ಪಾಂಡವಪುರ: ಪಾಂಡವಪುರ ಪಟ್ಟಣವನ್ನು ಸಕಲ ಸೌಕರ್ಯ ನಿರ್ಮಿ ಸುವ ಮೂಲಕ ಮೈಸೂರಿಗೆ ಪರ್ಯಾಯ ಉಪಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಪಟ್ಟಣದ ಡಾ.ರಾಜಕುಮಾರ್ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನ 14.5 ಕೋಟಿ ರೂ. ವೆಚ್ಚದ ಪುರಸಭೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾತನಾ ಡಿದರು. ಮೂರು ಬಾರಿ ಶಾಸಕನಾಗಿ, ಈಗ ಜಿಲ್ಲಾ ಉಸ್ತುವಾರಿ ಸಚಿವನಾಗಿ ಪಟ್ಟಣಕ್ಕೆ ಏನೇನು ಸೌಲಭ್ಯಗಳು ಬೇಕೆಂಬುದನ್ನು ಮನ ಗಂಡಿರುವ ತಾವು ಶಕ್ತಿ ಮೀರಿ ಕೆಲಸ ಮಾಡುವ ಮೂಲಕ ಪಾಂಡವಪುರವನ್ನು ಮಾದರಿ ಪಟ್ಟಣವನ್ನಾಗಿ ರೂಪಿಸುತ್ತೇನೆ ಎಂದರು.
ನೆನೆಗುದಿಗೆ ಬಿದ್ದಿರುವ ಯುಜಿಡಿ ಕಾಮ ಗಾರಿಯನ್ನು 4ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡು ರೈತರ ಜಮೀನಿಗೆ ವ್ಯವಸ್ಥಿತ ವಾಗಿ ಪರಿಹಾರ ದೊರಕಿಸಿಕೊಡುವೆ. ಜತೆಗೆ ಪಟ್ಟಣದ 3.5 ಕೋಟಿ ರೂ. ವೆಚ್ಚದಲ್ಲಿ ಅತ್ಯುತ್ತಮ ಪಾರ್ಕ್ ನಿರ್ಮಿಸಲಾಗುವುದು. ಪಾಂಡವಪುರ-ಕೆಆರ್‍ಎಸ್ ಮಾರ್ಗದ ಬಿಬಿ-ಬಿಟಿ ರಸ್ತೆಯನ್ನು 30ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿದ್ದು, ಪಟ್ಟಣ ವ್ಯಾಪ್ತಿಯಲ್ಲಿ 16ಕೋಟಿ ರೂ. ವಿನಿ ಯೋಗಿಸಲಾಗುವುದು ಎಂದು ತಿಳಿಸಿದರು.
ವಿಶೇಷವಾಗಿ ಪಟ್ಟಣದ ಅಭಿವೃದ್ಧಿ ಮಾಡ ಲಿದ್ದು, 14.5 ಕೋಟಿ ರೂ. ವೆಚ್ಚದಲ್ಲಿ ಪಟ್ಟ ಣದ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಹಿಂದಿನ ಸರ್ಕಾರ 2.10ಕೋಟಿ ರೂ. ಬಿಡು ಗಡೆ ಮಾಡಿತ್ತು. ಇದೀಗ ಇದೇ ರಸ್ತೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಹೆಚ್ಚುವರಿಯಾಗಿ 5 ಕೋಟಿ ರೂ. ಅನು ದಾನ ತರಲಾಗುವುದು. ವಿಜಯ ಬ್ಯಾಂಕ್ ರಸ್ತೆ, ಪಟ್ಟಣದ ಡಾ.ರಾಜಕುಮಾರ್ ವೃತ್ತ ದಿಂದ ನಾಗಮಂಗಲ ರಸ್ತೆ ಹಾಗೂ ಪೊಲೀಸ್ ಠಾಣೆಯಿಂದ ಕೆ.ಬೆಟ್ಟಹಳ್ಳಿವರೆಗಿನ ರಸ್ತೆ ಗಳನ್ನು 4 ಪಥದ ರಸ್ತೆಯನ್ನಾಗಿ ಮಾರ್ಪ ಡಿಸಲಾಗುವುದು. ಪಟ್ಟಣದ ಹಿರೋಡೆ ಕೆರೆ ಯನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು. ಇನ್ನೂ 5-6 ತಿಂಗಳಲ್ಲಿ ಎಲ್ಲಾ ಕಾಮಗಾರಿ ಪೂರ್ಣ ಗೊಳಿಸಿ ಪಾಂಡವಪುರಕ್ಕೆ ಹೊಸ ರೂಪ ಕೊಡಲಾಗುವುದು ಎಂದರು. ತಾ.ಪಂ ಅಧ್ಯಕ್ಷೆ ಸುಮಲತಾ ಮಹೇಶ್, ಜಿ.ಪಂ ಸದಸ್ಯರಾದ ಸಿ.ಅಶೋಕ್, ಸಾಮಿಲ್ ತಿಮ್ಮೇಗೌಡ, ಎಚ್. ತ್ಯಾಗರಾಜು, ಶಾಂತಲಾ, ಅನುಸೂಯ, ತಹಸೀಲ್ದಾರ್ ಎಂ.ವಿ.ರೂಪಾ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಟಿ.ಎಂ.ಯಶೋಧ, ಇಒ ಆರ್.ಪಿ.ಮಹೇಶ್, ಲೋಕೋಪ ಯೋಗಿ ಇಲಾಖೆ ಎಇಇ ಕಿಜರ್ ಅಹ್ಮದ್, ಜೆಪಿ ಪುಟ್ಟರಾಜು ಹಾಗೂ ಪುರಸಭೆಯ ಎಲ್ಲಾ ಸದಸ್ಯರು, ಮಾಜಿ ಅಧ್ಯಕ್ಷರು ಇತರರಿದ್ದರು.