15 ಡಿವೈಎಸ್ಪಿ, 46 ಪೊಲೀಸ್ ಇನ್ಸ್‍ಪೆಕ್ಟರ್‍ಗಳ ವರ್ಗಾವಣೆ
ಮೈಸೂರು

15 ಡಿವೈಎಸ್ಪಿ, 46 ಪೊಲೀಸ್ ಇನ್ಸ್‍ಪೆಕ್ಟರ್‍ಗಳ ವರ್ಗಾವಣೆ

January 15, 2019

ಬೆಂಗಳೂರು: ಆಪರೇಷನ್ ಕಮಲ ಭೀತಿಯ ನಡುವೆಯೇ 15 ಡಿವೈಎಸ್ಪಿ ಮತ್ತು 46 ಪೊಲೀಸ್ ಇನ್ಸ್ ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.

ಸ್ಥಳ ನಿರೀಕ್ಷೆಯಲ್ಲಿರುವ ಕೆ.ಸಂತೋಷ್ ಅವರನ್ನು ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ವಿ.ವಿ.ಪುರಂ ಇನ್ಸ್‍ಪೆಕ್ಟರ್ ಪಿ.ಎ.ಸೂರಜ್ ಅವರನ್ನು ದೇವರಾಜ ಸಂಚಾರ ಠಾಣೆಗೆ, ಮೈಸೂರು ನಗರ ಎಸ್‍ಬಿ ಇನ್ಸ್‍ಪೆಕ್ಟರ್ ಆರ್.ಪಿ.ಅಶೋಕ್ ಅವರನ್ನು ಹೊಳೆ ನರಸೀಪುರಕ್ಕೆ, ಎಸಿಬಿಯಲ್ಲಿರುವ ಎಸ್.ಡಿ. ಸುರೇಶ್‍ಕುಮಾರ್ ಅವರನ್ನು ಜಯ ಲಕ್ಷ್ಮೀಪುರಂ ಠಾಣೆಗೆ ಸ್ಥಳ ನಿರೀಕ್ಷೆಯಲ್ಲಿ ರುವ ಆರ್.ಜಗದೀಶ್ ಅವರನ್ನು ಕೆ.ಆರ್. ಸಂಚಾರ ಠಾಣೆಗೆ, ಸ್ಥಳ ನಿರೀಕ್ಷೆಯಲ್ಲಿ ರುವÀ ಜಿ.ಸಿ.ರಾಜಾ ಅವರನ್ನು ಕುವೆಂಪು ನಗರ ಠಾಣೆಗೆ, ಸ್ಥಳ ನಿರೀಕ್ಷೆಯಲ್ಲಿರುವ ಎಸ್.ಗಂಗಾಧರ್ ಅವರನ್ನು ಲಕ್ಷ್ಮೀಪುರಂ ಠಾಣೆಗೆ, ಸ್ಥಳ ನಿರೀಕ್ಷೆಯಲ್ಲಿರುವ ಎನ್. ಮುನಿಯಪ್ಪ ಅವರನ್ನು ಲಷ್ಕರ್ ಠಾಣೆಗೆ, ಮೈಸೂರು ಮಹಿಳಾ ಠಾಣೆ ಇನ್ಸ್‍ಪೆಕ್ಟರ್ ಎಸ್.ಶಶಿಕಲಾ ಅವರನ್ನು ಲೋಕಾಯುಕ್ತಾಗೆ, ವಿ.ವಿ.ಪುರಂ ಸಂಚಾರ ಠಾಣೆಯ ಸಿ.ವಿ.ರವಿ ಅವರನ್ನು ಮೈಸೂರು ಗ್ರಾಮಾಂತರ ವೃತ್ತಕ್ಕೆ, ಜಯಲಕ್ಷ್ಮೀಪುರಂನ ಬಿ.ಜಿ.ಪ್ರಕಾಶ್ ಅವ ರನ್ನು ವಿ.ವಿ.ಪುರಂ ಸಂಚಾರ ಠಾಣೆಗೆ, ಎಸಿಬಿಯಲ್ಲಿರುವ ಹೆಚ್.ಎನ್.ವಿನಯ್ ಅವರನ್ನು ವಿ.ವಿ.ಪುರಂ ಠಾಣೆಗೆ, ಸ್ಥಳ ನಿರೀಕ್ಷೆಯಲ್ಲಿರುವ ಕೆ.ವಿ.ಕೃಷ್ಣಪ್ಪ ಅವರನ್ನು ಶ್ರೀರಂಗಪಟ್ಟಣ ವೃತ್ತಕ್ಕೆ ಇನ್ಸ್‍ಪೆಕ್ಟರ್‍ಗಳಾಗಿ ವರ್ಗಾವಣೆ ಮಾಡಲಾಗಿದೆ.

Translate »