ಪಾಂಡವಪುರದಲ್ಲಿ ಪುತ್ರ ನಿಖಿಲ್‍ಗಾಗಿ ಅಮ್ಮನ ಪ್ರಚಾರ
ಮಂಡ್ಯ

ಪಾಂಡವಪುರದಲ್ಲಿ ಪುತ್ರ ನಿಖಿಲ್‍ಗಾಗಿ ಅಮ್ಮನ ಪ್ರಚಾರ

April 17, 2019

ಪಾಂಡವಪುರ: ಜಿಲ್ಲೆಯ ಜನತೆ ನಿಖಿಲ್ ಕುಮಾರಸ್ವಾಮಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಶಾಸಕಿ, ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಮನವಿ ಮಾಡಿದರು.

ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕಡೆಯ ದಿನವಾದ ಮಂಗಳ ವಾರ ಪಾಂಡವಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ಪತಿ ಹೆಚ್.ಡಿ.ಕುಮಾರಸ್ವಾಮಿ, ಮಾವ ಹೆಚ್.ಡಿ.ದೇವೇಗೌಡ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಮಂಡ್ಯ ಜಿಲ್ಲೆಯಲ್ಲಿ ಪುತ್ರ ನಿಖಿಲ್ ಸಹ ರಾಜಕೀಯ ಜೀವನ ಆರಂಭಿಸಿದ್ದಾನೆ. ಜಿಲ್ಲೆಯ ಮಹಾ ಜನತೆ ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಕೊಟ್ಟಂತೆಯೇ ನಿಖಿಲ್‍ಗೂ ಬೆಂಬಲ ಕೊಡಿ ಎಂದು ಮನವಿ ಮಾಡಿದರು.

ಸಿಎಂ ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿ ಗಾಗಿ ಸಾವಿರಾರು ಕೋಟಿ ಅನುದಾನ ಬಿಡು ಗಡೆ ಮಾಡಿದ್ದಾರೆ. ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಕಾರ್ಖಾನೆ ನಿರ್ಮಾಣಕ್ಕೆ 400 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ರೈತರ ಸಾಲ ಮನ್ನಾ, ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿರಹಿತ ಸಾಲ ಸೇರಿ ದಂತೆ ಹಲವು ಯೋಜನೆ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಿಖಿಲ್ ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ರಾಜ್ಯ ಸರಕಾರ ಹಾಗೂ ಜಿಲ್ಲೆಯ ಅಭಿ ವೃದ್ಧಿಗೆ ಕೊಂಡಿಯಾಗಿ ಕೆಲಸ ಮಾಡುವು ದಕ್ಕಾಗಿ ನಿಖಿಲ್ ಅವರನ್ನು ಮೈತ್ರಿ ಅಭ್ಯರ್ಥಿ ಯನ್ನಾಗಿಸಿದ್ದೇವೆ. ನಿಮ್ಮ ಮನೆಯ ಮಗ ಪುಟ್ಟರಾಜು ಈ ಚುನಾವಣೆಯ ನೇತೃತ್ವವನ್ನು ವಹಿಸಿದ್ದೇನೆ. ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಕೊಟ್ಟಂತೆಯೇ ಈ ಬಾರಿಯೂ ಬೆಂಬಲ ಕೊಟ್ಟು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು. ಜಿಪಂ ಸದಸ್ಯ ಸಿ. ಅಶೋಕ್, ಮಾಜಿ ಸದಸ್ಯೆ ನಾಗಮ್ಮ, ತಾಪಂ ಸದಸ್ಯರಾದ ಸಿ.ಎಸ್.ಗೋಪಾಲ ಗೌಡ, ಪೂರ್ಣಿಮಾ ಮತ್ತಿತರರು ಹಾಜರಿದ್ದರು.

ತಾಲೂಕಿನ ಹಿರೇಮರಳಿಯಲ್ಲಿ ಬೆಳಿಗ್ಗೆ 11ಕ್ಕೆ ಪ್ರಚಾರ ಆರಂಭಿಸಿದ ಅನಿತಾ ಕುಮಾರ ಸ್ವಾಮಿ, ಕೆ.ಬೆಟ್ಟಹಳ್ಳಿ, ಚಿನಕುರಳಿ, ಗುಮ್ಮನ ಹಳ್ಳಿ, ರಾಗಿಮುದ್ದನಹಳ್ಳಿ, ಡಿಂಕಾ, ಡಿಂಕಾ ಶೆಟ್ಟಹಳ್ಳಿ, ಮಲ್ಲಿಗೆರೆ, ಬಿಂಡಹಳ್ಳಿ, ಬನ್ನಂಗಾಡಿ ಯಲ್ಲಿ ಉರಿ ಬಿಸಿಲಿನಲ್ಲಿಯೇ ರೋಡ್ ಶೋ ನಡೆಸಿದರು. ಅನಿತಾ ಅವರಿಗೆ ಗ್ರಾಮಗಳಲ್ಲಿ ಮಹಿಳೆಯರು ಆರತಿ ಬೆಳಗಿ ಹೂ ಹಾರ ಹಾಕಿ ಸ್ವಾಗತಿಸಿದರು.

Translate »