ಮಂಡ್ಯ: ಚುನಾವಣಾ ಅಬ್ಬರ ಮುಗಿದ ಮರುದಿನ ಶುಕ್ರವಾರ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅವರು ಬರ್ಮುಡಾ ನಿಕ್ಕರ್, ಬಿಳಿ ಟಿ-ಶರ್ಟ್ ಮತ್ತು ಬಿಳಿ ಕ್ಯಾಪ್ ಧರಿಸಿ ಮಂಡ್ಯ ಜಿಲ್ಲೆಯ ವಿವಿಧೆಡೆ ಜಾಲಿ ರೈಡ್ ಮೂಲಕ ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗೆ ಕಾಲ ಕಳೆದರು. ಇಂದು ಬೆಳಿಗ್ಗೆ ಬೆಂಗಳೂರಿನಿಂದ ಕಾರಿ ನಲ್ಲಿ ಹೊರಟ ಅವರು, ಮದ್ದೂರಿನಲ್ಲಿ ಕೆಲ ಸ್ನೇಹಿತರು ಮತ್ತು ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಂಡ್ಯ ನಗರಕ್ಕೆ ಆಗ ಮಿಸಿದರು. ಇಂಡುವಾಳು…
ಇಂದು ಅಗ್ರಹಾರಬಾಚಹಳ್ಳಿ ಸಿಡಿ ಹಬ್ಬ
April 20, 2019ಕೆ.ಆರ್.ಪೇಟೆ: ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದೇವತೆ ಶ್ರೀ ಲಕ್ಷ್ಮಿದೇವಿ(ಬಾಚಳ್ಳಮ್ಮ) ಅಮ್ಮನವರ ಸಿಡಿ ಹಬ್ಬದ ಅಂಗವಾಗಿ ನಡೆಯುವ ಬ್ರಹ್ಮ ರಥೋತ್ಸವವು ಇದೇ ಏ.20ರಂದು ಮಧ್ಯಾಹ್ನ 3ಗಂಟೆಗೆ ನಡೆಯಲಿದೆ. ಏ.18ರಂದು ರಂಗಕುಣಿತ, ಏ.19 ರಂದು ಬೆಳಿಗ್ಗೆ ಹೂವಿನ ರಥೋತ್ಸವ, ಸಿಡಿ, ಬಾಯಿಬೀಗ, ಕೊಂಡೋತ್ಸವ, ಮಡೆ ಉತ್ಸವ, ಕನ್ನಂಕಾಡಿ ಉತ್ಸವ ಗಳು, ರಥಕ್ಕೆ ಕಳಸೋತ್ಸವ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆದವು. ಏ.20 ರಂದು ಬೆಳಿಗ್ಗೆ ಪಲ್ಲಕ್ಕಿ ರಥೋತ್ಸವ, ಮಧ್ಯಾಹ್ನ 3 ಗಂಟೆಗೆ ದೇವಿಯ ಮಹಾ ರಥೋತ್ಸವ ನಡೆಯಲಿದೆ. ಏ.21ರಂದು ಜಾತ್ರೆ,…
ಪಾಂಡವಪುರದಲ್ಲಿ ಗುಡ್ ಫ್ರೈಡೇ ಆಚರಣೆ
April 20, 2019ಪಾಂಡವಪುರ: ಪಟ್ಟಣದ ಸ್ವರ್ಗಾರೋಹಣ ಮಾತೆಯ ದೇವಾ ಲಯದಲ್ಲಿ (ಚರ್ಚ್‍ನಲ್ಲಿ )ಕೈಸ್ತ ಭಾಂಧವರು ಶ್ರದ್ದೆ, ಭಕ್ತಿಯಿಂದ ಪ್ರಭು ಕ್ರಿಸ್ತ ಏಸುವಿನ ಶಿಲುಬೆಯನ್ನು ಹೊತ್ತು ಪಾಡು ಮರಣ ಯಾತನೆಯನ್ನು ಧ್ಯಾನಿಸಿ ಪ್ರಾರ್ಥಿಸಿ ಪೂಜಿಸಿದರು. ಮಕ್ಕಳಿಂದ ಬೈಬಲ್ ರೂಪಕ ಪ್ರದರ್ಶನ ಗಮನ ಸೆಳೆಯಿತು. ಶುಭ ಶುಕ್ರವಾರದ ಪ್ರಯುಕ್ತ ಏರ್ಪಡಿ ಸಿದ ವಿಶೇಷ, ಆರಾಧನೆಯಲ್ಲಿ ಚರ್ಚಿನ ಧರ್ಮಗುರು ಫಾದರ್ ಟಿ.ವಿನ್ಸೆಂಟ್‍ರವರ ನೇತೃತ್ವದಲ್ಲಿ ಪೂಜಾ ವಿಧಿಗಳನ್ನು ನೇರವೇರಿಸಿದರು. ಪ್ರಭು ಯೇಸು ಕ್ರಿಸ್ತರು ಮನುಕುಲದ ಪಾಪಗಳ ಪರಿಹಾರಕ್ಕಾಗಿ ಬಲಿದಾನವಾಗಿ ಶಿಲುಬೆಯಲ್ಲಿ ಪ್ರಾಣಾ ರ್ಪಣೆ ಮಾಡಿದ ಪವಿತ್ರ…
ಮದ್ದೂರಿನಲ್ಲಿ ಹನುಮ ಜಯಂತಿ
April 20, 2019ಮದ್ದೂರು: ಪಟ್ಟಣದ ಇತಿಹಾಸ ಪ್ರಸಿದ್ದ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಶುಕ್ರವಾರ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 6 ಗಂಟೆಗೆ ಸುಪ್ರಭಾತ, 7 ಕ್ಕೆ ಜೇನುತುಪ್ಪದ ಅಭಿ ಷೇಕ, 7.30 ಕ್ಕೆ ಪಂಚಾಮೃತ ಅಭಿಷೇಕ, 9.30 ಕ್ಕೆ ಅಲಂಕಾರ, 10 ಗಂಟೆಗೆ ಮಹಾಮಂಗಳಾರತಿ, 12.15 ಕ್ಕೆ ರಥೋತ್ಸವ, 12.30 ಕ್ಕೆ ಪ್ರಸಾದ ವಿತರಣೆ, ಸಂಜೆ 7 ಗರುಡೋತ್ಸವ, 7.30 ಕ್ಕೆ ಚಿಕ್ಕ ಗುರುಡೋತ್ಸವ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾಧಿಗಳು ದೇವರಿಗೆ ವಿಶೇಷ…
ಮೈಸೂರು-ಕೊಡಗು ಶೇ.68.85, ಮಂಡ್ಯ ಶೇ. 80.23, ಚಾಮರಾಜನಗರ ಶೇ.74.11, ಹಾಸನದಲ್ಲಿ ಶೇ.77.28 ದಾಖಲೆ ಮತದಾನ
April 19, 2019ಮೈಸೂರು: ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 18,95,056 ಮತದಾರರಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಾದ್ಯಂತ ಸ್ಥಾಪಿಸಿದ್ದ ಒಟ್ಟು 2,187 ಮತಗಟ್ಟೆಗಳಲ್ಲೂ ಕುಡಿಯುವ ನೀರು, ಶೌಚಾಲಯ, ರ್ಯಾಂಪ್, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಪ್ರತೀ ಮತಗಟ್ಟೆಯ ಬಳಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು, ಕ್ರಮ ಸಂಖ್ಯೆ, ಚಿಹ್ನೆಗಳನ್ನು ಬರೆದು ಅಂಟಿಸಲಾಗಿತ್ತು. ಮತಗಟ್ಟೆ…
ಜೆಡಿಎಸ್-ಸುಮಲತಾ ಬೆಂಬಲಿಗರ ಮಾರಾಮಾರಿ
April 19, 2019ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತಾದರೂ ಎರಡು ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಓರ್ವ ಗಾಯಗೊಂಡ ಬಗ್ಗೆ ವರದಿಯಾಗಿದೆ. ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮ ದಲ್ಲಿ ಸುಮಲತಾ ಅಂಬರೀಶ್ ಮತದಾನ ಮಾಡಿ ತೆರಳುತ್ತಿ ದ್ದಂತೆಯೇ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಯವರು ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಅವರ ಬೆಂಬ ಲಿಗರು ಜಯಕಾರ ಕೂಗಿದಾಗ ನಿಖಿಲ್ ತಮ್ಮ ಕಾರಿನಿಂದ ಬೆಂಬಲಿಗರತ್ತ…
ನಿಂತಿದ್ದ ಟಿಪ್ಪರ್‍ಗೆ ಮಾರುತಿ ವ್ಯಾನ್ ಡಿಕ್ಕಿ
April 18, 2019ಗೃಹಿಣಿ ಸಾವು; ಮೂವರಿಗೆ ಗಾಯ ಮತದಾನಕ್ಕಾಗಿ ಬೆಂಗಳೂರಿನಿಂದ ಕೊಡಗಿಗೆ ತೆರಳುತ್ತಿದ್ದ ಕುಟುಂಬ ಶ್ರೀರಂಗಪಟ್ಟಣ: ನಿಂತಿದ್ದ ಟಿಪ್ಪರ್‍ಗೆ ಮಾರುತಿ ವ್ಯಾನ್ ಡಿಕ್ಕಿ ಹೊಡೆದ ಪರಿ ಣಾಮ ಗೃಹಿಣಿ ಸಾವನ್ನಪ್ಪಿ ಮೂವರು ತೀವ್ರವಾಗಿ ಗಾಯ ಗೊಂಡ ಘಟನೆ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮ ದಲ್ಲಿ ಬುಧವಾರ ಸಂಭವಿಸಿದೆ. ಮೂಲತಃ ಕೊಡಗಿನವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಆಶಾ (50) ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಪತಿ ಅಣ್ಣಯ್ಯ (60) ಮತ್ತು ಅವರ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಳೆ…
ಮಣ್ಣಿನ ಮಕ್ಕಳು 1 ಲೋಟ ಹಾಲು ಕರೆದು ತೋರಿಸಲಿ: ಸ್ವಾಭಿಮಾನ ಸಮಾವೇಶದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸವಾಲು
April 17, 2019ಮಂಡ್ಯ: ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರಲ್ಲ, 1 ಲೋಟ ಹಾಲು ಕರೆದು ತೋರಿಸಲಿ, ಹಸು ಕರು ಹಾಕಿದಾಗ ಅದಕ್ಕೆ ಏನು ಆಹಾರ ಕೊಡು ತ್ತಾರೋ ಹೇಳಲಿ ನೋಡೋಣ ಎಂದು ಚಾಲೆಂಜಿಂಗ್ ಸ್ಟಾರ್ ಎಂದೇ ಹೆಸರಾಗಿರುವ ದರ್ಶನ್ ತೂಗುದೀಪ ಅವರು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ, ನಿಖಿಲ್‍ಗೆ ಸವಾಲು ಹಾಕಿದರು. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಭಿಮಾನ ಸಮಾವೇಶದಲ್ಲಿ ಜೋರು ಧ್ವನಿ ಯಲ್ಲಿ ಮಾತನಾಡಿದ `ಯಜಮಾನ’ ದರ್ಶನ್, ಅಮ್ಮ ಗೆದ್ದರೆ `ಮಂಡ್ಯ ಅಂದರೆ ಏನು’ ಅಂತಾ…
ಪಾಂಡವಪುರದಲ್ಲಿ ಪುತ್ರ ನಿಖಿಲ್‍ಗಾಗಿ ಅಮ್ಮನ ಪ್ರಚಾರ
April 17, 2019ಪಾಂಡವಪುರ: ಜಿಲ್ಲೆಯ ಜನತೆ ನಿಖಿಲ್ ಕುಮಾರಸ್ವಾಮಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಶಾಸಕಿ, ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಮನವಿ ಮಾಡಿದರು. ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕಡೆಯ ದಿನವಾದ ಮಂಗಳ ವಾರ ಪಾಂಡವಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ಪತಿ ಹೆಚ್.ಡಿ.ಕುಮಾರಸ್ವಾಮಿ, ಮಾವ ಹೆಚ್.ಡಿ.ದೇವೇಗೌಡ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಮಂಡ್ಯ ಜಿಲ್ಲೆಯಲ್ಲಿ ಪುತ್ರ ನಿಖಿಲ್ ಸಹ ರಾಜಕೀಯ ಜೀವನ ಆರಂಭಿಸಿದ್ದಾನೆ. ಜಿಲ್ಲೆಯ ಮಹಾ ಜನತೆ ದೇವೇಗೌಡರು, ಕುಮಾರಸ್ವಾಮಿ…
ಮುಸ್ಲಿಂ ಮುಖಂಡರಿಂದ ಸುಮಲತಾ ಪರ ಮತಯಾಚನೆ
April 17, 2019ಕೆ.ಆರ್.ಪೇಟೆ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮುಸ್ಲಿಂ ಮುಖಂಡರು ಮುಸ್ಲಿಂ ಬಂಧುಗಳ ಮನೆ ಮನೆಗೆ ತೆರಳಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಮತಯಾಚನೆ ಮಾಡಿದರು. ಅಂಬರೀಶ್ ಅವರು ಯಾವತ್ತೂ ಜಾತಿ-ಧರ್ಮದ ರಾಜಕಾರಣ ಮಾಡಿದ ವ್ಯಕ್ತಿಯಲ್ಲ. ಕೇಂದ್ರ-ರಾಜ್ಯ ಸಚಿವರಾಗಿ ಎಲ್ಲಾ ಧರ್ಮ, ಜಾತಿಯವರಿಗೂ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮುಸ್ಲಿಮ ರನ್ನು ಒಡಹುಟ್ಟಿದವರಂತೆ ಪ್ರೀತಿ ವಿಶ್ವಾಸ ದಿಂದ ಕಂಡಿದ್ದಾರೆ, ಕೈಲಾದ ನೆರವು ನೀಡಿದ್ದಾರೆ. ಹಾಗಾಗಿ ಅಂಬರೀಶ್ ಅವರ ಸೇವೆಯನ್ನು ಪರಿಗಣಿಸಿ ಅವರ ಪತ್ನಿ ಪಕ್ಷೇತರ…