ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಲು ಪೋಷಕರಿಗೆ ಸಲಹೆ
ಮೈಸೂರು

ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಲು ಪೋಷಕರಿಗೆ ಸಲಹೆ

January 15, 2019

ಮೈಸೂರು: ಮೈಸೂ ರಿನ ಕುವೆಂಪುನಗರದ ಪೂರ್ಣ ಪ್ರಜ್ಞ ವಿದ್ಯಾಕೇಂದ್ರದ 14ನೇ ವಾರ್ಷಿಕೋತ್ಸವ ಸಮಾರಂಭ ಮೈಸೂರಿನ ಗಾನಭಾರತಿ ಬಯಲು ರಂಗಮಂದಿರದಲ್ಲಿ ಭಾನು ವಾರ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮೈಸೂರು ಮಹಾನಗರಪಾಲಿಕೆ 47ನೇ ವಾರ್ಡ್ ಸದಸ್ಯ ಶಿವಕುಮಾರ್ ಮಾತ ನಾಡಿ, ಮೊಬೈಲ್ ಹಾವಳಿಯಿಂದ ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಬೆಳವಣಿಗೆಗೆ ಮಾರಕವಾಗಿದೆ. ಆದ್ದರಿಂದ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರ ಇಡುವ ಮೂಲಕ ಅವರ ಶೈಕ್ಷಣಿಕ, ಮಾನಸಿಕ ಬೆಳವಣಿಗೆಗೆ ಪೋಷಕರು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ನಾಗರಿಕ ವೇದಿಕೆ ಅಧ್ಯಕ್ಷ ಬಿ.ಬಸ ವಯ್ಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲೀನಾ ಲೋಕೇಶ್ ಸ್ಮರಣಾರ್ಥ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಉನ್ನತಿ ಲೋಕೇಶ್ ವಿತರಿಸಿದರು. ವೇದಿಕೆ ಹಿರಿಯ ಸದಸ್ಯ ರಾದ ಟಿ.ಕೃಷ್ಣೇಗೌಡ, ಶ್ರೀನಿವಾಸ ಮೂರ್ತಿ, ಟಿ.ವೆಂಕಟಸ್ವಾಮಿ, ವಿ.ವೆಂಕಟ ರಮಣಯ್ಯ, ಎಸ್.ಎ.ರಾಜಶೇಖರ್, ಬಿ.ಜೆ.ಲಕ್ಕೇಗೌಡ, ಬಿ.ಚಿಕ್ಕಬಸವಯ್ಯ, ಕಾಳಯ್ಯರನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯದರ್ಶಿ ಕುಳ್ಳೇಗೌಡ, ಶಾಲಾ ಸಮಿತಿ ಅಧ್ಯಕ್ಷ ಜೆ.ಲೋಕೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »