ವೇತನಕ್ಕೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ
ಮಂಡ್ಯ

ವೇತನಕ್ಕೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ

August 15, 2018

ಕೆ.ಆರ್.ಪೇಟೆ: ತಾಲೂಕಿನ ಗ್ರಾಪಂ ನೌಕರರಿಗೆ ನೀಡಬೇಕಿರುವ ವೇತನ ಬಿಡುಗಡೆ ಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಪಂಚಾ ಯಿತಿ ನೌಕರರ ಸಂಘದ ಸದಸ್ಯರು ಪಟ್ಟಣ ದಲ್ಲಿಂದು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಕೂಡಲೇ ಕಳೆದ 15ತಿಂಗಳಿಂದ ವೇತನ ನೀಡದ ತಾಲೂಕಿನ 34 ಗ್ರಾಪಂ ನೌಕರರಿಗೆ ವೇತನ ನೀಡುವಂತೆ ಆಗ್ರಹಿಸಿದರು.

ಗ್ರಾಪಂ ನೌಕರರ ಖಾತೆಗೆ ನೇರವಾಗಿ ವೇತನ ವನ್ನು ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆವಿಗೂ ಅದು ಜಾರಿಯಾ ಗಿಲ್ಲ. ಇದರಿಂದಾಗಿ ಗ್ರಾಪಂ ನೌಕರರು ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೇ ಸಂಕಷ್ಟ ಎದುರಿಸುವಂತಾಗಿದ್ದು, ಸಾಲ ಮಾಡಿ ಜೀವನ ನಡೆಸಬೇಕಾದ ದುಸ್ಥಿತಿ ಎದುರಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಗ್ರಾಪಂ ನೌಕರರ ಖಾತೆಗಳಿಗೆ ವೇತನವನ್ನು ಜಮಾ ಮಾಡಬೇಕು ಅಥವಾ ಪಿಡಿಓಗಳು ವೇತನ ನೀಡುವ ಮೂಲಕ ನೌಕ ರರು ಜೀವನ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಮೋದೂರು ನಾಗರಾಜು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಾಪಂ ಇಓ ವೈ.ಎನ್.ಚಂದ್ರಮೌಳಿ ಅವರು ಗ್ರಾಪಂಗಳಲ್ಲಿ ವಸೂಲಾದ ವಿವಿಧ ಕಂದಾಯದಲ್ಲ್ಲಿ ಗ್ರಾಪಂ ನೌಕರರಿಗೆ ಕೂಡಲೇ ವೇತನ ನೀಡಲು ಕ್ರಮ ವಹಿಸಬೇಕೆಂದು ಲಿಖಿತ ಆದೇಶವನ್ನು ಪಿಡಿಓ ಗಳಿಗೆ ಜಾರಿಗೊಳಿಸಿದ ನಂತರ ನೌಕರರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಗ್ರಾಪಂ ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಕೆ.ಕುಮಾರ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಂಜಯ್ಯ, ಗೌರವಾಧ್ಯಕ್ಷ ಶಿವಣ್ಣ, ಖಜಾಂಚಿ ರಾಮಕೃಷ್ಣಮೂರ್ತಿ, ತಾಲೂಕು ಉಪಾಧ್ಯಕ್ಷ ವೆಂಕ ಟೇಶ್, ಸಹ ಕಾರ್ಯದರ್ಶಿ ರವಿ, ಗಿರೀಶ್, ಕೃಷ್ಣ ಮೂರ್ತಿ, ಪದಾಧಿಕಾರಿಗಳಾದ ಎಂ.ಕೆ.ರಾಮೇ ಗೌಡ, ಶ್ರೀನಿವಾಸ್, ಕೃಷ್ಣೇಗೌಡ, ಮಂಜೇಗೌಡ, ದೇವರಾಜು, ರಾಮಕೃಷ್ಣೇಗೌಡ, ರಮೇಶ್, ಜವರೇಗೌಡ, ಕುಮಾರ್, ರಾಮಶೆಟ್ಟಿ, ನರ ಸಿಂಹಯ್ಯ ಸೇರಿದಂತೆ ನೂರಾರು ಗ್ರಾಪಂ ನೌಕರರು ಹಾಗೂ ಸಿಐಟಿಯು ಕಾರ್ಯಕರ್ತರಿದ್ದರು.

Translate »