ಕೆ.ಆರ್.ಪೇಟೆಯಲ್ಲಿ ಮನೆಗಳ್ಳತನ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಮನೆಗಳ್ಳತನ

October 20, 2018

ಮಂಡ್ಯ: ಕೃಷ್ಣರಾಜ ಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಮನೆಗಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಭಾರತಿ ಎಂಬುವವರ ಮನೆಯ ಬೀಗ ಮುರಿದು ದುಷ್ಕರ್ಮಿ ಗಳು ಕಳ್ಳತನ ಮಾಡಿದ್ದಾರೆ.

ಮನೆಯ ಮಾಲೀಕರಾದ ಭಾರತಿ ಅವರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಬಾಗಿಲು ಮುರಿದು ಕಳ್ಳತನ ನಡೆಸಿ ದ್ದಾರೆ. ಬೀರುವಿನಲ್ಲಿಟ್ಟಿದ್ದ 80 ಸಾವಿರ ರೂಪಾಯಿ ನಗದು ಹಣ, ಲಕ್ಷಾಂತರ ಬೆಲೆ ಬಾಳುವ ಚಿನ್ನದ ಒಡವೆಗಳು ಹಾಗೂ ಮನೆಯ ದಾಖಲಾತಿಗಳನ್ನು ಕಳ್ಳತನ ಮಾಡ ಲಾಗಿದೆ. ಘಟನೆಯ ಸಂಬಂಧ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »