿ ವಿಕೋಪ ದಿಂದಾದ ಹಾನಿಯ ಬಗ್ಗೆ ವಿವರಿಸಿದರು. ಸಂತ್ರಸ್ತರಿಗಾಗಿ ಬಂದಿರುವ ಸಾಮಾಗ್ರಿಗಳು ಪರರ ಪಾಲಾಗುತ್ತಿರುವ ಬಗ್ಗೆ ಅಸಮಾ ಧಾನ ವ್ಯಕ್ತಪಡಿಸಿದರು.

 

Translate »