ಕೆಆರ್‌ಎಸ್‌ ಹೊರ ಹರಿವು ಹೆಚ್ಚಳ
ಮಂಡ್ಯ

ಕೆಆರ್‌ಎಸ್‌ ಹೊರ ಹರಿವು ಹೆಚ್ಚಳ

October 20, 2018

ಮಂಡ್ಯ: ಕೊಡಗು ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಭಾರಿ ಮಳೆ ಆರಂಭವಾಗಿರುವುದರಿಂದ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಜಲಾಶಯಕ್ಕೆ 10,598 ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಕೆ.ಆರ್‍ಎಸ್‍ನ ನೀರಿನ ಮಟ್ಟ 124.80 ಅಡಿ ಇದ್ದು, ಹೊರಹರಿವು 11,988 ಕ್ಯೂಸೆಕ್ ಇದೆ.

ಒಟ್ಟು 49.452 ಟಿಎಂಸಿ ನೀರಿನ ಸಂಗ್ರಹವಿದ್ದು, ಮಳೆ ಹೆಚ್ಚಾದರೆ ನದಿಗೆ ಬಿಡುವ ನೀರಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ.

Translate »