ಪ್ರಭಾವಕ್ಕೊಳಗಾಗಿ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳಬೇಡಿ
ಮೈಸೂರು

ಪ್ರಭಾವಕ್ಕೊಳಗಾಗಿ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳಬೇಡಿ

January 15, 2019

ಮೈಸೂರು: ರಾಜಕಾರಣಿ ಗಳ ಪ್ರಭಾವಕ್ಕೆ ಮಣಿದು ಆತ್ಮವಿಶ್ವಾಸಕ್ಕೆ ಧಕ್ಕೆ ತಂದಕೊಳ್ಳಬೇಡಿ ಎಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರೊಬೇಷನರಿ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಗಳಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.

ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ(ಕೆಪಿಎ) ಕವಾಯತು ಮೈದಾನ ದಲ್ಲಿ ನಡೆದ ಅಕಾಡೆಮಿಯ 41ನೇ ತಂಡದ ಆರಕ್ಷಕ ಉಪನಿರೀಕ್ಷಕ (ಸಿವಿಲ್) ಪ್ರಶಿಕ್ಷಣಾ ರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯ ಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತ ನಾಡುತ್ತಿದ್ದ ಅವರು, ಸರ್ಕಾರದ ವಿರುದ್ಧ ಇಲಾಖೆಗಳ `ಪೈಕಿ ರಾಜ್ಯ ಪೊಲೀಸ್ ಇಲಾಖೆಗೆ ವಿಶಿಷ್ಟ ಗೌರವವಿದೆ. ಹಿರಿಯ ಹಲವು ಪೊಲೀಸ್ ಅಧಿಕಾರಿಗಳು ನಿಷ್ಠೆ ಯಿಂದ ಕೆಲಸ ಮಾಡಿ ಒಳ್ಳೆ ಹೆಸರು ತಂದಿ ದ್ದಾರೆ ಎಂದರು. ಈಗ ಅವಕಾಶ ನಿಮಗೆ ಬಂದಿರುವುದು ಸುದೈವ. ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಅತ್ಯಂತ ಪ್ರಾಮಾ ಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಜನರ ಪ್ರಾಣ ಹಾಗೂ ಆಸ್ತಿ-ಪಾಸ್ತಿ ರಕ್ಷಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಯಾವುದೇ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಾನೂನು ವ್ಯಾಪ್ತಿ ಮೀರದಿರಿ ಎಂದು ಸಬ್‍ಇನ್‍ಸ್ಪೆಕ್ಟರ್‍ಗಳಿಗೆ ಸಲಹೆ ನೀಡಿದರು.

ನೀವೆಲ್ಲರೂ ಸ್ವಂತ ಪ್ರತಿಭೆಯಿಂದ ಉನ್ನತ ಶಿಕ್ಷಣ ಪಡೆದು ಪೊಲೀಸ್ ಇಲಾಖೆಗೆ ಸೇರಿದ್ದೀರಿ. ಸ್ಥಳ ನಿಯೋಜನೆಗಾಗಿ ಯಾವ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಬೇಡಿ. ರಾಜ್ಯದ ಯಾವ ಮೂಲೆಗೆ ನಿಯುಕ್ತಿ ಗೊಳಿಸಿದರೂ ಶಿಸ್ತು ಬದ್ಧವಾಗಿ ಜನರ ಸೇವೆ ಮಾಡುವ ಮೂಲಕ ಸರ್ಕಾರಕ್ಕೆ, ನಿಮ್ಮ ಪೋಷಕರಿಗೆ ಒಳ್ಳೆಯ ಹೆಸರು ತಂದುಕೊಡಿ ಎಂದು ಕುಮಾರಸ್ವಾಮಿ ಇದೇ ಸಂದರ್ಭ ಸಲಹೆ ನೀಡಿದರು.

ಗಣ್ಯರಿಗೆ ಜನರಲ್ ಸಲ್ಯೂಟ್ ಮಾಡಿದ ಪ್ರಶಿಕ್ಷಣಾರ್ಥಿಗಳು, ಆಕರ್ಷಕ ಪಥಸಂಚ ಲನ ನಡೆಸಿ ಮುಖ್ಯ ಅತಿಥಿಗಳಾಗಿ ಭಾಗ ವಹಿಸಿದ್ದ ಮುಖ್ಯಮಂತ್ರಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಈ ವೇಳೆ ರಾಷ್ಟ್ರ ಧ್ವಜ ಮತ್ತು ರಾಜ್ಯ ಪೊಲೀಸ್ ಧ್ವಜಗಳಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭ ಪೊಲೀಸ್ ವಾದ್ಯವೃಂದ ರಾಷ್ಟ್ರಗೀತೆ ನುಡಿಸಿದಾಗ ಸರ್ವರೂ ಎದ್ದುನಿಂತು ಗೌರವ ವಂದನೆ ಸಲ್ಲಿಸಿದರು.

ಗೃಹಸಚಿವ ಎಂ.ಬಿ.ಪಾಟೀಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲ ಮಣಿ ಎನ್.ರಾಜು, ಡಿಜಿಪಿ (ತರಬೇತಿ) ಪದಮ್ ಕುಮಾರ್‍ಗರ್ಗ್ ಹಾಗೂ ಐಜಿಪಿ (ತರಬೇತಿ) ಎಸ್.ರವಿ ಅವರು ನಿರ್ಗ ಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅತಿಥಿಗಳನ್ನು ಸ್ವಾಗತಿ ಸಿದ ಕೆಪಿಎ ನಿರ್ದೇಶಕ ವಿಫುಲ್‍ಕುಮಾರ್, ಪ್ರಶಿಕ್ಷಣಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್, ದಕ್ಷಿಣ ವಲಯ ಐಜಿಪಿ ಶರತ್‍ಚಂದ್ರ, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಎಸ್ಪಿ ಅಮಿತ್ ಸಿಂಗ್, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ನಿವೃತ್ತ ಪೊಲೀಸ್ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳ ಪೋಷ ಕರು, ಸಂಬಂಧಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »