ಟಿಪ್ಪು ಸುಲ್ತಾನ್ ನಾಯಕ್‍ವಾಡಿಗೆ ಸರ್ವೋತ್ತಮ ಟ್ರೋಫಿ
ಮೈಸೂರು

ಟಿಪ್ಪು ಸುಲ್ತಾನ್ ನಾಯಕ್‍ವಾಡಿಗೆ ಸರ್ವೋತ್ತಮ ಟ್ರೋಫಿ

January 15, 2019

ಮೈಸೂರು: ಮೈಸೂರಿನ ಕೆಪಿಎನಲ್ಲಿ ಒಂದು ವರ್ಷ ಬುನಾದಿ ತರಬೇತಿ ಪಡೆದ ಅವಧಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಪೊಲೀಸ್ ಸಬ್ ಇನ್ಸ್‍ಸ್ಪೆಕ್ಟರ್ ಪ್ರಶಿಕ್ಷಣಾರ್ಥಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ ಟ್ರೋಫಿ ಹಾಗೂ ಬಹುಮಾನಗಳನ್ನು ಪ್ರದಾನ ಮಾಡಿದರು.

ಕೆಪಿಎ ಕವಾಯಿತು ಮೈದಾನ ದಲ್ಲಿ ಇಂದು ಏರ್ಪಡಿಸಿದ್ದ 41ನೇ ತಂಡದ ಸಬ್‍ಇನ್‍ಸ್ಪೆಕ್ಟರ್ ಪ್ರಶಿಕ್ಷ ಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪರೇಡ್ ಕಮಾಂ ಡರ್ ಟಿಪ್ಪು ಸುಲ್ತಾನ್ ನಾಯಕ್ ವಾಡಿ ಅವರಿಗೆ ಸರ್ವೋತ್ತಮ ಟ್ರೋಫಿ, ಮುಖ್ಯಮಂತ್ರಿಗಳ ಟ್ರೋಫಿ, ಖಡ್ಗ ಡಿಜಿ ಅಂಡ್ ಐಜಿಪಿ ಬ್ಯಾಟ್‍ನ ಮತ್ತು ನಿವೃತ್ತ ಡಿಜಿಪಿ ಹಾಗೂ ಗರುಡಾಚಾರ್ ನಗದು ಬಹುಮಾನವನ್ನು ನೀಡ ಲಾಯಿತು. ಪ್ರಕಾಶ ಪಾಲಾಕ್ಷಪ್ಪ ಕಣಜೇರಗೆ ಕಾನೂನು ಕಪ್, ಡಿ.ಆರ್. ಮೋಹನ ಕುಮಾರ್‍ಗೆ ತನಿಖಾ ಕಪ್, ಹೆಚ್.ಎನ್.ಕಿರಣ್‍ರಾಜ್‍ಗೆ ಪಬ್ಲಿಕ್ ಆರ್ಡರ್ ಕಪ್, ಎನ್.ಕೆ.ರಾಕೇಶ್‍ಗೆ ದೈಹಿಕ ತರಬೇತಿ ಕಪ್, ಆನಂದ್ ಮಾನಶೆಟ್ಟರ್‍ಗೆ ಡ್ರಿಲ್ ಕಪ್, ಸಂತೋಷಕುಮಾರ್‍ಗೆ ಟ್ಯಾಕ್ಟಿಕ್ಸ್ ಕಪ್, ಬಿ.ಶಿವಶಂಕರ್‍ಗೆ ಉತ್ತಮ ರೈಫಲ್ ಫೈರಿಂಗ್ ಕಪ್, ನಬೀಸ್ ವಾಲಿಕರ್‍ಗೆ ಬೆಸ್ಟ್ ರಿವಾಲ್ವರ್ ಕಪ್, ಜಿ.ಶೃತಿಗೆ ಉತ್ತಮ ಒಳಾಂಗಣ ಕಪ್, ಅಕ್ಷತಾ ಎಫ್. ಕುರು ಕುಂದಿಗೆ ಬೆಸ್ಟ್ ಮಹಿಳಾ ಹೊರಾಂಗಣ ಕಪ್, ಆನಂದ ಮಾನಶೆಟ್ಟರ್‍ಗೆ ಉತ್ತಮ ಹೊರಾಂಗಣ ಕಪ್ ಹಾಗೂ ಜಿ.ಶೃತಿಗೆ ಗೃಹ ಸಚಿವರ ಟ್ರೋಫಿಯನ್ನು ಪ್ರಧಾನ ಮಾಡಲಾಯಿತು. 2018ರ ಫೆಬ್ರವರಿ 11ರಿಂದ ಕೆಪಿಎಯಲ್ಲಿ 11 ತಿಂಗಳ ಬುನಾದಿ ತರಬೇತಿ ಪಡೆದ 50 ಮಹಿಳೆಯರೂ ಸೇರಿದಂತೆ ಒಟ್ಟು 287 ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಪ್ರಶಿಕ್ಷಣಾರ್ಥಿಗಳ ಪೈಕಿ ಇಬ್ಬರು ಎಂಟೆಕ್, ಓರ್ವ ಎಂಇ, 56 ಬಿಇ, ಓರ್ವ ಬಿಟೆಕ್, 9 ಆರ್ಮಿ ಪದವೀಧರರು, 7 ಮಂದಿ ಬಿಎ, ಇಬ್ಬರು ಬಿಎ ಎಲ್‍ಎಲ್‍ಬಿ, ಮೂವರು ಬಿಬಿಎ, ಓರ್ವ ಎಲ್‍ಎಲ್‍ಬಿ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರಾಗಿದ್ದಾರೆ. ಟಿಪ್ಪು ಸುಲ್ತಾನ್ ನಾಯಕ್‍ವಾಡಿ ಅವರು ಪರೇಡ್ ಕಮಾಂಡರ್ ಆಗಿ ನಾಯಕತ್ವ ವಹಿಸಿದ್ದ ನಿರ್ಗಮನ ಪಥಸಂಚಲನದ ಕಾರ್ಯಕ್ರಮದಲ್ಲಿ ಆಕಾಶವಾಣಿಯ ಮಂಜುನಾಥ ಹಾಗೂ ಇತರರು ಉತ್ತಮವಾಗಿ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಮೈಸೂರಲ್ಲಿ ಶಿಕ್ಷಣ ಇಲಾಖೆಯ

Translate »