ಸಕ್ಕರೆ ನಾಡಲ್ಲಿ ಕ್ಷೀಣಿಸುತ್ತಿದೆ ಸಂಕ್ರಾಂತಿ ವೈಭವ
ಮಂಡ್ಯ

ಸಕ್ಕರೆ ನಾಡಲ್ಲಿ ಕ್ಷೀಣಿಸುತ್ತಿದೆ ಸಂಕ್ರಾಂತಿ ವೈಭವ

January 15, 2019

ಭಾರತೀನಗರ: ಹೊಸ ವರ್ಷದ ಪ್ರಪ್ರಥಮ ಹಬ್ಬ ಮಕರ ಸಂಕ್ರಾಂತಿ, ಈ ಹಬ್ಬ ಬರುವ ಎಲ್ಲಾ ಹಬ್ಬಗಳಿಗೂ ಮುನ್ನುಡಿಯಾಗಿದೆ. ಸಂಕ್ರಾಂತಿ ಎಂದಾ ಕ್ಷಣ ರೈತರು ತಮ್ಮ ಜಾನುವಾರುಗಳನ್ನು ಶೃಂಗರಿಸಿ, ದನಗಳನ್ನು ಕಿಚ್ಚಾಯಿಸುವುದು ಸಂಭ್ರಮದ ಕ್ಷಣವಾಗಿತ್ತು.

ಆದರೆ ಬರದ ಕರಿನೆರಳಿನಿಂದಾಗಿ ರೈತರು ತಮ್ಮ ಜಾನು ವಾರುಗಳನ್ನು ಮಾರಿಕೊಳ್ಳುವುದರ ಮೂಲಕ ಎತ್ತುಗಳ ಸಂಖ್ಯೆ ಗಣನೀಯವಾಗಿ ವರ್ಷದಿಂದ ವರ್ಷದಿಂದ ಕಡಿಮೆಯಾದ ಹಿನ್ನೆಲೆ ಯಲ್ಲಿ ಸಂಕ್ರಾಂತಿಯ ವೈಭವ ಕ್ಷೀಣಿಸುವಂತಿದೆ. ಹಬ್ಬಗಳು ನಮ್ಮ ಸಂಸ್ಕøತಿಯ ಪ್ರತೀಕವಾಗಿವೆ. ಹಬ್ಬಗಳ ಆಚರಣೆ ನಮ್ಮ ಪೂರ್ವಿಕರು ಸ್ನೇಹ ವಿಶ್ವಾಸದಿಂದ, ಸೌಹಾ ರ್ದತೆಯಿಂದ ಕೂಡಿ ಬಾಳಲು ಮಾನ ವೀಯ ಸಂಬಂಧಗಳನ್ನು ಬೆಸೆಯಲು ಹಾಗೂ ಸಾಂಘೀಕವಾಗಿ ನೆಮ್ಮದಿ ಜೀವನ ನಡೆಸಲು ಬದುಕಿನ ಬೇಸರ ಕಳೆದು ಮನಸ್ಸಿಗೆ ಹೊಸ ಚೈತನ್ಯ ತುಂಬಿಕೊಳ್ಳಲು ಹಬ್ಬ ಆಚರಣೆ ಅವಶ್ಯಕವಾಗಿದೆ. ರೈತರು ಫಸಲನ್ನೆಲ್ಲ ಒಕ್ಕಣೆ ಮಾಡಿ ಮನೆ ತುಂಬಿಸಿ ಕೊಂಡು ಸಂಭ್ರಮಿಸುವ ಈ ಹಬ್ಬ ಮಂಡ್ಯ ಜಿಲ್ಲೆಯ ಹಲವು ಕಡೆ ಈಗಾಗಲೇ ಬರದ ಛಾಯೆ ಕಂಡುಬಂದಿರುವುದು ಒಂದು ಕಡೆಯಾದರೆ, ರೈತರು ವ್ಯವಸಾಯಕ್ಕೆ ಯಥೇಚ್ಛವಾಗಿ ಯಂತ್ರೋಪಕರಣ ಉಪ ಯೋಗದಿಂದ ದನಕರುಗಳ ಅವಶ್ಯಕತೆ ಕಡಿಮೆಯಾಗಿ ತಮ್ಮಲ್ಲಿರುವ ಎತ್ತುಗಳನ್ನು ರೈತರು ಮಾರಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪೂರ್ವಿಕ ಕಾಲದಲ್ಲಿ ಜಾನುವಾರುಗಳಿಗೆ ಸಂಕ್ರಾಂತಿಯ ಸುಗ್ಗಿಯ ಹುಲ್ಲನ್ನು ಕೂಯ್ದು ತಿನ್ನಿಸುತ್ತಿದ್ದರು.

ಜೊತೆಗೆ ಜೋಳದ ಕಡ್ಡಿ, ಬೂದು ಗುಂಬಳಕಾಯಿ ತಿನ್ನಿಸಿ ಆರೋಗ್ಯಕರ ವಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಇಂದು ಹಳ್ಳಿಗಳಲ್ಲಿ ಪೂರ್ವಿಕರ ಕಾಲವನ್ನು ಅನುಸರಿಸದೆ ತಮ್ಮ ಇಷ್ಟ ಬಂದ ರೀತಿ ಯಲ್ಲಿ ಜಾನುವಾರುಗಳನ್ನು ನೋಡಿ ಕೊಳ್ಳುತ್ತಿರುವುದು ಎಲ್ಲೆಲ್ಲಿಯೂ ಕಂಡು ಬರುತ್ತಿದೆ. ಸಂಕ್ರಾಂತಿ ಹಬ್ಬ ಸಮೀಪಿ ಸುತ್ತಿದ್ದಂತೆಯೇ ರೈತರು ತಮ್ಮ ಹೊಲ-ಗದ್ದೆಗಳಲ್ಲಿ ಜಾನುವಾರುಗಳಿಗೆ ಹಸಿರು ಹುಲ್ಲನ್ನು ಬೆಳೆಯುವ ರೂಢಿಯಲ್ಲಿತ್ತು. ಆದರೆ ಪ್ರಸ್ತುತದಲ್ಲಿ ನೀರಿನ ಅಭಾವ ದಿಂದಾಗಿ ಎಲ್ಲೆಲ್ಲಿಯೂ ಹಸಿರು ಮೇವು ಕಾಣದಂ ತಾಗಿದೆ. ವಂಶ ಪಾರಂಪರೆಯಾಗಿ ಹಸು ಗಳನ್ನು ಸಾಕುತ್ತಿದ್ದ ಕುಟುಂಬವು ಕೂಡ ಹಸುಗಳನ್ನು ಸಾಕದೆ ಕೈಚೆಲ್ಲಿ ಕುಳಿತಿರು ವುದು ಆಧುನಿಕತೆಯಲ್ಲಿ ಸಂಪ್ರದಾಯಗಳು ಕಡಿಮೆಯಾಗುತ್ತಿವೆಯೋ ಎಂದು ಯೋಚಿಸುವಂತಾಗಿದೆ.

ವಸ್ತುಗಳ ಬೆಲೆ ಏರಿಕೆ: ಸಂಕ್ರಾಂತಿ ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಕಡ್ಲೆಬೀಜ, ಸಕ್ಕರೆ ಅಚ್ಚು, ಕೊಬ್ಬರಿ, ಬೆಲ್ಲ, ಅವರೆ, ತರಕಾರಿ, ಹೂ ಸೇರಿದಂತೆ ಧನಗಳಿಗೆ ಸಿಂಗರಿಸ ಬಹುದಾದ ವಸ್ತುಗಳ ಬೆಲೆ ದಾಖಲೆ ಪ್ರಮಾಣದಲ್ಲಿ ದುಪ್ಪಟವಾಗಿದ್ದು, ಜಾನು ವಾರುಗಳು ಇರುವಂತ ರೈತರು ಕೂಡ ಕೊಂಡುಕೊಳ್ಳಲು ಹಿಂದು-ಮುಂದು ನೋಡುತ್ತಿರುವುದರಿಂದ ಹಬ್ಬದ ವೈಭವ ಕಡಿಮೆಯಾಗಿದೆ.

ಅಣ್ಣೂರು ಸತೀಶ್

Translate »