ಕಳವಿಗೆ ಯತ್ನಿಸಿದ ಕಳ್ಳರಿಂದ ಮಾಲೀಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ
ಮಂಡ್ಯ

ಕಳವಿಗೆ ಯತ್ನಿಸಿದ ಕಳ್ಳರಿಂದ ಮಾಲೀಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ

January 13, 2019

ಕೆ.ಆರ್.ಪೇಟೆ: ಬಾಗಿಲು ಮುರಿದು ಒಳನುಗ್ಗಲು ಖದೀಮರು ಯತ್ನಿಸುತ್ತಿದ್ದ ವೇಳೆ ಬಂದ ಮನೆ ಮಾಲೀ ಕರಿಗೆ ಮಾರಕಾಸ್ತ್ರ ಗಳಿಂದ ಬೆದರಿಸಿ ಪರಾರಿಯಾಗಿ ರುವ ಘಟನೆ ಶನಿವಾರ ಸಂಜೆ ಪಟ್ಟಣದ ನಡೆದಿದೆ. ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯ ನಿವಾಸಿಗಳಾದ ಡಾ.ಪಿ.ಎನ್.ಎನ್.ಗುಪ್ತ ಹಾಗೂ ಪುತ್ರ ಡಾ. ಬದ್ರಿನಾಥ್ ಪಟ್ಟಣದ ಬಸ್ ನಿಲ್ದಾಣದ ಎದುರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು, ಕೆಲಸ ಮುಗಿಸಿ ನಿತ್ಯ ಏಳು ಗಂಟೆಗೆ ಮನೆ ಬರುವುದು ವಾಡಿಕೆ. ಆದರೆ ಈ ದಿನ ಡಾ.ಬದ್ರಿನಾಥ್ ಮೈಸೂರಿಗೆ ಹೋಗಬೇಕಾಗಿದ್ದ ಕಾರಣ ಒಂದು ಗಂಟೆ ಮುಂಚಿತವಾಗಿ ಮನೆ ಬಂದಿದ್ದಾರೆ. ಈ ವೇಳೆ ನಾಲ್ಕೈದು ಮಂದಿ ಕಳ್ಳರ ಗುಂಪು ಮನೆಯ ಬಾಗಿಲು ಮುರಿದು ಒಳ ನುಗ್ಗಲು ಪ್ರಯತ್ನಿಸುತ್ತಿತ್ತು. ಇದನ್ನು ಕಂಡ ಮಾಲೀಕ ಡಾ.ಬದ್ರಿನಾಥ್ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಖದೀಮರು, ಅವರತ್ತ ಚಾಕು, ಮಚ್ಚು ಮತ್ತಿತರರ ಮಾರಕಾಸ್ತ್ರಗಳನ್ನು ತೋರಿಸಿ ಕಿರುಚಿದರೆ ಅಥವಾ ಹಿಡಿಯಲು ಪ್ರಯತ್ನಿಸಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಹತ್ತಿ ಪರಾರಿ ಯಾಗಿದ್ದಾರೆ. ಅವರು ಕಾರನ್ನು ಹತ್ತುತ್ತಿದ್ದಂತೆಯೇ ಡಾ.ಭದ್ರಿನಾಥ್ ನೆರೆಯ ವರನ್ನು ಕೂಗಿದ್ದಾರೆ. ನೆರೆಯವರು ಬರುವಷ್ಟರಲ್ಲಿ ಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದರು.

ವಿಷಯ ತಿಳಿದ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ನೇತೃತ್ವದ ತಂಡವು ಸುಮಾರು 18 ಕಿ.ಮೀ ವರೆಗೆ ಬೆನ್ನತ್ತಿದರು ಸಹ ಹರಪನಹಳ್ಳಿ ಕ್ರಾಸ್ ಬಳಿಯ ವೇಗವಾಗಿ ಕಾರನ್ನು ಓಡಿಸಿಕೊಂಡು ಪರಾರಿಯಾಗಿದ್ದಾರೆ. ಕಾರಿನ ನಂಬರ್ ಪತ್ತೆಯಾಗಿದ್ದು, ಕೂಡಲೇ ದುಷ್ಕರ್ಮಿಗಳ ಹಿಡಿಯುವುದಾಗಿ ಸಬ್ ಇನ್ಸ್‍ಪೆಕ್ಟರ್ ಮನೆ ಮಾಲೀ ಕರಿಗೆ ಭರವಸೆ ನೀಡಿದ್ದಾರೆ.

Translate »