ಬಿಜೆಪಿಯ ಆಪರೇಷನ್ ಕಮಲ ಫಲ ನೀಡಲ್ಲ
ಮೈಸೂರು

ಬಿಜೆಪಿಯ ಆಪರೇಷನ್ ಕಮಲ ಫಲ ನೀಡಲ್ಲ

January 15, 2019

ಮೈಸೂರು: ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಯವರು ಮಾಡುತ್ತಿರುವ ಆಪರೇಷನ್ ಕಮಲ ಫಲ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕೆಪಿಎ ಕವಾಯಿತು ಮೈದಾನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಮುಂಬೈ ನಲ್ಲಿರುವ ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕ ದಲ್ಲಿದ್ದಾರೆ. ಅವರು ನನ್ನ ಸ್ನೇಹಿತರು. ನನಗೆ ಹೇಳಿಯೇ ಮುಂಬೈಗೆ ಹೋಗಿದ್ದಾರೆ. ಇಂದು ಬೆಳಿಗ್ಗೆ 7.30 ಗಂಟೆಯಲ್ಲೂ ಆ ಮೂವರು ಶಾಸಕರೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿದ್ದೇನೆ. ಯಾರೂ ಪಕ್ಷ ಬಿಡುವ ಮನಸ್ಥಿತಿಯಲ್ಲಿಲ್ಲ ಎಂದು ನುಡಿದರು.

ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ. ಬಿಜೆಪಿಯವರು ಯಾರ್ಯಾ ರನ್ನು ಸಂಪರ್ಕಿಸಿದ್ದಾರೆ, ಯಾರ್ಯಾರಿಗೆ ದೊಡ್ಡ ದೊಡ್ಡ ಉಡುಗೊರೆಯ ಆಮಿಷ ಒಡ್ಡಿದ್ದಾರೆಂಬುದು ಗೊತ್ತಿದೆ. ಎಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಬಿಜೆಪಿಯ ವರ ಆ ಪ್ರಯತ್ನ ಸಫಲವಾಗಲ್ಲ ಎಂದು ತಿಳಿಸಿದರು. ಸರ್ಕಾರ ಬೀಳುವ ಸ್ಥಿತಿಯಲ್ಲಿದ್ದಿದ್ದರೆ ನಾನು ಇಷ್ಟು ಕೂಲ್ ಆಗಿರಲು ಸಾಧ್ಯವಿತ್ತೆ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಕೆಲ ಮಾಧ್ಯಮಗಳಿಗೆ ಯಾರೂ ಇಂತಹ ಮಾಹಿತಿ ನೀಡುತ್ತಿ ದ್ದಾರೋ ಗೊತ್ತಿಲ್ಲ. ಕೆಲವರು ರಾಷ್ಟ್ರಪತಿ ಆಳ್ವಿಕೆ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಈ ರೀತಿಯ ಸುದ್ದಿಯಿಂದ ನನಗೇನೂ ನಷ್ಟವಿಲ್ಲ ಎಂದರು. ಆದರೆ ಇಂತಹ ಊಹಾ ಪೋಹ ಸುದ್ದಿಗಳಿಂದ ರಾಜ್ಯದ ಜನಕ್ಕೆ ಗೊಂದಲ ಉಂಟಾಗುತ್ತದೆ. ನನ್ನ ಸರ್ಕಾರ ಸುಭದ್ರವಾಗಿದೆ. ಯಾವ ಆತಂಕವೂ ಇಲ್ಲ. ನಾವೀಗ ಜನರ ಸಮಸ್ಯೆ ಆಲಿಸಿ ಅಭಿವೃದ್ಧಿ ಕಾರ್ಯಕ್ರಮದತ್ತ ಗಮನಹರಿಸುತ್ತಿ ದ್ದೇವೆ ಎಂದು ಕುಮಾರಸ್ವಾಮಿ ಇದೇ ವೇಳೆ ನುಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕ್ಲರ್ಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನಾನೆಲ್ಲಿಯೂ ಕಾಂಗ್ರೆಸ್ ಕ್ಲರ್ಕ್ ರೀತಿ ನನ್ನ ನಡೆಸಿ ಕೊಳ್ಳುತ್ತಿದೆ ಎಂಬ ಭಾವನೆ ವ್ಯಕ್ತಪಡಿಸಿಲ್ಲ. ಈ ಕ್ಲರ್ಕ್ ಪದ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ ಎಂದರ ಲ್ಲದೆ, ಪ್ರಧಾನಮಂತ್ರಿ ಗಳು ಹೇಗೆ ಈ ರೀತಿ ಹೇಳಿದರೆಂಬುದು ತಿಳಿಯುತ್ತಿಲ್ಲ ಎಂದು ನುಡಿದರು.

ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಏರು ಪೇರಾಗುತ್ತಿರುವ ಬಗ್ಗೆ ಸರ್ಕಾರ ಸದಾ ಸಂಪರ್ಕದಲ್ಲಿದ್ದು, ನಿಗಾ ವಹಿಸುತ್ತಿದೆ. ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರಿದಿದೆ. ಅವರೊಬ್ಬ ಪವಾಡ ಪುರುಷರಾಗಿರು ವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

Translate »