ಕೊಡಗಿನ ಸಂತ್ರಸ್ತರ ಸ್ಥಿತಿ ಕಂಡು ಮರುಗಿದ ರೈತ ಸಂಘದ ಮುಖಂಡರು.!
ಕೊಡಗು

ಕೊಡಗಿನ ಸಂತ್ರಸ್ತರ ಸ್ಥಿತಿ ಕಂಡು ಮರುಗಿದ ರೈತ ಸಂಘದ ಮುಖಂಡರು.!

August 24, 2018

ಸಂತ್ರಸ್ತರಿಗೆ ಅಗತ್ಯ ಸಾಮಗ್ರಿ ವಿತರಣೆ
ಗೋಣಿಕೊಪ್ಪಲು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ತಂಡವು ಕೊಡಗು ಜಿಲ್ಲೆಯ ರೈತ ಸಂಘದ ಅಧ್ಯಕ್ಷ ಕಾಡ್ಯ ಮಾಡ ಮನು ಸೋಮಯ್ಯ ಮುಂದಾಳತ್ವ ದಲ್ಲಿ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ತೊಂದರೆ ಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ನೈಜ್ಯ ಪರಿಸ್ಥಿತಿಯನ್ನು ವೀಕ್ಷಿಸಿತು.

ಈ ತಂಡದಲ್ಲಿ ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಮುಖಂಡರು ಆದ ಹಿರಿಯ ಸಾಹಿತಿ ದೇವನೂರು ಮಹದೇವ, ಸ್ವರಾಜ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯ ದರ್ಶಿ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ವಿವಿಧ ಜಿಲ್ಲೆಯ ರೈತ ಮುಖಂಡರು ಸೇರಿದಂತೆ 40ಕ್ಕೂ ಹೆಚ್ಚು ಮಂದಿಯನ್ನು ಒಳಗೊಂಡ ತಂಡ ಕೊಡಗಿನ ಮಡಿಕೇರಿ ತಾಲೂಕಿನ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿತು.
ಕೊಡಗಿನಲ್ಲಿ ನೆರೆ ನಿಯಂತ್ರಣಕ್ಕೆ ಬಂದರೂ ಇದರಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ನೆರೆ ಸಂತ್ರಸ್ತರ ದುಃಖದ ಕಣ್ಣೀರು ನಿಂತಿರು ವುದು ಮಾತ್ರ ಕಂಡುಬರಲಿಲ್ಲ. ಮನೆ, ಮಠ, ಆಸ್ತಿ ಪಾಸ್ತಿ ಕಳೆದುಕೊಂಡು ನರಕ ಯಾತನೆ ಅನುಭವಿಸುತ್ತಿರುವ ಸಂತ್ರಸ್ತರ ಈ ಮನು ಕಲಕುವ ದೃಶ್ಯಗಳು ಕಂಡುಬಂತು.

ಮುಂಜಾನೆ ಮಡಿಕೇರಿ ಬಳಿಯ ಮಕ್ಕಂ ದೂರು ಬಳಿಯ ಉದಯಗಿರಿ ಗ್ರಾಮಕ್ಕೆ ತಂಡ ಭೇಟಿ ನೀಡುತ್ತಿದ್ದಂತೆ ಎದುರಾದ ನೆಲಸಮಗೊಂಡಿದ್ದ ಮನೆಗಳು, ಅವುಗಳ ಅವಶೇಷಗಳು, ಜಲಪ್ರಳಯದ ರುದ್ರ ನರ್ತನ ವನ್ನು ಕಂಡು ಮುಖಂಡರು ಕೆಲ ಕಾಲ ಸ್ತಬ್ಧರಾದರು. ಇಲ್ಲಿನ ನೂರಾರು ಮನೆಗಳು, ಜಮೀನುಗಳು, ಬೆಳೆಗಳು, ಹಾನಿಗೊಳಗಾದ ಬಗ್ಗೆ ಮಾಹಿತಿ ಪಡೆದರು. ಗ್ರಾಮಸ್ಥರು ನಿರಾಶ್ರಿತರ ನೋವುಗಳನ್ನು ಆಲಿಸಿದರು. ಮಡಿಕೇರಿ, ಸೋಮವಾರ ಪೇಟೆ ಸಂಪರ್ಕ ರಸ್ತೆ ಸುಮಾರು 4 ಕಿ.ಮೀ. ಸಂಪೂರ್ಣ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ಮಾಹಿತಿ ಗಳನ್ನು ಸಂಗ್ರಹಿಸಿದರು.

ನಂತರ ಈ ತಂಡವು ಮಡಿಕೇರಿ ನಗರ ದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತೆರೆದಿರುವ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಪರಿಹಾರ ಸಾಮಾಗ್ರಿಗಳನ್ನು ವಿತರಣೆ ಮಾಡುವ ಮೂಲಕ ಸಾಂತ್ವನ ಹೇಳಿದರು. ಬಳಿಕ ಕೊಡವ ಸಮಾಜದ ಮತ್ತೊಂದು ಕೇಂದ್ರಕ್ಕೆ ತೆರಳಿ ಅವರ ಕಷ್ಟಕಾರ್ಪಣ್ಯ ಗಳನ್ನು ಆಲಿಸಿ, ಅಗತ್ಯ ವಸ್ತುಗಳನ್ನು, ಮೆಡಿಕಲ್ ಕಿಟ್‍ಗಳನ್ನು ವಿತರಿಸಿದರು. ನಂತರ ಚೇರಂಬಾಣೆಯ ನಿರಾಶ್ರಿತರು ತಂಗಿ ರುವ ಕಾಲೇಜಿಗೆ ತೆರಳಿ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಿದರು.
ಜಿಲ್ಲೆಯ ನಿರಾಶ್ರಿತರ ಅನುಕೂಲಕ್ಕಾಗಿ 25 ಕ್ವಿಂಟಾಲ್ ಅಕ್ಕಿ ಸಾವಿರ ತೆಂಗಿನ ಕಾಯಿ 100 ಲೀ. ಅಡುಗೆ ಎಣ್ಣೆ, 100 ಕೆ.ಜಿ. ಯಷ್ಟು ವಿವಿಧ ರೀತಿಯ ಕಾಳುಗಳು, 20 ಬಾಳೆಗೊನೆಗಳು ಸೇರಿದಂತೆ ಔಷಧ ಗಳು, ಸಾಬೂನು, ಪೇಸ್ಟ್, ಟೂತ್‍ಬ್ರಷ್, ಒಳಗೊಂಡಂತೆ ಇನ್ನಿತರ ಅಗತ್ಯ ಸಾಮಗ್ರಿ ಗಳನ್ನು ವಿತರಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚೆನ್ನಪಟ್ಟಣ ರಾಮಣ್ಣ, ಸ್ವರಾಜ್ ಇಂಡಿಯಾದ ಮೈಸೂರು ಜಿಲ್ಲಾ ಖಜಾಂಜಿ ಸರಗೂರು ನಟರಾಜು, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮುಖಂಡ ಪಿ.ಮರಂಕಯ್ಯ ಸೇರಿದಂತೆ ಕೊಡಗು ಜಿಲ್ಲೆಯ ಪ್ರಧಾನ ಕಾಯದರ್ಶಿ ಚೆಟ್ರು ಮಾಡ ಸುಜಯ್ ಬೋಪಯ್ಯ, ಮುಖಂಡರುಗಳಾದ ಪುಚ್ಚಿಮಾಡ ಸುನೀಲ್, ತೀತರ ಮಾಡ ಸುನೀಲ್, ಮಂಡೇಪಂಡ ಪ್ರವೀಣ್, ಕೊಂಗೇರ ಗಪ್ಪು, ಕೃಪ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ರೈತ ಮುಖಂಡರು ಮಳೆ ಸಂತ್ರಸ್ತರ ಪ್ರದೇಶಗಳಿಗೆ ಭೇಟಿ ನೀಡಿದ್ದರು.

Translate »