ಹೆಚ್‍ಡಿಕೆ ಬಗ್ಗೆ ಹಗುರ ಮಾತು ಸಲ್ಲದು
ಮಂಡ್ಯ

ಹೆಚ್‍ಡಿಕೆ ಬಗ್ಗೆ ಹಗುರ ಮಾತು ಸಲ್ಲದು

January 13, 2019

ಮಂಡ್ಯ: ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಒಬ್ಬ ಕ್ಲರ್ಕ್ ಇದ್ದಂತೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಒಂದು ರಾಜ್ಯದ ಮುಖ್ಯಮಂತ್ರಿಗಳ ಕುರಿತು ಹಗುರವಾಗಿ ಮಾತ ನಾಡಬಾರದು ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಹೇಳಿಕೆ ಖಂಡಿಸಿದರಲ್ಲದೆ, ಮುಖ್ಯ ಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಉತ್ತಮ ಕೆಲಸ ಮಾಡು ತ್ತಿದ್ದು, ಪ್ರಧಾನಿ ಏಕೆ ಪದೇ ಪದೇ ಕರ್ನಾಟಕದ ಬಗ್ಗೆಯೇ ಮಾತನಾಡುತ್ತಾರೆ. ದೇಶದ ಪ್ರಧಾನಮಂತ್ರಿ ಒಬ್ಬ ಮುಖ್ಯಮಂತ್ರಿ ಬಗ್ಗೆ ಹಗುರವಾಗಿ ಮಾತನಾಡಬಾರದು. ಅನಾವಶ್ಯಕವಾಗಿ ಪ್ರಧಾನಿಗಳು ಈ ರೀತಿ ಹೇಳಿಕೆ ನೀಡುವುದು ತರವಲ್ಲ ಎಂದರು.

ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡುವ ವಿಚಾರದಲ್ಲಿ ಯಾವುದೇ ತೀರ್ಮಾನ ಗಳನ್ನು ಇನ್ನು ತೆಗೆದುಕೊಂಡಿಲ್ಲ. ಸಂಕ್ರಾಂತಿ ಬಳಿಕ ಎರಡೂ ಪಕ್ಷಗಳು ಪರಸ್ಪರ ಚರ್ಚಿಸಿ ತೀರ್ಮಾನ ಕೈಗೊಳ್ಳು ತ್ತವೆ. ನಾನು ಈ ಬಗ್ಗೆ ಬಹಿರಂಗವಾಗಿ ಮಾತ ನಾಡುವುದಿಲ್ಲ. ನಮ್ಮ ಉದ್ದೇಶ ಬಿಜೆಪಿ ಯನ್ನು ಅಧಿಕಾರದಿಂದ ದೂರ ವಿಡುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚುನಾವಣಾ ಗಿಮಿಕ್ ಅಷ್ಟೆ: ಲೋಕ ಸಭಾ ಚುನಾವಣೆ ಗೆಲ್ಲುವ ತಂತ್ರವಾಗಿ, ಚುನಾವಣೆ ಮುಂದಿಟ್ಟುಕೊಂಡು ಮೇಲ್ವ ರ್ಗಕ್ಕೆ ಶೇ.10ರಷ್ಟು ಮೀಸಲಾತಿ ಜಾರಿ ತರುವುದಾಗಿ ಮೋದಿ ಹೇಳಿದ್ದಾರೆ. ಅವರು ಈ ಹಿಂದಿನ 2 ವರ್ಷದಿಂದ ಏಕೆ ಈ ಮಸೂದೆ ಜಾರಿಗೆ ತಂದಿರಲಿಲ್ಲ. ಈಗ ಮಂಡನೆ ಯಾದರೂ ಇದು ಕಾರ್ಯರೂಪಕ್ಕೆ ಬರು ವುದಿಲ್ಲ. ಪಿ.ವಿ.ನರಸಿಂಹರಾವ್ ಪ್ರಧಾನಿ ಯಾಗಿದ್ದಾಗಲೇ ಕಾನೂನು ಜಾರಿಗೆ ತರಲು ನಾವು ಮುಂದಾದಾಗ ಸುಪ್ರಿಂ ಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಇದು ಚುನಾವಣಾ ಗಿಮಿಕ್ ಅನ್ನೋದು ಬಿಟ್ಟರೆ ಬೇರೇನೂ ಇಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ನಮ್ಮ ಯುಪಿಎ ಒಕ್ಕೂಟದಿಂದ ನಮಗೆ ರಾಹುಲ್ ಜೀಯನ್ನು ಪ್ರಧಾನಿಮಾಡುವ ಮನಸ್ಸಿದೆ. ಆದರೆ ದೇಶದ ಭವಿಷ್ಯ ಮುಖ್ಯವಾದ್ದರಿಂದ ಚುನಾವಣೆ ಬಳಿಕ ಪ್ರಧಾನಿ ಯಾರು ಎಂಬುದು ನಿರ್ಧಾರವಾಗುತ್ತದೆ. ಚುನಾವಣೆಯಲ್ಲಿ ಬಿಜೆಪಿಯನ್ನು ದೂರವಿಡಲು ಮಹಾ ಘಟ ಬಂಧನ್ ಮಾಡಿಕೊಳ್ಳಲಾಗಿದೆ ಎಂದರು.
ನಿಗಮ ಮಂಡಳಿಯಲ್ಲಿ ಕಾಂಗ್ರೆಸ್ ಶಾಸಕ ರನ್ನು ಸಿಎಂ ಕೈಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿ ಸಿದ ಅವರು, ಈ ಬಗ್ಗೆ ನಾನು ಬಹಿರಂಗ ವಾಗಿ ಮಾತನಾಡಲ್ಲ. ಇದೆಲ್ಲ ಪಕ್ಷದೊಳ ಗಿನ ವಿಚಾರ ಎಂದರು. ಈ ಸಂದರ್ಭ ದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎಸ್.ಆತ್ಮಾನಂದ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾ ಧರ್, ರಾಮಲಿಂಗಯ್ಯ ಮತ್ತಿತರರಿದ್ದರು.

Translate »