ಹಾಡಹಗಲೇ ಆಕಾಶವಾಣಿ ಸರ್ಕಲ್ ಬಳಿ ಮಹಿಳೆ ಸರ ಕಳವು
ಮೈಸೂರು

ಹಾಡಹಗಲೇ ಆಕಾಶವಾಣಿ ಸರ್ಕಲ್ ಬಳಿ ಮಹಿಳೆ ಸರ ಕಳವು

April 20, 2019

ಮೈಸೂರು: ಬೈಕ್‍ನಲ್ಲಿ ಬಂದ ಯುವಕ ರಿಬ್ಬರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಗಿರುವ ಘಟನೆ ಮೈಸೂರಿನ ಆಕಾಶವಾಣಿ ಸರ್ಕಲ್ ಬಳಿ ಸುನಂದ ಶಾಲೆ ಎದುರು ಇಂದು ಸಂಜೆ ಸಂಭವಿಸಿದೆ.

ಮೈಸೂರಿನ ವಿವಿ ಮೊಹಲ್ಲಾ ನಿವಾಸಿ ಮಹೇಂದ್ರಕುಮಾರ್ ಅವರ ಪತ್ನಿ ಶ್ರೀಮತಿ ಭಾಗ್ಯ ಸರ ಕಳೆದುಕೊಂಡವರು. ಯಾದವಗಿರಿ 1ನೇ ಮುಖ್ಯ ರಸ್ತೆಯಲ್ಲಿ ರುವ ಮಹಿಳಾ ಸಂಘದಲ್ಲಿ ಶುಕ್ರವಾರದ ಪೂಜೆ ಮುಗಿಸಿ ಕೊಂಡು ಮಧು ಮತ್ತು ಪುಷ್ಪಲತಾರೊಂದಿಗೆ ಆಕಾಶವಾಣಿ ಸರ್ಕಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿ ನಿಂದ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಬೈಕ್‍ನಲ್ಲಿ ಬಂದ ಯುವಕರು ಸಂಜೆ ಸುಮಾರು 6.30 ಗಂಟೆ ವೇಳೆಗೆ ಭಾಗ್ಯ ಅವರ ಕೊರಳಿನಲ್ಲಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ರಾಮಣ್ಣ ಸರ್ಕಲ್ ಕಡೆಗೆ ಪರಾರಿಯಾದರು. ಎಚ್ಚೆತ್ತು ಜೋರಾಗಿ ಕೂಗಿಕೊಂಡರಾದರೂ, ಅಷ್ಟರಲ್ಲಿ ಸರಗಳ್ಳರು ಕಣ್ಮರೆಯಾದರು ಎಂದು ಭಾಗ್ಯ ಅವರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿವಿ ಪುರಂ ಠಾಣೆ ಇನ್ಸ್‍ಪೆಕ್ಟರ್ ವಿನಯ್ ಹಾಗೂ ಸಿಬ್ಬಂದಿ ಮಹಜರು ನಡೆಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸರ ಅಪಹರಣಕಾರರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಜನನಿಬಿಡ ರಸ್ತೆಯಲ್ಲಿ ಹಾಡ ಹಗಲೇ ಕೃತ್ಯ ನಡೆದಿ ರುವುದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.

Translate »