ಮದ್ದೂರಿನಲ್ಲಿ ಹನುಮ ಜಯಂತಿ
ಮಂಡ್ಯ

ಮದ್ದೂರಿನಲ್ಲಿ ಹನುಮ ಜಯಂತಿ

April 20, 2019

ಮದ್ದೂರು: ಪಟ್ಟಣದ ಇತಿಹಾಸ ಪ್ರಸಿದ್ದ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಶುಕ್ರವಾರ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗ್ಗೆ 6 ಗಂಟೆಗೆ ಸುಪ್ರಭಾತ, 7 ಕ್ಕೆ ಜೇನುತುಪ್ಪದ ಅಭಿ ಷೇಕ, 7.30 ಕ್ಕೆ ಪಂಚಾಮೃತ ಅಭಿಷೇಕ, 9.30 ಕ್ಕೆ ಅಲಂಕಾರ, 10 ಗಂಟೆಗೆ ಮಹಾಮಂಗಳಾರತಿ, 12.15 ಕ್ಕೆ ರಥೋತ್ಸವ, 12.30 ಕ್ಕೆ ಪ್ರಸಾದ ವಿತರಣೆ, ಸಂಜೆ 7 ಗರುಡೋತ್ಸವ, 7.30 ಕ್ಕೆ ಚಿಕ್ಕ ಗುರುಡೋತ್ಸವ ನಡೆಯಿತು.

ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾಧಿಗಳು ದೇವರಿಗೆ ವಿಶೇಷ ಪೂಜೆ ಮಾಡಿಸಿ ದೇವರ ಕೃಪಗೆ ಪಾತ್ರರಾದರು. ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

Translate »