ಬೆಂಗಳೂರು: ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರ ಗಳಿಗೆ ಇಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಸಣ್ಣಪುಟ್ಟ ಘಟನೆ ಹೊರತು ಪಡಿಸಿ, ಶಾಂತಿಯುತ ಶೇ. 68ರಷ್ಟು ಮತ ದಾನವಾಗಿದೆ. ಮೊದಲ ಹಂತದಲ್ಲಿ ರಾಜ್ಯದಲ್ಲಿ ಶೇ. 69.58ರಷ್ಟು ಮತದಾನವಾಗಿತ್ತು. ಕಳೆದ 18 ರಂದು ಹಳೇ ಮೈಸೂರು ಭಾಗದ ಇಷ್ಟೇ ಪ್ರಮಾಣದ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಆ ಸಂದರ್ಭದ ಲ್ಲಿಯೂ ಯಾವುದೇ ಅಹಿತಕರ ಘಟನೆ ಗಳು ನಡೆದಿರಲಿಲ್ಲ. ಉತ್ತರಾರ್ಧ ಭಾಗದ ಮತದಾರರೂ ಕೂಡಾ ಶಾಂತಿಯುತ ವಾಗಿ ಮತ ಚಲಾಯಿಸಿದ್ದಾರೆ….
ತಾಯಿ ಆಶೀರ್ವಾದ ಪಡೆದ ನಂತರ ಮತದಾನ ಮಾಡಿದ ಪ್ರಧಾನಿ ಮೋದಿ
April 24, 2019ಅಹ್ಮದಾಬಾದ್: ಗುಜರಾತ್ನಲ್ಲಿ ಮಂಗಳವಾರ ಮತದಾನದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತದಾನ ಮಾಡುವ ಮುನ್ನ ತಮ್ಮ ತಾಯಿ ಹೀರಾಬೆನ್ ಮೋದಿಯವರ ಆಶೀರ್ವಾದ ಪಡೆದರು. ಅಹಮದಾ ಬಾದ್ ಸಮೀಪ ರೈಸನ್ ಗ್ರಾಮದಲ್ಲಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ತಮ್ಮ ಕಿರಿಯ ಪುತ್ರ ಪಂಕಜ್ ಮೋದಿ ಜೊತೆ ವಾಸಿಸುತ್ತಿದ್ದು, ಅಲ್ಲಿಗೆ ತೆರಳಿದ್ದ ಮೋದಿ ತಾಯಿಯ ಆಶೀರ್ವಾದ ಪಡೆದರು. ಗಾಂಧಿನಗರದ ರಾಜಭವನದಲ್ಲಿ ಕಳೆದ ರಾತ್ರಿ ತಂಗಿದ್ದ ನರೇಂದ್ರ ಮೋದಿ ಇಂದು ಬೆಳಿಗ್ಗೆ ಕೇವಲ ಒಂದು ಭದ್ರತಾ ವಾಹನ ದೊಂದಿಗೆ…
ಮೈಸೂರು-ಕೊಡಗು ಶೇ.68.85, ಮಂಡ್ಯ ಶೇ. 80.23, ಚಾಮರಾಜನಗರ ಶೇ.74.11, ಹಾಸನದಲ್ಲಿ ಶೇ.77.28 ದಾಖಲೆ ಮತದಾನ
April 19, 2019ಮೈಸೂರು: ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 18,95,056 ಮತದಾರರಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಾದ್ಯಂತ ಸ್ಥಾಪಿಸಿದ್ದ ಒಟ್ಟು 2,187 ಮತಗಟ್ಟೆಗಳಲ್ಲೂ ಕುಡಿಯುವ ನೀರು, ಶೌಚಾಲಯ, ರ್ಯಾಂಪ್, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಪ್ರತೀ ಮತಗಟ್ಟೆಯ ಬಳಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು, ಕ್ರಮ ಸಂಖ್ಯೆ, ಚಿಹ್ನೆಗಳನ್ನು ಬರೆದು ಅಂಟಿಸಲಾಗಿತ್ತು. ಮತಗಟ್ಟೆ…
ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರ
April 19, 2019ಮೈಸೂರು: ಲೋಕ ಸಮರದ ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು, ಇದೀಗ ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದೆ. ಮತದಾರ ಯಾರಿಗೆ ಒಲಿದಿದ್ದಾನೆ ಎಂಬುದು ಮೇ 23ರಂದು ಬಹಿ ರಂಗಗೊಳ್ಳಲಿದೆ. ಇಂದು ರಾತ್ರಿ ವೇಳೆಗೆ ಮತಗಳಿರುವ ಸೀಲ್ ಮಾಡಿದ ಇವಿಎಂಗಳನ್ನು ಆಯಾ ಮಸ್ಟರಿಂಗ್ ಕೇಂದ್ರಗಳಿಗೆ ತಂದು ಪರಿಶೀಲಿಸಿದ ನಂತರ ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿ ಇರಿಸಿ ದಿನದ 24 ಗಂಟೆಯೂ ಮೂರು ಸುತ್ತಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬಿಜೆಪಿಯ ಪ್ರತಾಪ್ ಸಿಂಹ, ಕಾಂಗ್ರೆಸ್ಸಿನ…
ಜೆಡಿಎಸ್-ಸುಮಲತಾ ಬೆಂಬಲಿಗರ ಮಾರಾಮಾರಿ
April 19, 2019ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತಾದರೂ ಎರಡು ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಓರ್ವ ಗಾಯಗೊಂಡ ಬಗ್ಗೆ ವರದಿಯಾಗಿದೆ. ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮ ದಲ್ಲಿ ಸುಮಲತಾ ಅಂಬರೀಶ್ ಮತದಾನ ಮಾಡಿ ತೆರಳುತ್ತಿ ದ್ದಂತೆಯೇ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಯವರು ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಅವರ ಬೆಂಬ ಲಿಗರು ಜಯಕಾರ ಕೂಗಿದಾಗ ನಿಖಿಲ್ ತಮ್ಮ ಕಾರಿನಿಂದ ಬೆಂಬಲಿಗರತ್ತ…
ಶೇ.67.79 ಶಾಂತಿಯುತ ಮತದಾನ
April 19, 2019ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆದ 14 ಲೋಕಸಭಾ ಕ್ಷೇತ್ರಗಳ ಚುನಾವಣೆ ಯಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತ ಮತದಾನವಾಗಿದ್ದು, ಒಟ್ಟಾರೆ ಶೇ.67.79 ರಷ್ಟು ಮತ ಚಲಾವಣೆಯಾಗಿದೆ. ಅಬ್ಬರದ ಪ್ರಚಾರ, ನಂತರ ಈಗ ಮತದಾನ ಮುಗಿಸಿ ನಿಟ್ಟುಸಿರು ಬಿಟ್ಟಿರುವ ಅಭ್ಯರ್ಥಿ ಗಳು ಫಲಿತಾಂಶಕ್ಕಾಗಿ ಬರೋಬ್ಬರಿ 35 ದಿನಗಳ ಕಾಲ ಕಾಯಬೇಕಿದೆ. ಪ್ರಚಾರಕ್ಕೆ ಕೇವಲ 15 ದಿನಗಳು ದೊರೆತರೆ, ಫಲಿತಾಂಶಕ್ಕೆ ಹಲವು ದಿನ ಎದುರು ನೋಡಬೇಕಾದ ಪರಿಸ್ಥಿತಿ ಕಣದಲ್ಲಿರುವ 241 ಅಭ್ಯರ್ಥಿಗಳಿಗೆ ಎದುರಾಗಿದೆ. ಇದೇ ಮೊದಲ ಬಾರಿಗೆ 14…
ಮೈಸೂರಲ್ಲಿ ಜನ ಸಂಚಾರ ವಿರಳ
April 19, 2019ಮೈಸೂರು: ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಮೈಸೂರಿನ ಹೃದಯ ಭಾಗಗಳೂ ಸೇರಿದಂತೆ ಹಲ ವೆಡೆ ಜನ ಸಂಚಾರ ವಿರಳವಾಗಿತ್ತು. ಮೈಸೂರಿನ ಕೆಆರ್ ವೃತ್ತ, ಚಾಮರಾಜ ವೃತ್ತ, ದೊಡ್ಡ ಗಡಿಯಾರ ವೃತ್ತ ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಿತ್ಯ ಇರುತ್ತಿದ್ದಷ್ಟು ಜನ ಸಂಚಾರವೇ ಇರಲಿಲ್ಲ. ಬಹುತೇಕರು ಮತದಾನ ಪ್ರಕ್ರಿಯೆಯಲ್ಲಿ ತಲ್ಲೀನರಾದರೆ, ರಜೆಯೊಂದಿಗೆ ಬಿಸಿಲಿನ ಬೇಗೆ ಯಿಂದಲೂ ಅನೇಕರು ಹೊರ ಬಾರದಿರಬಹುದು. ಸಾಮಾನ್ಯವಾಗಿ ನಿತ್ಯ ಇರುತ್ತಿದ್ದ ಜನ ಸಂದಣಿ…
ನೂರಾರು ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದೇಕೆ?
April 19, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನೂರಾರು ಮಂದಿ ಮತದಾನದಿಂದ ವಂಚಿತರಾಗಿದ್ದಾರೆ. ಹಲವು ವರ್ಷ ಗಳಿಂದ ಮತದಾನ ಮಾಡಿರುವ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಬಗ್ಗೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಅವರು ಮತದಾನ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಮತದಾರರ ಹಕ್ಕು. ಈ ಹಕ್ಕು ಚಲಾವಣೆ ಮಾಡಿ ಪ್ರಜಾಪ್ರಭುತ್ವದಲ್ಲಿ ನಮಗೆ ಇಷ್ಟವಾದ ವ್ಯಕ್ತಿ ಯನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬರ ಕರ್ತ ವ್ಯವೂ ಹೌದು. ಕಳೆದ ಮಹಾನಗರಪಾಲಿಕೆ ಚುನಾ ವಣೆ, ವಿಧಾನ…
ಮೈಸೂರು ಎನ್ಆರ್ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಶೇ.60.83 ಮತದಾನ
April 19, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಚುನಾವಣೆ ಸಂಬಂಧ ಎನ್ಆರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಶೇ.60.83ರಷ್ಟು ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಗಾಂಧಿನಗರ, ಉದಯಗಿರಿ, ಕ್ಯಾತ ಮಾರನಹಳ್ಳಿ, ಗೌಸಿಯಾನಗರ, ಶಕ್ತಿನಗರ ಸೇರಿದಂತೆ ಕ್ಷೇತ್ರದ ವಿವಿಧೆಡೆಯಲ್ಲಿ ಒಟ್ಟು 282 ಮತಗಟ್ಟೆಗಳಲ್ಲಿ ಕ್ಷೇತ್ರದ ಮತ ದಾರರು ಮತ ಚಲಾಯಿಸಿದರು. ಬೆಳಿಗ್ಗೆ 9 ಗಂಟೆ ವೇಳೆ ಶೇ.4.48 ಮತ ಚಲಾವಣೆ ಆಗುವ ಮೂಲಕ ನಿಧಾನಗತಿಯಲ್ಲಿದ್ದ ಮತದಾನ, ಬೆಳಿಗ್ಗೆ 11ರ ವೇಳೆಗೆ ಶೇ.10.17ರಷ್ಟು ಹೆಚ್ಚಳ ಗೊಂಡಿತು. ಆ ಬಳಿಕ ಮತದಾನದ ಬಿರುಸು ಗೊಂಡಿದ್ದು, ಮಧ್ಯಾಹ್ನ…
ಕೆ.ಆರ್.ಕ್ಷೇತ್ರದಲ್ಲಿ ಆರಂಭದಲ್ಲಿ ಉತ್ಸಾಹ ಬಿಸಿಲೇರುತ್ತಿದ್ದಂತೆ ನಿರುತ್ಸಾಹ
April 19, 2019ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ ಚುರುಕಾಗಿ ಆರಂಭವಾದ ಮತ ದಾನ ಮಧ್ಯಾಹ್ನದ ವೇಳೆಗೆ ಇಳಿಮುಖ ವಾಯಿತು. ಆದರೆ ಮತ್ತೆ ಸಂಜೆ ಬಿರುಸಾಗಿ ಸಾಗಿತು. ಕ್ಷೇತ್ರದ ಎಲ್ಲಾ 270 ಮತಗಟ್ಟೆಗಳಲ್ಲಿಯೂ ಯಾವುದೇ ಗೊಂದಲವಿಲ್ಲದೆ ಶಾಂತಿಯುತ ಶೇ.60.36 ರಷ್ಟು ಮತದಾನ ನಡೆಯಿತು. ಕೆ.ಆರ್.ಕ್ಷೇತ್ರದಲ್ಲಿ 1,20,146 ಪುರು ಷರು, 1,23,568 ಮಹಿಳೆಯರು ಹಾಗೂ 22 ತೃತೀಯ ಲಿಂಗಿಗಳು ಸೇರಿ ಒಟ್ಟು 2,43, 736 ಮತದಾರರಿದ್ದು, ಇಂದು ಬೆಳಿಗ್ಗೆ ಎಲ್ಲ ಮತಗಟ್ಟೆಗಳಲ್ಲಿಯೂ ನಿಗದಿತ ಸಮಯದಲ್ಲಿ ಮತದಾನ ಆರಂಭವಾಯಿತು. ಆರಂಭದಲ್ಲಿ ಮತ…