ಸಿಂಗಾಪುರದಲ್ಲಿ ಫೆ.23ರಂದು ಕೆಂಪೇಗೌಡರ  ಎರಡನೇ ಅಂತಾರಾಷ್ಟ್ರೀಯ ಉತ್ಸವ
ಮೈಸೂರು

ಸಿಂಗಾಪುರದಲ್ಲಿ ಫೆ.23ರಂದು ಕೆಂಪೇಗೌಡರ ಎರಡನೇ ಅಂತಾರಾಷ್ಟ್ರೀಯ ಉತ್ಸವ

January 15, 2019

ಮೈಸೂರು: ಹೊರದೇಶಗಳಲ್ಲಿ ನಾಡಪ್ರಭು ಕೆÉಂಪೇಗೌಡರ ಜಯಂತಿ ಉತ್ಸವ ಮತ್ತು ಕನ್ನಡೋತ್ಸವ ನಡೆಸುತ್ತಾ ಬಂದಿರುವ ವಿಶ್ವ ಒಕ್ಕಲಿಗರ ಮಹಾ ವೇದಿಕೆ ಫೆ.23ರಂದು ಸಿಂಗಾಪುರದಲ್ಲಿ 2ನೇ ಅಂತಾರಾಷ್ಟ್ರೀಯ ಕೆಂಪೇಗೌಡ ಉತ್ಸವ, ಕನ್ನಡೋತ್ಸವ ಹಮ್ಮಿಕೊಂಡಿದೆ ಎಂದು ವೇದಿಕೆ ಅಧ್ಯಕ್ಷ ವೈ.ಡಿ.ರವಿಶಂಕರ್ ತಿಳಿಸಿದರ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದರು. ಕಳೆದ ಬಾರಿ ದುಬೈನಲ್ಲಿ ಉತ್ಸವ ನಡೆಸಲಾಗಿತ್ತು. ಈ ಬಾರಿ ಸಿಂಗಾಪುರದಲ್ಲಿ ನಡೆಸಲಾಗುತ್ತಿದೆ. ಉತ್ಸವದಲ್ಲಿ ನಟ ದಿವಂಗತ ಅಂಬರೀಶ್ ಅವರಿಗೆ ನುಡಿ ನಮನ, ಕೆಂಪೇಗೌಡರ ಕುರಿತು ಅಂತಾರಾಷ್ಟ್ರೀಯ ಮಟ್ಟದ ಚರ್ಚೆ ಏರ್ಪಡಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಸಿಂಗಾಪುರ ಕನ್ನಡಿಗರೇ ಆತಿಥ್ಯ ನೀಡುತ್ತಿದ್ದು, ಹಲವು ವರ್ಷಗಳಿಂದ ಅಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ವಿಶ್ವಾದ್ಯಂತ ಸ್ವಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು. ಡಾ.ನಿರ್ಮಲಾನಂದ ಸ್ವಾಮೀಜಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಕೇಂದ್ರ ಸಚಿವ ಡಿ.ವಿ.ಸದಾ ನಂದಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಡಿ.ಜಿ.ಪರ ಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಪುಟ್ಟರಾಜು, ಸಾ.ರಾ. ಮಹೇಶ್, ಜಿ.ಟಿ.ದೇವೇಗೌಡ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಮೈಸೂರಿಗರು ಹೆಚ್ಚಿನ ಮಾಹಿತಿಯನ್ನು ಮೈಸೂರು ಜಿಲ್ಲಾ ಶಾಖೆ ಅಧ್ಯಕ್ಷ ದೊರೆಸ್ವಾಮಿ, ಮೊ- 9449552666, ಕಾರ್ಯದರ್ಶಿ ಭೀಮರಾಜು ಈರೇಗೌಡ, ಮೊ- 9449327131 ಸಂಪರ್ಕಿಸಬಹುದು. ಸುದ್ದಿಗೋಷ್ಠಿ ಯಲ್ಲಿ ರಂಗಣ್ಣ, ಡಾ.ವಸಂತಕುಮಾರ್ ತಿಮಕಾಪುರ, ಶಿವಕುಮಾರ್ ಉಪಸ್ಥಿತರಿದ್ದರು.

Translate »