ಅಂಬರೀಶ್ ಕುಟುಂಬಕ್ಕೆ ಮಂಡ್ಯ ಟಿಕೆಟ್ ನಿರಾಕರಿಸಿದ ಹೆಚ್‍ಡಿಕೆ
ಮಂಡ್ಯ

ಅಂಬರೀಶ್ ಕುಟುಂಬಕ್ಕೆ ಮಂಡ್ಯ ಟಿಕೆಟ್ ನಿರಾಕರಿಸಿದ ಹೆಚ್‍ಡಿಕೆ

January 15, 2019

ಮಂಡ್ಯ: ದಿ|| ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಥವಾ ಪುತ್ರ ಅಭಿಷೇಕ್‍ಗೆ ಮಂಡ್ಯ ಲೋಕಸಭಾ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರೇನು ಜೆಡಿಎಸ್‍ನಲ್ಲಿರಲಿಲ್ಲ,ಅವರು ಕಾಂಗ್ರೆಸ್‍ನಲ್ಲಿ ಶಾಸಕರಾಗಿದ್ದವರು,ಈಗ ಅವರ ಪತ್ನಿಯಾಗಲಿ,ಪುತ್ರನಾಗಲಿ ನಮ್ಮಲ್ಲಿ ಟಿಕೇಟ್ ಕೇಳುವ ಪ್ರಶ್ನೆಯೇನೂ ಉದ್ಬವ ವಾಗುವುದಿಲ್ಲ ಎಂದರು.

ಅಂಬರೀಶ್ ನಿಧನದ ವೇಳೆ ಅಂಬಿ ಅವರಿಗೆ ಗೌರವ ಸಲ್ಲಿಸಲು ನನ್ನ ಕರ್ತವ್ಯ ಮಾಡಿದೆ,ಜನರ ಭಾವನೆಗಳಿಗೆ ಸ್ಪಂದಿಸಿದೆ ಅಷ್ಟೆ, ಮಂಡ್ಯಕ್ಕೆ ಅಂಬರೀಶ್ ಪಾರ್ಥೀವ ಶರೀರ ತರುವ ಪ್ರಯತ್ನದ ಬಗ್ಗೆ ಬೇರೆ ಮುಖ್ಯಮಂತ್ರಿಗಳಾಗಿದ್ದರೆ ನನ್ನಷ್ಟು ಕಾಳಜಿ ವಹಿಸುತ್ತಿದ್ದರೊ, ಇಲ್ಲವೋ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಅಂಬಿಗೆ ನುಡಿ ನಮನಕ್ಕೆ ಗೈರು ವಿಚಾರ: ಅಂಬರೀಶ್‍ಗೆ ನುಡಿನಮನ ಕಾರ್ಯಕ್ರಮಕ್ಕೆ ನನಗೇನು ಅಧಿಕೃತ ಆಹ್ವಾನವಿರಲಿಲ್ಲ, ಯಾರನ್ನು ಕೇಳಿ ಸಮಯ ನಿಗದಿ ಮಾಡಿದ್ರು? ಯಾರೋ ಕೆಲವರು ಅವರಿಗಿಷ್ಟ ಬಂದಂತೆ ನಿಗದಿ ಮಾಡಿಕೊಂಡಿದ್ದಾರೆ, ನನ್ನನ್ನೇನು ಕೇಳಿ ಸಮಯ ನಿಗದಿ ಮಾಡಿಲ್ಲ.

ಒಬ್ಬ ಸಿಎಂಗೆ ಗೌರವ ಇಲ್ವಾ? ಅಷ್ಟಕ್ಕೂ ನನಗೆ ಪೂರ್ವನಿಗಧಿ ಕಾರ್ಯಕ್ರಮಗಳಿಂ ದಾಗಿ ಅಂದಿನ ಕಾರ್ಯಕ್ರಮಕ್ಕೆ ಬರಲಾಗಿಲ್ಲ,ಅಂಬರೀಷ್ ವಿಷಯದಲ್ಲಿ ರಾಜಕೀಯ ಮಾಡಲ್ಲ ಎಂದರು.

ಮಂಡ್ಯದ ಸಮಗ್ರ ಅಭಿವೃದ್ಧಿಗೆ ಬದ್ಧ: ಕೆಆರ್‍ಎಸ್ ಜಲಾಶಯ ಭರ್ತಿ ಆದರೂ ಜಿಲ್ಲೆಯೊಳಗೆ ಬರಗಾಲ ಕಾಡುತ್ತಿದೆ, ಈ ಜಿಲ್ಲೆ ಅಭಿವೃದ್ಧಿಗೆ ಕಾರ್ಯಕ್ರಮ ಹಮ್ಮಿ ಕೊಳ್ಳದೆ ಕೊರಗಿದೆ. ಈಗಾಗಲೇ ಎರ ಡ್ಮೂರು ಸಭೆ ಮಾಡಿದ್ದೇನೆ. ಜಿಲ್ಲೆಯ ಜನ ತೆಯ ಋಣ ನಮ್ಮ ಕುಟುಂಬದ ಮೇಲಿದೆ, ಜಿಲ್ಲೆಯ ಅಭಿವೃದ್ಧಿಗೆ ನನ್ನದೇ ಆದ ವಿಶೇಷ ಯೋಜನೆಯ ಯೋಚನೆ ಇದೆ,1985ರಲ್ಲಿ ನೋಡಿದ್ದ ಮಂಡ್ಯ ಈಗಲೂ ಹಾಗೇ ಇದೆ. ಜಿಲ್ಲೆಯ ಜನರ ನಿರೀಕ್ಷೆ ತಲುಪಲು ಎಡವಿ ದ್ದೇವೆ ಅನ್ನಿಸುತ್ತಿದೆ. ಬಜೆಟ್‍ನಲ್ಲಿ ಜಿಲ್ಲೆಗೆ ಕೊಟ್ಟ ಅನುದಾನವನ್ನು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಇದು ಮಂಡ್ಯ ಬಜೆಟ್ ಅಂತ ಟೀಕೆ ಮಾಡಿದರು.ಆದರೂ ಮಂಡ್ಯದ ಅಭಿವೃದ್ದಿಯಿಂದ ಹಿಂದೆ ಸರಿ ಯುವ ಪ್ರಶ್ನೆಯೇ ಇಲ್ಲ. ಸಮಗ್ರ ಅಭಿ ವೃದ್ಧಿಗೆ ಬದ್ಧ ಎಂದರು.

ನಾನು ಸಿಎಂ ಆಗಲು ಮಂಡ್ಯ ಜಿಲ್ಲೆಯ ಕೊಡುಗೆ ದೊಡ್ಡದು, ಮೈಷುಗರ್ ಸಕ್ಕರೆ ಕಾರ್ಖಾನೆ ಪುನರುಜ್ಜೀವನಗೊಳಿಸೋದ ಕ್ಕಿಂತ ಹೊಸದೊಂದು ಯೋಜನೆಯ ಚಿಂತನೆಯಿದೆ. ಈಗಾಗಲೇ 400 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ ಆದರೂ ಕಾರ್ಖಾನೆ ಸಫಲತೆ ಕಂಡಿಲ್ಲ, ಹೊಸದಾಗಿ ಮೈಷುಗರ್ ಕಾರ್ಖಾನೆ ಮಾಡುವುದಕ್ಕೂ ಆರ್ಥಿಕ ಇಲಾಖೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.ಆದರೂ ಜಿಲ್ಲೆಯ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಮೈಷುಗರ್ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದರು.

50 ಸಾವಿರ ಯುವಕರಿಗೆ ಉದ್ಯೋಗ: ಡಿಸ್ನಿಲ್ಯಾಂಡ್ ಮಾದರಿ ಕೆಆರ್‍ಎಸ್ ಅಭಿ ವೃದ್ಧಿ ವಿಚಾರದಲ್ಲಿ ವಿರೋಧ ವ್ಯಕ್ತವಾಗು ತ್ತಿದೆ, ಡ್ಯಾಂ ಒಡೆಯೋಕೆ ಡಿಸ್ನಿಲ್ಯಾಂಡ್ ಮಾಡ್ತಿ ದ್ದಾರೆ ಅನ್ನೋದು ಮೂರ್ಖರ ಚಿಂತನೆ, ಇದಿನ್ನೂ ಪ್ರಿಲಿಮಿನರಿ ಸ್ಟೇಜ್‍ನಲ್ಲಿದೆ. ನಮ್ಮ ಚಿಂತನೆ ಕೇವಲ ಪ್ರತಿಮೆ ಕಟ್ಟೋದಲ್ಲ. ಕನಿಷ್ಠ 50 ರೈತರ ಸಾವಿರ ಕುಟುಂಬಗಳಿಗೆ ಆರ್ಥಿಕ ವಾಗಿ ಶಕ್ತಿ ತುಂಬಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ ಎಂದರು.
5 ವರ್ಷ ಸರ್ಕಾರ ಸುಭದ್ರ: ನಮ್ಮ ಸರ್ಕಾರ 5 ವರ್ಷ ಸುಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ತರಹದ ತೊಂದರೆ ಇಲ್ಲ, ಹೇಗೆ ಉಳಿಸಿಕೊಳ್ಳಬೇಕು ಗೊತ್ತು. ಯಾವ ಡೆಡ್ ಲೈನ್ ಕೂಡ ಯಶಸ್ವಿಯಾಗಲ್ಲ ಎಂದು ಹೇಳಿದರು.

ಇದೇ ವೇಳೆ ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಪ್ರತಿಕ್ರಿಯಿಸಿದ ಸಿಎಂ, ಎಂಪಿ ಚುನಾವಣೆ ಸಂಬಂಧ ಸಭೆಗಳು ಆರಂಭವಾಗಿದೆ. ಈಗಾಗಲೇ ಹಾಸನ, ತುಮಕೂರು, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಕಾರ್ಯಕರ್ತರ ಸಭೆ ಮಾಡಿ ದ್ದೇವೆ. ಮಂಡ್ಯದಲ್ಲಿ ಉಪ ಚುನಾವಣೆ ಯಿಂದಲೇ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆದಿದೆ. ಅಭ್ಯರ್ಥಿ ಆಯ್ಕೆ ವಿಚಾರ ದಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂ ಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮಂಡ್ಯದಲ್ಲಿ ಬೈ ಎಲೆಕ್ಷನ್ ಮೂಲಕವೇ ಸಂಘಟನೆ ಆರಂಭವಾಗಿದೆ. ಕೆಲವರು ನಿಖಿಲ್ ಸ್ಪರ್ಧೆ ಬಯಸಿದ್ದಾರೆ. ಹಿಂದಿ ನಿಂದಲೂ ಹಲವಾರು ಚುನಾವಣೆಯಲ್ಲಿ ನಿಖಿಲ್ ಕೆಲಸ ಮಾಡಿದ್ದಾರೆ. ಹಲವರ ಗೆಲುವಿಗೆ ಶ್ರಮಿಸಿದ್ದಾರೆ.

ಶಾಸಕರು ಮತ್ತು ಜಿಲ್ಲಾ ಪಂಚಾಯತ್‍ನ ಕೆಲ ಸದಸ್ಯರು ನಿಖಿಲ್ ಅವರನ್ನು ತಮ್ಮ ಜೊತೆ ಬಿಡಿ ಅಂತ ಹೇಳುತ್ತಾರೆ. ಆದರೆ ಇದು ಕೇವಲ ಶಾಸಕರ, ಪಂಚಾಯತ್ ಸದಸ್ಯರ ಅಭಿಪ್ರಾಯ ಮಾತ್ರ. ಮಂಡ್ಯ ಮತ ದಾರರ ಅಭಿಪ್ರಾಯ ಪಡೆದು. ನಿಖಿಲ್ ಚುನಾವಣಾ ಕಣಕ್ಕಿಳಿಸಲಾಗುವುದು, ಈ ಬಗ್ಗೆ ನಾನೇನು ಹೇಳಲ್ಲ ಎಂದರು. ಸುದ್ದಿ ಗೋಷ್ಠಿಯ ಬಳಿಕ ಪ್ರವಾಸಿ ಮಂದಿರದದ ಆವರಣದಲ್ಲಿ ಮುಖ್ಯಮಂತ್ರಿಗಳು ಜನರ ಬಳಿ ತೆರಳಿ ಅಹವಾಲು ಸ್ವೀಕಾರ ಮಾಡಿದರು.

ಸಿಎಂ ಬಳಿ ಹಲವರು ತಮ್ಮ ಅಳಲು ತೋಡಿಕೊಂಡರು, ಈ ವೇಳೆ ಸಿಎಂ ನೊಂದವರ ಸಮಸ್ಯೆಗೆ ಪರಿಹಾರದ ಭರ ವಸೆ ನೀಡಿದರು. ಕೆಲವು ಸ್ಥಳೀಯ ನಾಯ ಕರ ಬೆಂಬಲಿಗರಿಂದ ನಿಗಮ ಮಂಡಳಿ ಸ್ಥಾನಮಾನಕ್ಕಾಗಿ ಬೇಡಿಕೆಯ ಮನವಿಯೂ ಕಂಡುಬಂತು. ಈ ಸಂದರ್ಭದಲ್ಲಿ ಪ್ರವಾ ಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜಿಲ್ಲಾಧ್ಯಕ್ಷ ಡಿ. ರಮೇಶ್ ಮತ್ತಿತರರು ಇದ್ದರು. ಸುದ್ದಿ ಗೋಷ್ಠಿಗೂ ಮುನ್ನ ಪೊಲೀಸರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೌರವ ವಂದನೆ ಸ್ವೀಕರಿಸಿದರು.ಈ ವೇಳೆ
ಸ್ಥಳೀಯ ಶಾಸಕರು, ಕಾರ್ಯಕರ್ತರು, ಮುಖಂಡರಿಂದ ಸಿಎಂಗೆ ಸ್ವಾಗತ ಕೋರಲಾಯಿತು.

Translate »