Tag: Mandya

ದೇವಸ್ಥಾನದ ಹುಂಡಿ ಕದಿಯಲು  ಬಂದವರಿಂದ ಕಾವಲುಗಾರನ ಕೊಲೆ
ಮಂಡ್ಯ

ದೇವಸ್ಥಾನದ ಹುಂಡಿ ಕದಿಯಲು ಬಂದವರಿಂದ ಕಾವಲುಗಾರನ ಕೊಲೆ

January 15, 2019

ಮಂಡ್ಯ: ದೇವಸ್ಥಾನದಲ್ಲಿ ಹುಂಡಿ ಹಣ ಕದಿಯಲು ಬಂದ ಖದೀಮರು ಕಾವಲುಗಾರನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ನಡೆದಿದೆ. ಬಸವಯ್ಯ (55) ಎಂಬುವವರನ್ನೇ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಭಾನು ವಾರ ರಾತ್ರಿ ತೊಪ್ಪನಹಳ್ಳಿ ಗ್ರಾಮದ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಒಡೆಯಲು ಕಳ್ಳರು ಮುಂದಾಗಿ ದ್ದಾರೆ. ಈ ವೇಳೆ ತಡೆಯಲು ಬಂದ ದೇವಸ್ಥಾನದಲ್ಲಿ ತಮಟೆ ಬಡಿಯೋ ಕೆಲಸದ ಜೊತೆಗೆ ಕಾವಲುಗಾರನ ಕೆಲಸ ಮಾಡುತ್ತಿದ್ದ ಬಸವಯ್ಯ ಅವರ ಮೇಲೆ…

ಸಾಲ ಬಾಧೆ: ಮುಂದುವರೆದ ರೈತ ಆತ್ಮಹತ್ಯೆ
ಮಂಡ್ಯ

ಸಾಲ ಬಾಧೆ: ಮುಂದುವರೆದ ರೈತ ಆತ್ಮಹತ್ಯೆ

January 15, 2019

ಮಂಡ್ಯ: ಸಾಲಬಾದೆ ತಾಳಲಾರದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂ ಕಿನ ಕನ್ನಲಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ದೊಡ್ಡಚನ್ನಯ್ಯನವರ ಮಗ ಕರಿಚನ್ನಯ್ಯ (49) ಎಂಬಾತನೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೈತ. ಗ್ರಾಮದಲ್ಲಿ ಒಂದೂವರೆ ಎಕರೆ ಜಮೀನು ಹೊಂದಿದ್ದ ಕರಿ ಚನ್ನಯ್ಯ ಕೃಷಿ ಚಟುವಟಿಕೆಗಾಗಿ ಮದ್ದೂರಿನ ಗ್ರಾಮೀಣ ಕೂಟದಲ್ಲಿ 50 ಸಾವಿರ, ಗ್ರಾಮದ ವಿಎಸ್‍ಎಸ್‍ಎನ್‍ಬಿಯಲ್ಲಿ 30 ಸಾವಿರ, ಖಾಸಗಿಯಾಗಿ 2.20 ಲಕ್ಷ ಸೇರಿದಂತೆ ಒಟ್ಟಾರೆ 3 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ…

ಹುಲ್ಲಿನ ಮೆದೆಗಳಿಗೆ ಬೆಂಕಿ:  ನಾಲ್ಕು ಲಕ್ಷ ರೂ. ನಷ್ಟ
ಮಂಡ್ಯ

ಹುಲ್ಲಿನ ಮೆದೆಗಳಿಗೆ ಬೆಂಕಿ: ನಾಲ್ಕು ಲಕ್ಷ ರೂ. ನಷ್ಟ

January 15, 2019

ಮಂಡ್ಯ: ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ನಾಲ್ಕು ಲಕ್ಷಕ್ಕೂ ಹೆಚ್ಚು ನಷ್ಟವಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ಸಿz್ದÉೀಗೌಡ ಎಂಬುವರ ನಾಲ್ಕು ಎಕರೆ, ಗದ್ದೇಗೌಡ ಅವರ ಎರಡು ಎಕರೆ, ಗಿರಿಜಾ ಅವರ ಎರಡು ಎಕರೆ, ಚಿಕ್ಕಯ್ಯ ಅವರ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಹುಲ್ಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಗ್ರಾಮದ ಹೊರಭಾಗದಲ್ಲಿ ಇವರುಗಳು ಹುಲ್ಲಿನ ಮೆದೆಗಳನ್ನು ಅಕ್ಕಪಕ್ಕದಲ್ಲಿ ಹಾಕಿದ್ದರು. ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಹುಲ್ಲಿನ ಮೆದೆಗೆ ಬೆಂಕಿ ಬಿದ್ದಿದ್ದು,…

ಅರೆಕೆರೆ ನಾಡಕಚೇರಿಯಲ್ಲಿ   ಕಂಪ್ಯೂಟರ್, ಲ್ಯಾಪ್‍ಟಾಪ್ ಕಳವು
ಮಂಡ್ಯ

ಅರೆಕೆರೆ ನಾಡಕಚೇರಿಯಲ್ಲಿ ಕಂಪ್ಯೂಟರ್, ಲ್ಯಾಪ್‍ಟಾಪ್ ಕಳವು

January 15, 2019

ಮಂಡ್ಯ: ಖದೀಮರ ತಂಡವೊಂದು ನಾಡ ಕಚೇರಿಗೆ ಕನ್ನ ಹಾಕಿ, ಕಂಪ್ಯೂಟರ್, ಲ್ಯಾಪ್‍ಟಾಪ್ ಕಳವು ಮಾಡಿ ಪರಾರಿಯಾಗಿರುವ ಪ್ರಕರಣ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಕಳ್ಳರು ನಾಡಕಚೇರಿಯ ಬಾಗಿಲು ಮುರಿದು ಒಳನುಗ್ಗಿ ಈ ಕೃತ್ಯ ಎಸಗಿದ್ದಾರೆ. ಕಚೇರಿಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕೆಲ ಫೈಲ್‍ಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಅರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಕೂಡ ಭೇಟಿ…

ನನ್ನ ರಾಜಕೀಯ ಭವಿಷ್ಯ ವರಿಷ್ಠರ ನಿರ್ಧಾರದಂತೆ
ಮಂಡ್ಯ

ನನ್ನ ರಾಜಕೀಯ ಭವಿಷ್ಯ ವರಿಷ್ಠರ ನಿರ್ಧಾರದಂತೆ

January 13, 2019

ಭಾರತೀನಗರ: ನನ್ನ ರಾಜಕೀಯ ಭವಿಷ್ಯದ ಬಗ್ಗೆ ಪಕ್ಷದ ವರಿಷ್ಠರು ನಿರ್ಧಸಲಿದ್ದು, ಅವರ ಆದೇಶ ದಂತೆ ನಡೆಯುತ್ತೇನೆ ಎಂದು ಚಿತ್ರನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಭಾರತೀನಗರದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣನವರ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಶಾಸಕರು, ಜನಪ್ರತಿನಿಧಿಗಳು, ಕಾರ್ಯ ಕರ್ತರು ಮುಖಂಡರು ಒತ್ತಾಯಿಸುತ್ತಿದ್ದು, ಅವರ ಒತ್ತಾಯವನ್ನು ಗೌರವಿಸುತ್ತೇನೆ. ಆದರೂ ಸ್ಪರ್ಧೆಯ ಬಗ್ಗೆ ಪಕ್ಷದ ವರಿಷ್ಠರದ್ದೇ ಅಂತಿಮ ತೀರ್ಮಾನ ಎಂದು ಹೇಳಿದರು. ಅಪಸ್ವರ ಸಹಜ: ರಾಜ್ಯದಲ್ಲಿ…

ಹೆಚ್‍ಡಿಕೆ ಬಗ್ಗೆ ಹಗುರ ಮಾತು ಸಲ್ಲದು
ಮಂಡ್ಯ

ಹೆಚ್‍ಡಿಕೆ ಬಗ್ಗೆ ಹಗುರ ಮಾತು ಸಲ್ಲದು

January 13, 2019

ಮಂಡ್ಯ: ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಒಬ್ಬ ಕ್ಲರ್ಕ್ ಇದ್ದಂತೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಒಂದು ರಾಜ್ಯದ ಮುಖ್ಯಮಂತ್ರಿಗಳ ಕುರಿತು ಹಗುರವಾಗಿ ಮಾತ ನಾಡಬಾರದು ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಹೇಳಿಕೆ ಖಂಡಿಸಿದರಲ್ಲದೆ, ಮುಖ್ಯ ಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಉತ್ತಮ ಕೆಲಸ ಮಾಡು ತ್ತಿದ್ದು, ಪ್ರಧಾನಿ ಏಕೆ ಪದೇ ಪದೇ ಕರ್ನಾಟಕದ ಬಗ್ಗೆಯೇ ಮಾತನಾಡುತ್ತಾರೆ. ದೇಶದ ಪ್ರಧಾನಮಂತ್ರಿ ಒಬ್ಬ ಮುಖ್ಯಮಂತ್ರಿ…

ಕಳವಿಗೆ ಯತ್ನಿಸಿದ ಕಳ್ಳರಿಂದ ಮಾಲೀಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ
ಮಂಡ್ಯ

ಕಳವಿಗೆ ಯತ್ನಿಸಿದ ಕಳ್ಳರಿಂದ ಮಾಲೀಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ

January 13, 2019

ಕೆ.ಆರ್.ಪೇಟೆ: ಬಾಗಿಲು ಮುರಿದು ಒಳನುಗ್ಗಲು ಖದೀಮರು ಯತ್ನಿಸುತ್ತಿದ್ದ ವೇಳೆ ಬಂದ ಮನೆ ಮಾಲೀ ಕರಿಗೆ ಮಾರಕಾಸ್ತ್ರ ಗಳಿಂದ ಬೆದರಿಸಿ ಪರಾರಿಯಾಗಿ ರುವ ಘಟನೆ ಶನಿವಾರ ಸಂಜೆ ಪಟ್ಟಣದ ನಡೆದಿದೆ. ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯ ನಿವಾಸಿಗಳಾದ ಡಾ.ಪಿ.ಎನ್.ಎನ್.ಗುಪ್ತ ಹಾಗೂ ಪುತ್ರ ಡಾ. ಬದ್ರಿನಾಥ್ ಪಟ್ಟಣದ ಬಸ್ ನಿಲ್ದಾಣದ ಎದುರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು, ಕೆಲಸ ಮುಗಿಸಿ ನಿತ್ಯ ಏಳು ಗಂಟೆಗೆ ಮನೆ ಬರುವುದು ವಾಡಿಕೆ. ಆದರೆ ಈ ದಿನ ಡಾ.ಬದ್ರಿನಾಥ್ ಮೈಸೂರಿಗೆ ಹೋಗಬೇಕಾಗಿದ್ದ ಕಾರಣ ಒಂದು ಗಂಟೆ…

ಸಾಲಬಾಧೆ: ರೈತ  ನೇಣಿಗೆ ಶರಣು
ಮಂಡ್ಯ

ಸಾಲಬಾಧೆ: ರೈತ ನೇಣಿಗೆ ಶರಣು

January 13, 2019

ಪಾಂಡವಪುರ: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಮೀನಿನಲ್ಲಿ ತರಕಾರಿ ಬೇಸಾಯ ಮಾಡುತ್ತಿದ್ದರು. ಇದಕ್ಕಾಗಿ ಜಮೀನಿನಲ್ಲಿ ಕೊರೆಸಿದ್ದ ಎರಡೂ ಬೋರ್‍ವೆಲ್‍ನಲ್ಲಿ ನೀರು ಬಾರದೆ ನಷ್ಟ ಅನುಭವಿಸಿದ್ದರು. ಅಲ್ಲದೆ 5 ಲಕ್ಷ ರೂ. ಕೈಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಗಾರರ ಒತ್ತಡ ತಾಳಲಾರದೇ ತಮ್ಮ ಜಮೀನಿನ ಬಳಿ ಮರಕ್ಕೆ ಶುಕ್ರವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾ ಗಿದ್ದಾರೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ

ಲೋಕಸಭಾ ಚುನಾವಣೆ: ಗೌಡರ ಕುಟುಂಬದ ಮೂವರ ಸ್ಪರ್ಧೆ
ಮೈಸೂರು

ಲೋಕಸಭಾ ಚುನಾವಣೆ: ಗೌಡರ ಕುಟುಂಬದ ಮೂವರ ಸ್ಪರ್ಧೆ

January 12, 2019

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರದಲ್ಲಿ ಜೆಡಿಎಸ್ ಬಲ ಪ್ರದರ್ಶನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಿಂದ ಮೂವರು ಕಣಕ್ಕಿಳಿಯಲಿದ್ದಾರೆ. ಇದುವರೆಗೂ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಮಾತ್ರ ಹೊಸದಾಗಿ ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿತ್ತು. ಆದರೆ ಇದೀಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಚುನಾವಣಾ ಕಣಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು, ನಿಖಿಲ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಸ್ಥಳೀಯ…

ಕಿಡ್ನಿ ಮಾರಾಟ ಜಾಲದ ವಂಚನೆ: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
ಮಂಡ್ಯ, ಮೈಸೂರು

ಕಿಡ್ನಿ ಮಾರಾಟ ಜಾಲದ ವಂಚನೆ: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

January 10, 2019

ಮಳವಳ್ಳಿ : ಕಿಡ್ನಿ ಮಾರಾಟ ಜಾಲಕ್ಕೆ ಸಿಲುಕಿ ವಂಚನೆಗೊಳಗಾದ ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಮಳವಳ್ಳಿಯ ಗಂಗಾಮತ ಬೀದಿ ನಿವಾಸಿ ವೆಂಕಟಮ್ಮ (48) ಎಂಬುವರೇ ಕಿಡ್ನಿ ಮಾರಾಟ ಜಾಲ ವಂಚನೆ ಗೊಳಗಾಗಿ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ವೆಂಕಟಮ್ಮ ಮಾತ್ರವಲ್ಲದೆ, ಮತ್ತೊಬ್ಬ ಮಹಿಳೆಯನ್ನೂ ಸಹ ಈ ಜಾಲದ ಮಹಿಳೆಯೋರ್ವಳು ವಂಚಿಸಿದ್ದಾಳೆ ಎಂಬುದು ಕೂಡ ಬೆಳಕಿಗೆ ಬಂದಿದೆ. ಸೊಪ್ಪು, ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ವೆಂಕಟಮ್ಮ, ಬೇರೆಯ ವರ ಜಮೀನನ್ನು ಗುತ್ತಿಗೆಗೆ ಪಡೆದು…

1 27 28 29 30 31 56
Translate »