ದೇವಸ್ಥಾನದ ಹುಂಡಿ ಕದಿಯಲು  ಬಂದವರಿಂದ ಕಾವಲುಗಾರನ ಕೊಲೆ
ಮಂಡ್ಯ

ದೇವಸ್ಥಾನದ ಹುಂಡಿ ಕದಿಯಲು ಬಂದವರಿಂದ ಕಾವಲುಗಾರನ ಕೊಲೆ

January 15, 2019

ಮಂಡ್ಯ: ದೇವಸ್ಥಾನದಲ್ಲಿ ಹುಂಡಿ ಹಣ ಕದಿಯಲು ಬಂದ ಖದೀಮರು ಕಾವಲುಗಾರನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ನಡೆದಿದೆ. ಬಸವಯ್ಯ (55) ಎಂಬುವವರನ್ನೇ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಭಾನು ವಾರ ರಾತ್ರಿ ತೊಪ್ಪನಹಳ್ಳಿ ಗ್ರಾಮದ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಒಡೆಯಲು ಕಳ್ಳರು ಮುಂದಾಗಿ ದ್ದಾರೆ. ಈ ವೇಳೆ ತಡೆಯಲು ಬಂದ ದೇವಸ್ಥಾನದಲ್ಲಿ ತಮಟೆ ಬಡಿಯೋ ಕೆಲಸದ ಜೊತೆಗೆ ಕಾವಲುಗಾರನ ಕೆಲಸ ಮಾಡುತ್ತಿದ್ದ ಬಸವಯ್ಯ ಅವರ ಮೇಲೆ ಕಳ್ಳರು ಕಲ್ಲು ಎತ್ತಿ ಹಾಕಿದ್ದಾರೆ. ಕಬ್ಬಣದ ಸಲಾಕೆಯಿಂದ ಹಲ್ಲೆ ಮಾಡಿದ್ದಾರೆ.

ತಲೆಗೆ ತೀವ್ರ ಗಾಯವಾಗಿದ್ದರಿಂದ ಬಸವಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಲ್ಲದೆ ಯಾವುದೇ ಮಾಹಿತಿ ಸಿಗಬಾರದೆಂದು ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ವನ್ನು ದುಷ್ಕರ್ಮಿಗಳು ಕಿತ್ತು ಬಿಸಾಕಿದ್ದಾರೆ. ಈಗಾಗಲೇ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಹತ್ಯೆ ನಂತರ ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟಿದ್ದರು. ಆದರೂ ಕಳ್ಳತನ ಮಾಡಲು ಬಂದ ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮದ್ದೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಎಸ್ಪಿಗೆ ಗ್ರಾಮಸ್ಥರಿಂದ ತರಾಟೆ:ತೊಪ್ಪನಹಳ್ಳಿಯಲ್ಲಿ ಮತ್ತೊಂದು ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್‍ಗೆ ಗ್ರಾಮಸ್ಥರು ತರಾಟೆ ತೆಗೆದು ಕೊಂಡರು. ಘಟನಾ ಸ್ಥಳಕ್ಕೆ ಪರಿಶೀಲನೆಗೆಂದು ಬಂದ ವೇಳೆ ಅನ್‍ಫಾರ್ಚುನೆಟ್ಲಿ ಕೊಲೆಯಾಗಿದೆ ಎಂದ ಎಸ್ಪಿ ಶಿವಪ್ರಕಾಶ್ ದೇವರಾಜ್ ವಿರುದ್ಧ ತೊಪ್ಪನಹಳ್ಳಿ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು. ಅನ್ ಫಾರ್ಚುನೆಟ್‍ನಿಂದ ಕೊಲೆಯಾಗಿದೆ ಅಂತೀರಾ, ಹಾಗಾದ್ರೆ ಜೀವಕ್ಕೆ ಬೆಲೆ ಇಲ್ವಾ ಎಂದು ತರಾಟೆಗೆ ತೆಗೆದುಕೊಂಡರು, ಪೊಲೀಸರ ನಿರ್ಲಕ್ಷ್ಯ ದಿಂದಲೇ ಕೊಲೆಯಾಗಿದೆ ಎಂದು ಮೃತ ಬಸವಯ್ಯ ಸಂಬಂಧಿಕರ ಆರೋಪಿಸಿದರು. ಇತ್ತೀಚೆಗೆ ನಡೆದ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆಯಿಂದ ಬೂದಿಮುಚ್ಚಿದ ಕೆಂಡದಂತಿರುವ ತೊಪ್ಪನಹಳ್ಳಿ ಗ್ರಾಮದಲ್ಲಿ ಕೆ.ಎಸ್.ಆರ್.ಪಿ ತುಕಡಿ ನಿಯೋಜಿಸಿದ್ರೂ ಕೊಲೆ ನಡೆದಿದೆ, ಘಟನೆ ನಡೆದ ಕೂಗಳತೆ ದೂರದಲ್ಲೇ ಪೊಲೀಸ್ ಸಿಬ್ಬಂದಿ ತಂಗಿದ್ದರು ಎನ್ನಲಾಗಿದೆ.

ಸಿಸಿಟಿವಿಯಲ್ಲಿ ಸೆರೆ: ದೇವಸ್ಥಾನದಲ್ಲಿ ಕಳ್ಳತನ ಹಾಗೂ ಬಸವಯ್ಯನ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ದೇವಾಲಯದಲ್ಲಿ ನಾಲ್ಕು ಜನ ಕಳ್ಳರು ಸಂಚರಿಸೋ ದೃಶ್ಯಾವಳಿ ದೇವಾಲಯದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ದೇವಾಲಯದ ಒಳಗೆ ಮುಖಕ್ಕೆ ಮಂಕಿ ಕ್ಯಾಪ್ ಧರಿಸಿ ಕಳ್ಳತನ ನಡೆಸಲು ಆಗಮಿಸಿದ್ದ ಖದೀಮರು ದೇವಾ ಲಯದಲ್ಲಿ ಸುಳಿದಾಡೋದು, ಹುಂಡಿ ಹಣ ಎಗರಿಸಿರುವ ದೃಶ್ಯಗಳು ಸಹ ಸೆರೆಯಾ ಗಿವೆ. ಕೃತ್ಯದ ಬಳಿಕ ದುಷ್ಕರ್ಮಿಗಳು ಸಿಸಿ ಕ್ಯಾಮರಾವನ್ನು ಕಿತ್ತು ಬಿಸಾಡಿದ್ದಾರೆ ಎನ್ನಲಾಗಿದೆ.

Translate »