Tag: Mandya

ಶ್ರೀರಂಗಪಟ್ಟಣ: ಸೆಸ್ಕ್ ಕಚೇರಿಗೆ ಬೆಳಗೊಳ ಗ್ರಾಮಸ್ಥರ ಮುತ್ತಿಗೆ
ಮಂಡ್ಯ

ಶ್ರೀರಂಗಪಟ್ಟಣ: ಸೆಸ್ಕ್ ಕಚೇರಿಗೆ ಬೆಳಗೊಳ ಗ್ರಾಮಸ್ಥರ ಮುತ್ತಿಗೆ

March 20, 2019

ಶ್ರೀರಂಗಪಟ್ಟಣ: ನಿರಂತರ ಭಾಗ್ಯಜ್ಯೋತಿ ಹಾಗೂ ರಾಜೀವ್ ಗಾಂಧಿ ಭಾಗ್ಯ ಜ್ಯೋತಿ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬೆಳಗೊಳ ಗ್ರಾಮಸ್ಥರು ಮಂಗಳವಾರ ಇಲ್ಲಿನ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಎರಡೂ ಯೋಜನೆಗಳಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಫಲಾನು ಭವಿಗಳಿಗೆ ಉಚಿತ ವಿದ್ಯುತ್ ಸಂಪರ್ಕ ದೊಂದಿಗೆ ಮೀಟರ್ ಅಳವಡಿಸಬೇಕಿದೆ. ಈ ಕಾಮಗಾರಿಯ ಗುತ್ತಿಗೆದಾರ ಮತ್ತು ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ 100 ಫಲಾನುಭವಿ ಕುಟಂಬ ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು 27…

ಹೋರಾಟಗಾರರನ್ನು ಕಣ್ಣುಮುಚ್ಚಿ ನಂಬಿದ ಅಯೋಗ್ಯರು ನಾವು
ಮಂಡ್ಯ

ಹೋರಾಟಗಾರರನ್ನು ಕಣ್ಣುಮುಚ್ಚಿ ನಂಬಿದ ಅಯೋಗ್ಯರು ನಾವು

March 20, 2019

ನ್ಯಾಯಾಲಯಕ್ಕೆ 6,750 ರೂ. ದಂಡ ಕಟ್ಟಿ ಹೊರಬಂದ ಕಾವೇರಿ ಹೋರಾಟಗಾರರ ಬೇಸರದ ನುಡಿ ಮಂಡ್ಯ: ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ವಾದಾಗ ಹಾಗೂ ತಮಿಳುನಾಡಿಗೆ ರಾತ್ರೋ ರಾತ್ರಿ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದ ಕಾವೇರಿ ಹೋರಾಟಗಾರರನ್ನು ನಂಬಿ ಜಿಲ್ಲೆಯಲ್ಲಿ ಅಲ್ಲಲ್ಲಿ ರಸ್ತೆ ತಡೆ ಪ್ರತಿಭಟನೆಗಳನ್ನು ನಡೆಸಿದ್ದ `ನೈಜ’ ಹೋರಾಟಗಾರರು ಈಗ ಪಶ್ಚಾತ್ತಾಪಪಡುತ್ತಿದ್ದಾರೆ. ತಾಲ್ಲೂಕಿನ ಹಳೆಬೂದನೂರು ಗ್ರಾಪಂ ಸದಸ್ಯರಾದ ಬಿ.ಕೆ.ಕುಮಾರ್, ಸತೀಶ್, ಬಿ.ಟಿ.ಚಂದ್ರಶೇಖರ್, ಬೂದನೂರು ಶಿವು, ಚಿಕ್ಕಸಿದ್ದು, ಲೋಹಿತ್ ಕುಮಾರ್,…

`ಕೈ’ ನಾಯಕರ ಮೊರೆ ಹೋದ ತಾಯಿ-ಮಗ
ಮಂಡ್ಯ, ಮೈಸೂರು

`ಕೈ’ ನಾಯಕರ ಮೊರೆ ಹೋದ ತಾಯಿ-ಮಗ

March 17, 2019

ಮಂಡ್ಯ: ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣಾ ರಾಜಕೀಯ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ಅಂಬರೀಶ್ ಪತ್ನಿ ಸುಮಲತಾ ನಡುವಿನ ಸ್ಪರ್ಧೆ ಜಿಲ್ಲೆಯಲ್ಲಿ ಹೈ ವೊಲ್ಟೇಜ್ ಸೃಷ್ಟಿ ಮಾಡಿದೆ. ಜಿಲ್ಲೆಯಲ್ಲಿ ಇಬ್ಬರೂ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಸಿಎಂ ಪುತ್ರ ನಿಖಿಲ್ ಮೈತ್ರಿ ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿ ಘೋಷಣೆಯಾಗುತ್ತಿದ್ದಂತೆ ಸಖತ್ ಆಕ್ಟೀವ್ ಆಗಿದ್ದಾರೆ. ಇದರ ಭಾಗವಾಗಿ ಇಂದು ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅವ ರೊಟ್ಟಿಗೆ ಕಾಂಗ್ರೆಸ್ ನಾಯಕರನ್ನು…

ಮಾರ್ಚ್ 18ಕ್ಕೆ ನನ್ನ ನಿರ್ಧಾರ: ಸುಮಲತಾ
ಮೈಸೂರು

ಮಾರ್ಚ್ 18ಕ್ಕೆ ನನ್ನ ನಿರ್ಧಾರ: ಸುಮಲತಾ

March 16, 2019

ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಮುಗಿದ ಅಧ್ಯಾಯ. ನನ್ನ ನಿರ್ಧಾರ ಮಾರ್ಚ್ 18 ರಂದು ಪ್ರಕಟಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಇಂದಿಲ್ಲಿ ತಿಳಿಸಿದ್ದಾರೆ. ಕೇಂದ್ರ ವಿದೇಶಾಂಗ ಮಾಜಿ ಸಚಿವ ಬಿಜೆಪಿ ನಾಯಕ ಎಸ್.ಎಂ ಕೃಷ್ಣ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯಬೇಕೆಂಬ ಇಚ್ಛೆ ಹೊಂದಿದ್ದೇನೆ. ನನ್ನ ಪತಿ ಅಂಬರೀಶ್‍ರ ಅಭಿಮಾನಿಗಳ ಒತ್ತಾಸೆ ಮೇರೆಗೆ ರಾಜಕೀಯ ಪ್ರವೇಶ ಮಾಡಿದ್ದೇನೆ. ಮೊದಲು ಕಾಂಗ್ರೆಸ್ ಯಾವುದೇ ರೀತಿಯ ಬೆಂಬಲ ನೀಡಲಿಲ್ಲ. ಇದೀಗ ಬಹಳ…

ನಾಳೆ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ
ಮಂಡ್ಯ

ನಾಳೆ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ

March 16, 2019

ಮೇಲುಕೋಟೆ: ಏಕಾದಶಿಯ ಶುಭದಿನವಾದ ಭಾನುವಾರ ರಾತ್ರಿ ನಡೆಯುವ ಶ್ರೀಚೆಲುವನಾರಾಯಣ ಸ್ವಾಮಿಯವರ ವಿಶ್ವವಿಖ್ಯಾತ ವೈರಮುಡಿ ಕಿರೀಟಧಾರಣ ಉತ್ಸವಕ್ಕೆ ಮೇಲು ಕೋಟೆ ಸಜ್ಜುಗೊಂಡಿದೆ. ಉತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ರಾಜ್ಯ ಮತ್ತು ಹೊರರಾಜ್ಯಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ತಂಡೋ ಪತಂಡವಾಗಿ ಆಗಮಿಸಿ ದ್ದಾರೆ. ಇಲ್ಲಿನ ಎಲ್ಲಾ ಛತ್ರಗಳೂ ಸಹ ಭಕ್ತರಿಂದ ಕಿಕ್ಕಿರಿದು ತುಂಬಿವೆ. ರಜಾದಿನದಂದು ನಡೆಯುತ್ತಿರುವ ಈ ಸಲದ ವೈರಮುಡಿ ಉತ್ಸವಕ್ಕೆ ಎರಡು ಲಕ್ಷಕ್ಕೂ ಅಧಿಕ ಭಕ್ತರ ಆಗಮನದ ನಿರೀಕ್ಷೆ ಮಾಡಲಾಗಿದೆ. ಭಕ್ತರು ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢ ನಾಗಿ ಅಲಂಕಾರಗೊಂಡು ವೈರಮುಡಿ…

ಬಸವೇಶ್ವರಸ್ವಾಮಿ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ಬಸವೇಶ್ವರಸ್ವಾಮಿ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

March 16, 2019

ಮದ್ದೂರು: ತಾಲೂಕಿನ ಕಾರ್ಕಳ್ಳಿಯ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ಹಬ್ಬಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಗ್ರಾಮದ ಒಂದು ಗುಂಪಿನ ಭಕ್ತಾಧಿಗಳು ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದರು. ಪ್ರತಿವರ್ಷ 2 ಗುಂಪಿಗೆ ಅವಕಾಶ ನೀಡು ತ್ತಿದ್ದ ಜಿಲ್ಲಾಡಳಿತ ಈ ಬಾರಿ ಒಂದು ಗುಂಪಿಗೆ ಮಾತ್ರ ಅವಕಾಶ ನೀಡಿರುವುದು ಸರಿಯಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಲವಾರು ವರ್ಷಗಳಿಂದ ಜಿಲ್ಲಾಡಳಿತ ಹಬ್ಬ ಮಾಡಲು ಗ್ರಾಮದಲ್ಲಿರುವ 2 ಗುಂಪಿಗೆ ಅವಕಾಶ ನೀಡಿ ಹಣವನ್ನು ನೀಡುತ್ತಿತ್ತು. ಈ ಸಂಬಂಧವಾಗಿ ಇತ್ತೀಚೆಗೆ…

ತೊಪ್ಪನಹಳ್ಳಿಯಲ್ಲಿ ಡಿಸಿ ಶಾಂತಿ ಸಭೆ
ಮಂಡ್ಯ

ತೊಪ್ಪನಹಳ್ಳಿಯಲ್ಲಿ ಡಿಸಿ ಶಾಂತಿ ಸಭೆ

March 16, 2019

ಮದ್ದೂರು: ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಕೊಲೆ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ತೊಪ್ಪನಹಳ್ಳಿಯ ಮುತ್ತರಾಯಸ್ವಾಮಿ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಗ್ರಾಮದಲ್ಲಿ ಶಾಂತಿಯುತವಾಗಿ ಮತದಾನ ನಡೆಯಲು ಗ್ರಾಮಸ್ಥರು ಸಹಕಾರ ನೀಡಬೇಕು. ಯಾವುದೇ ಗಲಭೆಗೆ ಅವಕಾಶ ಮಾಡಿಕೊಡಬಾರದು. ಗ್ರಾಮಸ್ಥರು ಶಾಂತಿಯುತವಾಗಿ ಹಾಗೂ ಪ್ರೀತಿ ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್‍ನಾರಾಯಣ್ ಮಾತನಾಡಿ, ಗ್ರಾಮದಲ್ಲಿ ಜೋಡಿ ಕೊಲೆ…

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕಾರ್ಯಾಗಾರ
ಮಂಡ್ಯ

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕಾರ್ಯಾಗಾರ

March 16, 2019

ಕೆ.ಆರ್.ಪೇಟೆ: ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ನಿರ್ಣಾಯಕ ಘಟ್ಟವಾಗಿದೆ. ಹಾಗಾಗಿ ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಬೇಕು. ಪರೀಕ್ಷಾ ಭಯವನ್ನು ಬಿಟ್ಟು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯಬೇಕು ಎಂದು ಆದಿ ಚುಂಚನಗಿರಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಟ್ಟಣದ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ಸಿದ್ದತಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾ.21ರಿಂದ ಆರಂಭವಾಗುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿ ಗಳಿಗೆ ಪರೀಕ್ಷಾ ಪ್ರವೇಶ ಪತ್ರವನ್ನು…

ಹಾಸನ ‘ಗೌಡರ’ ಮತ್ತೊಬ್ಬ ಮೊಮ್ಮಗ ನಿಖಿಲ್ ಮಂಡ್ಯ ಮಡಿಲಿಗೆ
ಮೈಸೂರು

ಹಾಸನ ‘ಗೌಡರ’ ಮತ್ತೊಬ್ಬ ಮೊಮ್ಮಗ ನಿಖಿಲ್ ಮಂಡ್ಯ ಮಡಿಲಿಗೆ

March 15, 2019

ಮಂಡ್ಯ: ಮಂಡ್ಯದ ಅಭಿವೃದ್ಧಿ ದೃಷ್ಟಿಯಿಂದ ನನ್ನ ಮಗ ನಿಖಿಲ್‍ನನ್ನು ಅಭ್ಯರ್ಥಿ ಮಾಡ ಲಾಗಿದೆಯೇ ಹೊರತು ಅಧಿಕಾರದ ಲಾಲಸೆಯಿಂದ ಅಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗನನ್ನು ಅಭ್ಯರ್ಥಿ ಮಾಡಿದ್ದನ್ನು ಸಮರ್ಥಿಸಿಕೊಂಡರು. ನಗರದ ಸಿಲ್ವರ್‍ಜ್ಯುಬಿಲಿ ಪಾರ್ಕ್‍ನಲ್ಲಿ ಇಂದು ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಮಗ ನಿಖಿಲ್‍ನನ್ನು ಚುನಾವಣೆಗೆ ನಿಲ್ಲಿಸಬೇಕೆಂಬ ಯೋಚನೆಯೇ ನನಗಿರ ಲಿಲ್ಲ. ರವೀಂದ್ರ ಶ್ರೀಕಂಠಯ್ಯನವರು ಮೊದಲು ನಿಖಿಲ್ ಹೆಸರನ್ನು ಹೇಳಿದಾಗ ಅವರ ಮಾತನ್ನು ಕೇಳಿ ನನಗೆ ನಡುಕ ಬಂತು. ಆ ನಂತರ ಮಂಡ್ಯ…

ಮೊಮ್ಮಗನ ಹಾದಿ ಸುಗಮಕ್ಕೆ ಮೈಸೂರಲ್ಲಿ ಕಾಂಗ್ರೆಸ್‍ನಿಂದ ಸುಮಲತಾ ಕಣಕ್ಕಿಳಿಸಲು ದೇವೇಗೌಡರ ಮಾಸ್ಟರ್ ಪ್ಲಾನ್
ಮೈಸೂರು

ಮೊಮ್ಮಗನ ಹಾದಿ ಸುಗಮಕ್ಕೆ ಮೈಸೂರಲ್ಲಿ ಕಾಂಗ್ರೆಸ್‍ನಿಂದ ಸುಮಲತಾ ಕಣಕ್ಕಿಳಿಸಲು ದೇವೇಗೌಡರ ಮಾಸ್ಟರ್ ಪ್ಲಾನ್

March 15, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಗೆಲುವನ್ನು ಖಚಿತಪಡಿಸಿಕೊಳ್ಳುವ ತಂತ್ರವಾಗಿ ಸುಮಲತಾ ಅಂಬರೀಷ್ ಅವರನ್ನು ಮೈಸೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ರಾಜಕೀಯ ದಾಳ ಉರುಳಿಸಿದ್ದಾರೆ. ಇದೇ ಕಾರಣಕ್ಕೆ ಮೈಸೂರು ಕ್ಷೇತ್ರವನ್ನು ಕೊನೆಗಳಿಗೆಯಲ್ಲಿ ಬಿಟ್ಟುಕೊಟ್ಟು, ಸಿಎಲ್‍ಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚೆಕ್‍ಮೇಟ್ ನೀಡಿದ್ದಾರೆ. ಗೌಡರ ಸಲಹೆ ಮೇರೆಗೆ ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸುಮಲತಾ…

1 21 22 23 24 25 56
Translate »