ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಒತ್ತಾಯ
ಮಂಡ್ಯ

ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಒತ್ತಾಯ

October 4, 2018

ಕೆ.ಆರ್.ಪೇಟೆ:  ‘ಒಂದು ತಿಂಗ ಳೊಳಗೆ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಲನೆ ನೀಡದೇ ಇದ್ದಲ್ಲಿ ನ.2ರಿಂದ ಪಟ್ಟಣದ ತಾಲೂಕು ಕಚೇ ರಿಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗುವುದು’ ಎಂದು ದಸಂಸ ರಾಜ್ಯ ಸಂಘಟನಾ ಸಂಚಾ ಲಕ ಎಂ.ಬಿ.ಶ್ರೀನಿವಾಸ್ ತಾಲೂಕು ಆಡ ಳಿತಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ವಾರ್ಡ್ ನಂ.1ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವ ನಕ್ಕೆ 100ಘಿ100 ಅಳತೆಯ ನಿವೇಶನವನ್ನು ಕಾಯ್ದಿರಿಸಲಾಗಿದೆ. ಇದಕ್ಕಾಗಿ ಅಗತ್ಯ ಅನು ದಾನವೂ ಬಿಡುಗಡೆಯಾಗಿದೆ. ಆದರೆ, ಇದು ವರೆವಿಗೂ ಭವನದ ಕಾಮಗಾರಿ ಪ್ರಾರಂಭ ವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ದರು. ತಾಲೂಕಿನಲ್ಲಿ ದಲಿತ ಬಂಧುಗಳು ವಿವಾಹ, ಸಮಾವೇಶ, ದಲಿತ ಚಳುವಳಿ ಮತ್ತಿತರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಂಬೇಡ್ಕರ್ ಭವನ ಅನಿ ವಾರ್ಯವಾಗಿದೆ. ಖಾಸಗಿ ಸಮುದಾಯ ಭವನದಲ್ಲಿ ಸಾವಿರಾರು ಹಣ ನೀಡಿ ಕಾರ್ಯ ಕ್ರಮ ಮಾಡಲು ದಲಿತ ಬಂಧುಗಳಿಗೆ ಸಾಧ್ಯ ವಾಗುತ್ತಿಲ್ಲ.

ಹಾಗಾಗಿ, ಕೂಡಲೇ ಜಿಲ್ಲಾಡ ಳಿತ ಮತ್ತು ತಾಲೂಕು ಆಡಳಿತವು ಕ್ರಮ ವಹಿಸಿ ಪಟ್ಟಣದ ವಾರ್ಡ್ ನಂ.1ರಲ್ಲಿರುವ ಖಾಸಿಂಖಾನ್ ಸಮುದಾಯ ಭವನದ ಸಮೀಪ ಅಂಬೇಡ್ಕರ್ ಸಮುದಾಯ ಭವ ನಕ್ಕೆ ಗುರುತಿಸಿ, ನಕ್ಷೆ ತಯಾರಿಸಲಾಗಿದೆ. ಈ ಕುರಿತು ಇರುವ ಅಡೆತಡೆಗಳನ್ನು ನಿವಾರಿ ಸಲು ಜಿಲ್ಲಾಡಳಿತ ಮತ್ತು ತಾಲೂಕು ಆಡ ಳಿತ ಮುಂದಾಗಬೇಕು ಎಂದು ಒತ್ತಾಯಿಸಿ ದರು. ಅಂಬೇಡ್ಕರ್ ಭವನದ ಕಾಮಗಾರಿ ಆರಂಭಿಸಲು ನ.1ರವರೆಗೆ ಕಾಲಾವಕಾಶ ನೀಡಲಾಗುವುದು. ನಂತರವೂ ಕಾಮಗಾರಿ ಆರಂಭಿಸದೇ ಇದ್ದಲ್ಲಿ ನ.2ರಿಂದ ಕರ್ನಾ ಟಕ ದಲಿತ ಸಂಘರ್ಷ ಸಮಿತಿಯ ನೂರಾರು ಕಾರ್ಯಕರ್ತರೊಂದಿಗೆ ಪಟ್ಟಣದ ತಾಲೂಕು ಕಚೇರಿಯ ಮುಂದೆ ಮುಷ್ಕರ ಆರಂಭಿಸ ಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಸಂತೋಷ್ ಕುಮಾರ್, ತಾಲೂಕು ಸಂಚಾಲಕ ರಾಜೇಶ್, ತಾಲೂಕು ಸಂಘಟನಾ ಸಂಚಾಲಕರಾದ ಸೋಮರಾಜು, ಸುರೇಶ್, ರಾಜೇಶ್, ಜಗದೀಶ್, ಉಮೇಶ್, ದೇವರಾಜು, ಬಸ್ತಿ ರಾಜು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

Translate »