ಮುಸ್ಲಿಂ ಮುಖಂಡರಿಂದ ಸುಮಲತಾ ಪರ ಮತಯಾಚನೆ
ಮಂಡ್ಯ

ಮುಸ್ಲಿಂ ಮುಖಂಡರಿಂದ ಸುಮಲತಾ ಪರ ಮತಯಾಚನೆ

April 17, 2019

ಕೆ.ಆರ್.ಪೇಟೆ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮುಸ್ಲಿಂ ಮುಖಂಡರು ಮುಸ್ಲಿಂ ಬಂಧುಗಳ ಮನೆ ಮನೆಗೆ ತೆರಳಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಮತಯಾಚನೆ ಮಾಡಿದರು.

ಅಂಬರೀಶ್ ಅವರು ಯಾವತ್ತೂ ಜಾತಿ-ಧರ್ಮದ ರಾಜಕಾರಣ ಮಾಡಿದ ವ್ಯಕ್ತಿಯಲ್ಲ. ಕೇಂದ್ರ-ರಾಜ್ಯ ಸಚಿವರಾಗಿ ಎಲ್ಲಾ ಧರ್ಮ, ಜಾತಿಯವರಿಗೂ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮುಸ್ಲಿಮ ರನ್ನು ಒಡಹುಟ್ಟಿದವರಂತೆ ಪ್ರೀತಿ ವಿಶ್ವಾಸ ದಿಂದ ಕಂಡಿದ್ದಾರೆ, ಕೈಲಾದ ನೆರವು ನೀಡಿದ್ದಾರೆ. ಹಾಗಾಗಿ ಅಂಬರೀಶ್ ಅವರ ಸೇವೆಯನ್ನು ಪರಿಗಣಿಸಿ ಅವರ ಪತ್ನಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ನಾವು ಬೆಂಬಲಿಸಿ ಮತಯಾಚನೆ ಮಾಡುತ್ತಿದ್ದೇವೆ. ಸುಮಲತಾ ಅವರ ಆಯ್ಕೆ ಖಚಿತ ಎಂದು ಮುಸ್ಲಿಂ ಮುಖಂಡ ರಾದ ನವೀದ್, ಹಫೀಜ್ ಉಲ್ಲಾ ಶರೀಫ್, ಖಲೀಲ್, ಮಹಮದ್ ತಿಳಿಸಿದರು.

Translate »