ನೂತನ ಪರೀಕ್ಷಾ ಪದ್ಧತಿ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮೈಸೂರು

ನೂತನ ಪರೀಕ್ಷಾ ಪದ್ಧತಿ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

January 15, 2019

ಮೈಸೂರು: ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸದಾಗಿ ಜಾರಿ ಗೊಳಿಸಿರುವ ಸಿಬಿಸಿಎಸ್ ಪರೀಕ್ಷಾ ಪದ್ಧತಿ ಯಲ್ಲಿರುವ ದೋಷವನ್ನು ಸರಿ ಮಾಡ ಬೇಕು. ಮರು ಮೌಲ್ಯಮಾಪನದ ಶುಲ್ಕ ಕಡಿಮೆ ಮಾಡಬೇಕು ಎಂಬುದು ಸೇರಿ ದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸಿದರು.

ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಮುಂದೆ ಸೋಮವಾರ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿ ನೂತನವಾಗಿ ಜಾರಿಗೊಳಿಸಿ ರುವ ಸಿಬಿಸಿಎಸ್ ಪರೀಕ್ಷಾ ಪದ್ಧತಿಯಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹೊಸ ಪದ್ಧತಿಯ ನೀತಿ ನಿಯಮಗಳ ಬಗ್ಗೆ ಉಪನ್ಯಾಸಕರು ಹಾಗೂ ಮೌಲ್ಯಮಾಪಕ ರಿಗೆ ಅರಿವಿಲ್ಲ. ಇದರಿಂದ ಸರಿಯಾದ ಉತ್ತರ ಬರೆದಿದ್ದರೂ ಮೌಲ್ಯಮಾಪಕರು ಅದು ತಪ್ಪೆಂದು ಅಂಕ ನೀಡದೆ ಅನ್ಯಾಯ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದರೂ ವಿವಿ ಆಡಳಿತ ಮಂಡಳಿ ಮೌನ ವಹಿಸಿದೆ. ಇದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು. 

ಈ ಹೊಸ ಪರೀಕ್ಷಾ ಪದ್ಧತಿಗೆ ಅನು ಗುಣವಾಗಿ ಪರೀಕ್ಷೆ ಬರೆದ ಮೈಸೂರು ವಿವಿ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿ ಗಳಿಗೆ ಅನ್ಯಾಯವಾಗಿದೆ. ಸರಿಯಾಗಿ ಉತ್ತರ ಬರೆದಿರುವ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲಾಗಿದೆ. ಉತ್ತರ ಪತ್ರಿಕೆ ಜೆರಾಕ್ಸ್ ಪ್ರತಿಯನ್ನು ಪಡೆದು ನೋಡಿದಾಗ ಮೌಲ್ಯಮಾಪಕರು ಸರಿ ಯಾದ ಉತ್ತರಕ್ಕೂ ತಪ್ಪೆಂದು ಹಾಕಿ ಅಂಕ ನೀಡದೆ ಇರುವುದು ಪತ್ತೆಯಾಗಿದೆ. ಇದನ್ನು ಗಮನಿಸಿದರೆ ಉದ್ದೇಶಪೂರ್ವಕ ವಾಗಿ ಅಂಕ ನೀಡದೆ ಇರುವ ಅನು ಮಾನವಿದೆ. ಅಲ್ಲದೆ ಜೆರಾಕ್ಸ್ ಪ್ರತಿ ಹಾಗೂ ಮರು ಮೌಲ್ಯಮಾಪನ ಶುಲ್ಕದಿಂದ ಆದಾಯ ಹೆಚ್ಚಿಸಿಕೊಳ್ಳುವ ಸಂಚು ಅಡಗಿದೆ ಎಂಬ ಅನುಮಾನವಿದೆ ಎಂದು ಪ್ರತಿಭಟನಾಕಾರರು ದೂರಿದರು.

ಒಂದು ವಿಷಯದ ಉತ್ತರ ಪತ್ರಿಕೆ ಜೆರಾಕ್ಸ್ ಪ್ರತಿ ಪಡೆಯಲು 600 ರೂ. ನಿಗದಿ ಮಾಡಲಾಗಿದೆ. ಒಂದು ಪತ್ರಿಕೆ ಮರು ಮೌಲ್ಯಮಾಪನಕ್ಕೆ 1100 ರೂ. ಶುಲ್ಕ ಪಾವತಿಸಬೇಕಾಗಿದೆ. ಬಡ ಹಾಗೂ ಮಧÀ್ಯಮ ವರ್ಗದ ವಿದ್ಯಾರ್ಥಿಗಳು ಈ ಪ್ರಮಾಣದ ಶುಲ್ಕ ಪಾವತಿಸುವುದಕ್ಕೆ ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿ ದ್ದಾರೆ. ಈ ಹಿನ್ನೆಲೆಯಲ್ಲಿ ಮರು ಮೌಲ್ಯ ಮಾಪನದ ಶುಲ್ಕ ಕಡಿಮೆ ಮಾಡಬೇಕು. ಫಲಿತಾಂಶದಲ್ಲಿ ಉಂಟಾಗಿರುವ ತಾಂತ್ರಿಕ ದೋಷಗಳನ್ನು ನಿವಾರಿಸಬೇಕು. ಎಲ್ಲಾ ವಿದ್ಯಾರ್ಥಿಗಳಿಗೆ  ಸಿಬಿಸಿಎಸ್ ಸ್ಕೀಂನ ಸಂಪೂರ್ಣ ಮಾಹಿತಿ ನೀಡಬೇಕು. ಮೌಲ್ಯ ಮಾಪ ನದ ಬಗ್ಗೆ ಗಮನಹರಿಸಿ ನ್ಯಾಯಯುತ ವಾಗಿ ಆಗುವಂತೆ ಗಮನಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿ ಷತ್ ಸಂಚಾಲಕ ರಾಕೇಶ್, ನಗರ ಕಾರ್ಯದರ್ಶಿ ಗೌತಮ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Translate »