ಭಾರತೀನಗರ: ನನ್ನ ರಾಜಕೀಯ ಭವಿಷ್ಯದ ಬಗ್ಗೆ ಪಕ್ಷದ ವರಿಷ್ಠರು ನಿರ್ಧಸಲಿದ್ದು, ಅವರ ಆದೇಶ ದಂತೆ ನಡೆಯುತ್ತೇನೆ ಎಂದು ಚಿತ್ರನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಭಾರತೀನಗರದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣನವರ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಶಾಸಕರು, ಜನಪ್ರತಿನಿಧಿಗಳು, ಕಾರ್ಯ ಕರ್ತರು ಮುಖಂಡರು ಒತ್ತಾಯಿಸುತ್ತಿದ್ದು, ಅವರ ಒತ್ತಾಯವನ್ನು ಗೌರವಿಸುತ್ತೇನೆ. ಆದರೂ ಸ್ಪರ್ಧೆಯ ಬಗ್ಗೆ ಪಕ್ಷದ ವರಿಷ್ಠರದ್ದೇ ಅಂತಿಮ ತೀರ್ಮಾನ ಎಂದು ಹೇಳಿದರು.
ಅಪಸ್ವರ ಸಹಜ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ. ಸಾಮಾನ್ಯವಾಗಿ ಕುಟುಂಬ ದಲ್ಲಿ ಗಂಡ-ಹೆಂಡತಿ ನಡುವೆಯೇ ಅಪಸ್ವರ ಇರುತ್ತದೆ. ಹೀಗಿದ್ದಾಗ ಸಮ್ಮಿಶ್ರ ಸರ್ಕಾರದಲ್ಲೂ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಗಳು ಇದ್ದೇ ಇರುತ್ತವೆ. ಅದೆಲ್ಲವನ್ನೂ ಸರಿಯಾಗಿ ಕೊಂಡೊಯ್ಯುವುದೇ ಸವಾ ಲಿನ ಕೆಲಸ ಎಂದು ವಿಶ್ಲೇಷಿಸಿದರು.
ನಮ್ಮ ತಂದೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭಾವ ನಾತ್ಮಕ ಜೀವಿ. ಸಮ್ಮಿಶ್ರ ಸರ್ಕಾರ ರಚನೆ ಯಾದಾಗ ಬಹುಮತ ಕೊರತೆಯ ಕಾರಣ ನೀಡಿ ಸಾಲಮನ್ನಾ ವಚನದಿಂದ ನುಣುಚಿ ಕೊಳ್ಳಬಹುದಾಗಿತ್ತು. ಆದರೆ ಈ ಬಗ್ಗೆ ಅವರು ಎಂದೂ ಮಾತನಾಡಿಲ್ಲ. ಸರ್ಕಾ ರದ ಖಜಾನೆ ಬಗ್ಗೆಯೂ ಅವರಿಗೆ ಅರಿವಿದೆ. ಇವೆಲ್ಲದರ ನಡುವೆ ರೈತರ ಸಾಲಮನ್ನಾ ಮಾಡುತ್ತಿದ್ದಾರೆ. ಇದು ಅವರಿಗೆ ಸವಾಲಿನ ಕೆಲಸವೂ ಆಗಿದೆ ಎಂದರು.
ಸಂತೋಷ್‍ರ ಕೈಹಿಡಿಯಿರಿ:ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣನವರ ಪುತ್ರ ಸಂತೋಷ್ ತಮ್ಮಣ್ಣ ಅವರನ್ನು ಕೂಡ ಪಕ್ಷ ಸಂಘ ಟನೆಯಲ್ಲಿ ನಿರತರಾಗಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿ ದ್ದಾರೆ. ಮತ್ತು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ದಿಂದ ಸಂತೋಷ್ ರವರಿಗೇ ಟಿಕೆಟ್ ಕೊಡಿಸಲು ನಮ್ಮ ತಂದೆ ಯವರೊಂದಿಗೆ ಮಾತ ನಾಡುತ್ತೇನೆ. ನನಗೆ ಹೇಗೆ ಪ್ರೀತಿ ತೋರಿಸು ತ್ತಿದ್ದಿರೋ ಅದೇ ರೀತಿಯಲ್ಲೇ ಸಂತೋಷ್ ತಮ್ಮಣ್ಣ ಅವರ ಕೈಹಿಡಿಯಿರಿ ಎಂದು ಮನವಿ ಮಾಡಿದರು.
ಪಕ್ಷ ಕಟ್ಟಲು ಸಂಚಾರ:ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ರಾಜ್ಯಾದ್ಯಂತ ಸಂಚರಿಸುತ್ತೇನೆ. ಪಕ್ಷ ಕಟ್ಟುವ ಜವಾಬ್ದಾರಿಯೂ ನನ್ನ ಮೇಲೆ ಇದೆ ಎಂದು ತಿಳಿಸಿದರು.
ಸದ್ಯ ನಾನು ಚಿತ್ರರಂಗದಲ್ಲಿ ತೊಡಗಿಸಿ ಕೊಂಡಿದ್ದೇನೆ. ಜ.25ರಂದು ನಾನು ಅಭಿನಯಿ ಸಿರುವ `ಸೀತಾರಾಮ ಕಲ್ಯಾಣ’ ಬಿಡುಗಡೆ ಆಗಲಿದ್ದು, ಚಿತ್ರದ ಪ್ರಚಾರಕ್ಕಾಗಿ ಎಲ್ಲೆಡೆ ಹೋಗುತ್ತಿದ್ದೇನೆ. ಮಂಡ್ಯ ಜಿಲ್ಲೆಯಲ್ಲೂ ವ್ಯಾಪಕ ಪ್ರಚಾರ ಕಾರ್ಯಕೈಗೊಂಡಿದ್ದೇನೆ. ಚಿತ್ರರಂಗದಲ್ಲಿ ನನಗೆ ಡಾ. ರಾಜ್‍ಕುಮಾರ್ ಸ್ಪೂರ್ತಿಯಾಗಿದ್ದಾರೆ. ಚಿತ್ರರಂಗ ದಲ್ಲೂ ಸಾಕಷ್ಟು ಹೆಸರು ಮಾಡಬೇಕೆಂ ಬುದು ನನ್ನ ಆಸೆಯಾಗಿದೆ. ಆದರೆ ರಾಜ ಕೀಯಕ್ಕೆ ಬರುವ ಬಗ್ಗೆ ನನ್ನ ಬಳಿ ಉತ್ತರ ವಿಲ್ಲ ಎಂದು ಹೇಳಿದರು.
ಮಂಡ್ಯ ಕ್ಷೇತ್ರದಲ್ಲೇ ಹೆಚ್‍ಡಿಡಿ ಸ್ಪರ್ಧೆ: ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರು ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸ ಲಿದ್ದು, ಅವರನ್ನು ಅತ್ಯಂತ ಬಹುಮತ ದಿಂದ ಗೆಲ್ಲಿಸಿ ಕಳುಹಿಸೋಣ ಎಂದು ಚಿತ್ರನಟ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ದೇವೇಗೌಡರಿಗೆ ಇದು ಕೊನೆಯ ಚುನಾವಣೆ. ಅವರ ಸ್ವಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಹೀಗಾಗಿ ದೇವೇಗೌಡರು ಹಾಸನದಿಂದ ಸ್ಪರ್ಧಿಸು ವುದಿಲ್ಲ. ಬದಲಿಗೆ ಮಂಡ್ಯ ಕ್ಷೇತ್ರದಿಂದಲೇ ಅವರನ್ನು ಆಯ್ಕೆ ಮಾಡಿ ಕಳುಹಿಸುವುದು ಒಳೆಯ ಬೆಳವಣಿಗೆ ಎಂದರು.
ಈ ವೇಳೆ ಜೆಡಿಎಸ್ ಮುಖಂಡ ಸಂತೋಷ್‍ತಮ್ಮಣ್ಣ, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಧ್ಯಕ್ಷ ಕೆಸ್ತೂರು ದಾಸೇಗೌಡ, ಶ್ರೀನಿಧಿಗೌಡ ಪ್ರತಿಷ್ಠಾನ ಅಧ್ಯಕ್ಷ ಸಾದೋಳಲು ಎಸ್.ಪಿ.ಸ್ವಾಮಿ, ಜಿಪಂ ಸದಸ್ಯರಾದ ಮರಿಯಗ್ಡೆ, ಬೋರಯ್ಯ, ಸುಕನ್ಯಾ ಹನುಮಂತೇಗೌಡ, ಸುಚಿತ್ರ ಮಹೇಂದ್ರ, ಮಾಜಿ ಸದಸ್ಯರಾದ ಎ.ಟಿ. ಬಲ್ಲೇಗೌಡ ಇತರರಿದ್ದರು.