Tag: KR Pet

ನಾಳೆ ಬಿಎಸ್‍ವೈ ನೇತೃತ್ವದಲ್ಲಿ ಬಹಿರಂಗ ಸಭೆ
ಮಂಡ್ಯ

ನಾಳೆ ಬಿಎಸ್‍ವೈ ನೇತೃತ್ವದಲ್ಲಿ ಬಹಿರಂಗ ಸಭೆ

October 22, 2018

ಕೆ.ಆರ್.ಪೇಟೆ:  ಲೋಕಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ಅ. 23ರಂದು ಪಟ್ಟಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಹಿರಂಗ ಸಭೆಯು ನಡೆಯಲಿದ್ದು, ಸಭೆಯಲ್ಲಿ ತಾಲೂಕಿನ ಎಲ್ಲಾ 6 ಹೋಬಳಿಗಳಿಂದ 25 ಸಾವಿರ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿ ದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ತಿಳಿಸಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಜಿಲ್ಲೆಯ ರೈತರ ಜೀವನಾಡಿ…

ಕೆ.ಆರ್.ಪೇಟೆಯಲ್ಲಿ ಮನೆಗಳ್ಳತನ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಮನೆಗಳ್ಳತನ

October 20, 2018

ಮಂಡ್ಯ: ಕೃಷ್ಣರಾಜ ಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಮನೆಗಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಭಾರತಿ ಎಂಬುವವರ ಮನೆಯ ಬೀಗ ಮುರಿದು ದುಷ್ಕರ್ಮಿ ಗಳು ಕಳ್ಳತನ ಮಾಡಿದ್ದಾರೆ. ಮನೆಯ ಮಾಲೀಕರಾದ ಭಾರತಿ ಅವರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಬಾಗಿಲು ಮುರಿದು ಕಳ್ಳತನ ನಡೆಸಿ ದ್ದಾರೆ. ಬೀರುವಿನಲ್ಲಿಟ್ಟಿದ್ದ 80 ಸಾವಿರ ರೂಪಾಯಿ ನಗದು ಹಣ, ಲಕ್ಷಾಂತರ ಬೆಲೆ ಬಾಳುವ ಚಿನ್ನದ ಒಡವೆಗಳು ಹಾಗೂ ಮನೆಯ…

ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಒತ್ತಾಯ
ಮಂಡ್ಯ

ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಒತ್ತಾಯ

October 4, 2018

ಕೆ.ಆರ್.ಪೇಟೆ:  ‘ಒಂದು ತಿಂಗ ಳೊಳಗೆ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಲನೆ ನೀಡದೇ ಇದ್ದಲ್ಲಿ ನ.2ರಿಂದ ಪಟ್ಟಣದ ತಾಲೂಕು ಕಚೇ ರಿಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗುವುದು’ ಎಂದು ದಸಂಸ ರಾಜ್ಯ ಸಂಘಟನಾ ಸಂಚಾ ಲಕ ಎಂ.ಬಿ.ಶ್ರೀನಿವಾಸ್ ತಾಲೂಕು ಆಡ ಳಿತಕ್ಕೆ ಎಚ್ಚರಿಕೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ…

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ: ಅತ್ತೆ-ಮಾವ, ನಾದಿನಿ ಬಂಧನ, ಗಂಡ ನಾಪತ್ತೆ
ಮಂಡ್ಯ

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ: ಅತ್ತೆ-ಮಾವ, ನಾದಿನಿ ಬಂಧನ, ಗಂಡ ನಾಪತ್ತೆ

October 2, 2018

ಕೆ.ಆರ್.ಪೇಟೆ:  ವರದಕ್ಷಿಣೆ ಕಿರುಕುಳ ನೀಡಿ ಗೃಹಿಣಿಯನ್ನು ನೇಣು ಬಿಗಿದು ಹತ್ಯೆ ಮಾಡಿರುವ ಘಟನೆ ತಾಲೂಕಿನ ಬೂಕನಕೆರೆ ಗ್ರಾಮ ದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಅಶೋಕ್ ಪತ್ನಿ ಗಾನಶ್ರೀ ಅಲಿಯಾಸ್ ಶೃತಿ(28) ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಗೃಹಿಣಿ. ಪ್ರಕರಣ ಸಂಬಂಧ ಮೃತ ಗಾನಶ್ರೀ ಅವರ ಮಾವ ಬೂಕನಕೆರೆಯ ನಂಜೇಗೌಡ, ಅತ್ತೆ ಜಯಮ್ಮ, ನಾದಿನಿ ಆಶಾ ಅವರನ್ನು ಕೊಲೆ ಆರೋಪದಡಿ ಬಂಧಿಸಲಾಗಿದ್ದು, ಪತಿ ಅಶೋಕ ನಾಪತ್ತೆಯಾಗಿದ್ದಾನೆ. ಘಟನೆ ವಿವರ: ಕಳೆದ 8 ವರ್ಷಗಳ ಹಿಂದೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ…

ತಂದೆಯ ಆಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸಲಾಗದೆ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ
ಮಂಡ್ಯ, ಮೈಸೂರು

ತಂದೆಯ ಆಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸಲಾಗದೆ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ

September 28, 2018

ಕೆ.ಆರ್.ಪೇಟೆ:  ತಂದೆ ಮತ್ತು ಮಗ ಒಂದೇ ದಿನ ಇಹಲೋಕ ತ್ಯಜಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಇದರ ಹಿಂದಿರುವ ಕರುಣಾ ಜನಕ ಕತೆ ಕಲ್ಲು ಹೃದಯಿಗಳ ಕಣ್ಣಲ್ಲೂ ನೀರು ತರಿಸುವಂತಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ತಂದೆಯ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಿಸಲಾಗದೆ ಪುತ್ರ ಆತ್ಮಹತ್ಯೆ ಮಾಡಿ ಕೊಂಡರೆ, ಚಿಕಿತ್ಸೆ ಫಲಕಾರಿಯಾಗದೆ ತಂದೆಯೂ ಕೊನೆಯು ಸಿರೆಳೆದಿದ್ದಾರೆ. ಮಂಡ್ಯ ಜಿಲ್ಲೆ, ಕೃಷ್ಣರಾಜ ಪೇಟೆ ತಾಲೂಕು, ಬೂಕನಕೆರೆ ಗ್ರಾಮದ ಹಿರಣ್ಣಯ್ಯ(55) ಹಾಗೂ ಮಂಜು (23) ಒಂದೇ ದಿನ ಬದುಕಿನ ಪಯಣ ಮುಗಿಸಿದ್ದಾರೆ. ಇದ್ದಕ್ಕಿದ್ದಂತೆ…

ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶ್ ಚಂದ್ರ ಅಪಹರಣ ಪ್ರಕರಣ ನಾಲ್ವರ ಬಂಧನ
ಮೈಸೂರು

ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶ್ ಚಂದ್ರ ಅಪಹರಣ ಪ್ರಕರಣ ನಾಲ್ವರ ಬಂಧನ

August 29, 2018

ಕೆ.ಆರ್.ಪೇಟೆ: ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶ್ ಚಂದ್ರ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಸ್ಟೋರ್ ಕೀಪರ್ ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ಸಾಲಿಗ್ರಾಮ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕು ಶೀಳನೆರೆ ಗ್ರಾಮದವನಾಗಿ ರುವ ರೈಲ್ವೆ ಇಲಾಖೆ ಸ್ಟೋರ್ ಕೀಪರ್ ಕೆ.ಎನ್. ಯೋಗೇಂದ್ರ(30) ಮೂಲತಃ ಶೀಳನೆರೆ ಗ್ರಾಮದ ವನೇ ಆಗಿದ್ದು, ಮೈಸೂರಿನ ಕಾರ್ಖಾನೆಯೊಂದರ ನೌಕರ ಎಸ್.ಎನ್.ದೀಪು ಅಲಿಯಾಸ್ ದೀಪಕ್ (29) ಮೂಲತಃ ಕೆ.ಆರ್.ಪೇಟೆಯ ಮುಸ್ಲಿಂ ಬ್ಲಾಕ್ ನಿವಾಸಿಯಾಗಿದ್ದು, ಬೆಂಗಳೂರು ಮಾಗಡಿ ರಸ್ತೆಯ ಹೋಟೆಲ್‍ವೊಂದರಲ್ಲಿ ಕ್ಯಾಪ್ಟನ್ ಆಗಿರುವ ಎಂ.ಎನ್.ಸೋಮಶೇಖರ್ ಅಲಿಯಾಸ್…

ಬೇಸಾಯದ ಜೊತೆಗೆ ಉಪಕಸುಬು ಅಳವಡಿಸಿಕೊಳ್ಳಿ
ಮಂಡ್ಯ

ಬೇಸಾಯದ ಜೊತೆಗೆ ಉಪಕಸುಬು ಅಳವಡಿಸಿಕೊಳ್ಳಿ

August 27, 2018

ಕೆ.ಆರ್.ಪೇಟೆ:  ರೈತ ಬಾಂಧವರು ಬೇಸಾಯದ ಜೊತೆಗೆ ಉಪ ಕಸುಬುಗಳನ್ನು ರೂಢಿಸಿಕೊಳ್ಳುವ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ಶಾಸಕ ಡಾ.ಕೆ.ಸಿ.ನಾರಾಯಣಗೌಡ ಸಲಹೆ ನೀಡಿದರು. ತಾಲೂಕಿನ ಹೇಮಗಿರಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಜಮೀನಿನಲ್ಲಿ ಹಮ್ಮಿ ಕೊಂಡಿದ್ದ ಭತ್ತ ನಾಟಿ ಕಾರ್ಯಕ್ರಮದಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ರೈತರು ಹಾಗೂ ನಾಟಿ ಹಾಕುವ ಮಹಿಳೆಯರೊಂದಿಗೆ ಕೆಸರು ಗದ್ದೆಯಲ್ಲಿ ಪಂಚೆ ತೊಟ್ಟು ಸುಮಾರು 1 ಗಂಟೆ ಕಾಲ ಭತ್ತದ ಪೈರುಗಳನ್ನು ನಾಟಿ ಮಾಡಿ ನಂತರ ನೆರೆದಿದ್ದ ರೈತರನ್ನು ಉದ್ದೇಶಿಸಿ ಅವರು…

ವೇತನಕ್ಕೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ
ಮಂಡ್ಯ

ವೇತನಕ್ಕೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ

August 15, 2018

ಕೆ.ಆರ್.ಪೇಟೆ: ತಾಲೂಕಿನ ಗ್ರಾಪಂ ನೌಕರರಿಗೆ ನೀಡಬೇಕಿರುವ ವೇತನ ಬಿಡುಗಡೆ ಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಪಂಚಾ ಯಿತಿ ನೌಕರರ ಸಂಘದ ಸದಸ್ಯರು ಪಟ್ಟಣ ದಲ್ಲಿಂದು ಪ್ರತಿಭಟನೆ ನಡೆಸಿದರು. ಪಟ್ಟಣದ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಕೂಡಲೇ ಕಳೆದ 15ತಿಂಗಳಿಂದ ವೇತನ ನೀಡದ ತಾಲೂಕಿನ 34 ಗ್ರಾಪಂ ನೌಕರರಿಗೆ ವೇತನ ನೀಡುವಂತೆ ಆಗ್ರಹಿಸಿದರು. ಗ್ರಾಪಂ ನೌಕರರ ಖಾತೆಗೆ ನೇರವಾಗಿ ವೇತನ ವನ್ನು ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆವಿಗೂ ಅದು ಜಾರಿಯಾ ಗಿಲ್ಲ. ಇದರಿಂದಾಗಿ…

ಅರ್ಹರಿಗೆ ಸೌಲಭ್ಯ ಕಲ್ಪಿಸಲು ಸಂಘಟಿತರಾಗಿ: ಶಾಸಕ ನಾರಾಯಣಗೌಡರಿಂದ ಎಸ್‍ಸಿ, ಎಸ್‍ಟಿ ರೈತರಿಗೆ ಕೊಳವೆ ಬಾವಿ ಪರಿಕರ ವಿತರಣೆ
ಮಂಡ್ಯ

ಅರ್ಹರಿಗೆ ಸೌಲಭ್ಯ ಕಲ್ಪಿಸಲು ಸಂಘಟಿತರಾಗಿ: ಶಾಸಕ ನಾರಾಯಣಗೌಡರಿಂದ ಎಸ್‍ಸಿ, ಎಸ್‍ಟಿ ರೈತರಿಗೆ ಕೊಳವೆ ಬಾವಿ ಪರಿಕರ ವಿತರಣೆ

August 9, 2018

ಕೆ.ಆರ್.ಪೇಟೆ:  ‘ದಲಿತರಿಗೆ ಶಿಕ್ಷಣ, ಅಭಿವೃದ್ಧಿಗೆ ನೆರವು ನೀಡಲು ಸ್ಥಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಪಾರದರ್ಶಕವಾಗಿ ಕೆಲಸ ಮಾಡಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ತಲುಪಿಸಲು ದಲಿತ ಬಂಧುಗಳು ಸಂಘಟಿತರಾಗಿ ಹೋರಾಡ ಬೇಕು’ ಎಂದು ಶಾಸಕ ಡಾ.ಕೆ.ಸಿ.ನಾರಾ ಯಣಗೌಡ ಸಲಹೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದ ಆವರಣ ದಲ್ಲಿ ಬುಧವಾರ ನಡೆದ ಕಾರ್ಯಕ್ರಮ ದಲ್ಲಿ ತಾಲೂಕಿನ 27 ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ತಲಾ 2.50 ಲಕ್ಷ ರೂ. ಮೌಲ್ಯದ ಕೊಳವೆ ಬಾವಿಯ…

ಬೂಕನಕೆರೆ ಹೋಬಳಿಯಲ್ಲಿ ಜನಸ್ಪಂದನಾ ಸಭೆ: ಹಂತ ಹಂತವಾಗಿ ರೈತರ ಎಲ್ಲಾ ಸಾಲ ಮನ್ನಾ: ಶಾಸಕ ಕೆಸಿಎನ್
ಮಂಡ್ಯ

ಬೂಕನಕೆರೆ ಹೋಬಳಿಯಲ್ಲಿ ಜನಸ್ಪಂದನಾ ಸಭೆ: ಹಂತ ಹಂತವಾಗಿ ರೈತರ ಎಲ್ಲಾ ಸಾಲ ಮನ್ನಾ: ಶಾಸಕ ಕೆಸಿಎನ್

August 8, 2018

ಕೆ.ಆರ್.ಪೇಟೆ:  ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ 48 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಮುಂದೆ ಹಂತ ಹಂತವಾಗಿ ರೈತರ ಎಲ್ಲಾ ಬಗೆಯ ಸಾಲಮನ್ನಾ ಮಾಡಲಿದ್ದಾರೆ ಎಂದು ಶಾಸಕ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು. ತಾಲೂಕು ಆಡಳಿತದ ವತಿಯಿಂದ ತಾಲೂಕಿನ ಬೂಕನಕೆರೆ ಹೋಬಳಿಯ ಮೋದೂರು, ಬೊಮ್ಮೇಗೌಡನಕೊಪ್ಪಲು, ಕೀಳನಕೊಪ್ಪಲು, ರಂಗನಾಥಪುರ, ಬೂಕನ ಕೆರೆ, ಹೊಸೂರು, ಬಣ್ಣನಕೆರೆ, ಐಚನಹಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಜನಸ್ಪಂದನಾ ಸಭೆಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಫಲಾನುಭವಿಗಳಿಗೆ ಸ್ಥಳದಲ್ಲೇ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು. ಅಧಿಕಾರಿಗಳು ತಮ್ಮ ಇಲಾಖೆಯ ಸೌಲಭ್ಯಗಳನ್ನು ಅರ್ಹ…

1 2 3
Translate »