ನೂರಾರು ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದೇಕೆ?
ಮೈಸೂರು

ನೂರಾರು ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದೇಕೆ?

April 19, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನೂರಾರು ಮಂದಿ ಮತದಾನದಿಂದ ವಂಚಿತರಾಗಿದ್ದಾರೆ. ಹಲವು ವರ್ಷ ಗಳಿಂದ ಮತದಾನ ಮಾಡಿರುವ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಬಗ್ಗೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಅವರು ಮತದಾನ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಮತದಾರರ ಹಕ್ಕು. ಈ ಹಕ್ಕು ಚಲಾವಣೆ ಮಾಡಿ ಪ್ರಜಾಪ್ರಭುತ್ವದಲ್ಲಿ ನಮಗೆ ಇಷ್ಟವಾದ ವ್ಯಕ್ತಿ ಯನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬರ ಕರ್ತ ವ್ಯವೂ ಹೌದು. ಕಳೆದ ಮಹಾನಗರಪಾಲಿಕೆ ಚುನಾ ವಣೆ, ವಿಧಾನ ಸಭಾ ಚುನಾವಣೆಗಳಲ್ಲಿ ಮತದಾರರ ಪಟ್ಟಿಯಲ್ಲಿದ್ದ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕ ಲಾಗಿದೆ. ಇದರಿಂದ ಸುಮಾರು ಶೇ.30ರಷ್ಟು ಮತ ದಾರರು ಮತದಾನದಿಂದ ವಂಚಿತರಾಗಿದ್ದಾರೆ.

ಕೋಟ್ಯಾಂತರ ರೂ. ಖರ್ಚು ಮಾಡಿ ಸ್ವೀಪ್ ಕಾರ್ಯ ಕ್ರಮದಡಿ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸರ್ಕಾರ ಪ್ರಚಾರ ಮಾಡಿದೆ. ಆದರೆ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡ ಲಾಗಿರುವ ಬಗ್ಗೆ ಕೆ.ವಿ.ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಕಳೆದ 20 ವರ್ಷಗಳಿಂದ ಒಂದೇ ಮನೆ ಯಲ್ಲೇ ವಾಸವಾಗಿರುವ ಮತದಾರರು ಹಲವು ಚುನಾವಣೆಗಳಲ್ಲಿ ಈಗಾಗಲೇ ಮತ ಚಲಾಯಿಸಿ ದ್ದಾರೆ. ಆದರೆ ಈ ಮತದಾರರನ್ನು ಮತದಾರರ ಪಟ್ಟಿಯಿಂದ ಈಗ ತೆಗೆದುಹಾಕಲಾಗಿದೆ ಎಂದು ಮತದಾರರಲ್ಲಿ ಗೊಂದಲ ಉಂಟು ಮಾಡಿ, ಮತ ದಾನದ ಬಗ್ಗೆ ನಿರುತ್ಸಾಹ ತೋರುವಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿನ ಈ ಲೋಪದಿಂದ ಹಲವು ಮತದಾರರು ಒಟ್ಟುಗೂಡಿ ನಮಗೆ ಮತದಾನಕ್ಕೆ ಅವಕಾಶ ಕೊಡಿ ಎಂದು ಸಂಬಂ ಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಆದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿ ರುವುದರಿಂದ ಮತದಾನ ಮಾಡಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಇದರಿಂದ ನಮ್ಮ ಹಕ್ಕಿನಿಂದ ನಾವು ವಂಚಿತರಾಗಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಪಾಲ್ಗೊಳ್ಳಲು ಜನರಿಗೆ ಅವಕಾಶವಿಲ್ಲದೆ ಇರುವುದು ದುರಂತ ಎಂದು ಬೇಸರದಿಂದಲೇ ಹಲವರು ತಿಳಿಸಿದ್ದಾರೆ.

Translate »