ಸಾಲಬಾಧೆ: ರೈತ  ನೇಣಿಗೆ ಶರಣು
ಮಂಡ್ಯ

ಸಾಲಬಾಧೆ: ರೈತ ನೇಣಿಗೆ ಶರಣು

January 13, 2019

ಪಾಂಡವಪುರ: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಮೀನಿನಲ್ಲಿ ತರಕಾರಿ ಬೇಸಾಯ ಮಾಡುತ್ತಿದ್ದರು. ಇದಕ್ಕಾಗಿ ಜಮೀನಿನಲ್ಲಿ ಕೊರೆಸಿದ್ದ ಎರಡೂ ಬೋರ್‍ವೆಲ್‍ನಲ್ಲಿ ನೀರು ಬಾರದೆ ನಷ್ಟ ಅನುಭವಿಸಿದ್ದರು. ಅಲ್ಲದೆ 5 ಲಕ್ಷ ರೂ. ಕೈಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಗಾರರ ಒತ್ತಡ ತಾಳಲಾರದೇ ತಮ್ಮ ಜಮೀನಿನ ಬಳಿ ಮರಕ್ಕೆ ಶುಕ್ರವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾ ಗಿದ್ದಾರೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ