ಮಂಡ್ಯ ಜಿಲ್ಲೆಯಲ್ಲಿ ರೈತರು, ಸವಡೆಗಳ ಪ್ರತ್ಯೇಕ ಪ್ರತಿಭಟನೆ
ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ರೈತರು, ಸವಡೆಗಳ ಪ್ರತ್ಯೇಕ ಪ್ರತಿಭಟನೆ

October 4, 2018

ಮಂಡ್ಯ:  ಸೇವೆ ಖಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸವಡೆಗಳು ಮತ್ತು ರೈತ ಸಂಘದ ಕಾರ್ಯಕರ್ತರ ಮೇಲೆ ಸುಳ್ಳುದೂರು ದಾಖಲಿಸಿರುವುದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ರೈತರು ಮತ್ತು ನೀರಾವರಿ ಇಲಾಖೆ ಕಾರ್ಯ ಪಾಲಕ ಅಭಿಯಂತರ ಕಚೇರಿ ಮುಂದೆ ಸವಡೆಗಳು ಪ್ರತಿಭಟನೆ ನಡೆಸಿದರು.

ರೈತರ ಪ್ರತಿಭಟನೆ: ತಾಲೂಕಿನ ಶಿವಳ್ಳಿ ಪೊಲೀಸರು ಗಾಯಾಳುಗಳ ಮೇಲೆ ದ್ವೇಷದ ರಾಜಕಾರಣದಿಂದ ಪ್ರಕರಣ ದಾಖಲು ಮಾಡಿ ಗ್ರಾಮದಲ್ಲಿ ಅಶಾಂತಿಗೆ ಕಾರಣ ರಾಗಿದ್ದಾರೆ. ಸತ್ಯಾ ಸತ್ಯತೆಯನ್ನು ಪರಿಶೀ ಲಿಸಿ ನಿರಪರಾಧಿಗಳಾದ ಮನೋಜ್ ಕುಮಾರ್, ಸಂತೋಷ್, ಲಕ್ಷ್ಮಣ, ಕುಮಾರ, ಮಹೇಶ ಅವರ ಮೇಲೆ ಹೂಡಲಾಗಿರುವ ಮೊಕದ್ದಮೆಯನ್ನು ವಾಪಸ್ಸು ಪಡೆಯ ಬೇಕು ಎಂದು ಒತ್ತಾಯಿಸಿದರು.

ರೈತರು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲು ಮಾಡಿದಲ್ಲಿ ಜಿಲ್ಲಾ ದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗು ತ್ತದೆ ಎಂದು ಎಚ್ಚರಿಕೆ ನೀಡಿದರು.ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಡಿ. ಶಿವಪ್ರಕಾಶ್ ಮಾತನಾಡಿ, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸುರೇಶ್, ರಾಮಕೃಷ್ಣಯ್ಯ, ಬೊಮ್ಮೇಗೌಡ, ಲತಾಶಂಕರ್, ತನು, ನಾಗಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಸವಡೆಗಳು ಧರಣಿ: ವೇತನ ಬಿಡುಗಡೆ ಒತ್ತಾಯಿಸಿ ಸವಡೆಗಳು ಕಾವೇರಿ ನೀರಾ ವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂದೆ ಜಮಾ ಯಿಸಿದ ಸವಡೆಗಳು, ಕಳೆದ ಮೂರು ತಿಂಗಳುಗಳಿಂದ ವೇತನ ಬಿಡುಗಡೆ ಮಾಡದೆ ಅಧಿಕಾರಿಗಳು ಸತಾಯಿಸುತ್ತಿ ದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಜೀವನ ನಿರ್ವಹಣೆ ಹಾಗೂ ಹಬ್ಬ ಹರಿದಿನಗಳಲ್ಲಿ ಖರ್ಚಿಗೆ ಹಣವಿಲ್ಲದೆ ಪರದಾಡಬೇಕಾ ಗಿದೆ ಎಂದು ಆರೋಪಿಸಿದರು.

ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸವಡೆಗಳು ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಳೆದ ಆರು ತಿಂಗಳಿನಿಂದಲೂ ಡಿಎ ನೀಡಿಲ್ಲ. ಈ ಬಗ್ಗೆ ವಿಚಾರಿಸಿದರೆ ಸರ್ಕಾರದಿಂದ ಬಿಡುಗಡೆಯಾಗಿಲ್ಲ ಎಂದು ಸಬೂಬು ಹೇಳುತ್ತಾರೆ. ಇಲಾಖೆಯಲ್ಲಿ ದಾಖಲಾತಿ ಪರಿಶೀಲನೆ ವೇಳೆ ಸರ್ಕಾರದಿಂದ ಡಿಎ ಬಿಡುಗಡೆಯಾಗಿರುವುದು ತಿಳಿಯಿತು. ತಕ್ಷಣ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬೆಂಗಳೂರಿನಲ್ಲಿ ನಿಗಮದ ಸಭೆ ಇದ್ದು, ಈ ಬಗ್ಗೆ ಸಭೆಯಲ್ಲಿ ಉನ್ನತಾ ಧಿಕಾರಿಗಳ ಗಮನ ಸೆಳೆದು ಶೀಘ್ರ ವೇತನ ಬಿಡುಗಡೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸವಡೆಗಳ ಸಂಘದ ಕಾರ್ಯದರ್ಶಿ ಕೇಶವ, ಮುಖಂಡರಾದ ರಾಮೇಗೌಡ, ದೊಡ್ಡಯ್ಯ, ಶಶಿಧರ್, ಜೈ ಕುಮಾರ, ಕೆಂಪೇಗೌಡ, ರವಿ, ಮಹೇಶ, ಕುಮಾರ ಇತರರು ಪಾಲ್ಗೊಂಡಿದ್ದರು.

Translate »