Tag: Mandya

ಬಿಜೆಪಿ ಅಭ್ಯರ್ಥಿ ಪರ ಬಿಎಸ್‍ವೈ ಭರ್ಜರಿ ಪ್ರಚಾರ
ಮಂಡ್ಯ

ಬಿಜೆಪಿ ಅಭ್ಯರ್ಥಿ ಪರ ಬಿಎಸ್‍ವೈ ಭರ್ಜರಿ ಪ್ರಚಾರ

October 24, 2018

ಮಂಡ್ಯ: ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಾಯಕರು ಮಂಗಳವಾರ ಮಂಡ್ಯ ಲೋಕಸಭಾ ಕ್ಷೇತ್ರದ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿದರು. ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್. ಪೇಟೆ ಮತ್ತು ಕೆ.ಆರ್.ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಆರ್.ಅಶೋಕ್, ಚಿತ್ರನಟಿ ತಾರಾ ಸೇರಿದಂತೆ ಹಲವು ನಾಯಕರು ಬಹಿರಂಗ ಪ್ರಚಾರ ನಡೆಸಿದರು. ಶ್ರಿರಂಗಪಟ್ಟಣ: ಜನ್ಮಭೂಮಿ ಮಂಡ್ಯಜಿಲ್ಲೆ, ಕರ್ಮಭೂಮಿ ಶಿವಮೊಗ್ಗ. ಆದರೆ, ಈ ನನ್ನ ಜನ್ಮಭೂಮಿ ಮಂಡ್ಯದಿಂದ ಒಬ್ಬನೇ ಒಬ್ಬ ಬಿಜೆಪಿಯ ಅಭ್ಯರ್ಥಿಯನ್ನು…

ಅರ್ಜುನ್ ಸರ್ಜಾ ಪರ ನಟ ಜಗ್ಗೇಶ್, ತಾರಾ ಬ್ಯಾಟಿಂಗ್
ಮಂಡ್ಯ

ಅರ್ಜುನ್ ಸರ್ಜಾ ಪರ ನಟ ಜಗ್ಗೇಶ್, ತಾರಾ ಬ್ಯಾಟಿಂಗ್

October 24, 2018

ಮಂಡ್ಯ:  ಮೀಟೂ ವಿವಾದದಲ್ಲಿ ಸಿಲುಕಿರುವ ನಟ ಅರ್ಜುನ್ ಸರ್ಜಾ ಪರ ನಟ ಜಗ್ಗೇಶ್ ಬ್ಯಾಟಿಂಗ್ ಮಾಡಿದ್ದಾರೆ. ಅನ್ಯಾಯ ಅಥವಾ ದೌರ್ಜನ್ಯ ನಡೆ ದಾಗ ಪ್ರತಿಕ್ರಿಯಿಸುವುದನ್ನು ಬಿಟ್ಟು ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಈಗ ಮಾಡಿರುವ ಆರೋಪ ಒಪ್ಪುವಂತದಲ್ಲ ಎಂದಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಭೇಟಿ ಮಾಡಿದ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಶ್ರುತಿ ಹರಿಹರನ್‍ಗೆ ಅನ್ಯಾಯವಾಗಿದ್ದಲ್ಲಿ ಆಕೆ ಆ ಕೂಡಲೇ ಪ್ರತಿಕ್ರಿಯಿಸಬೇಕಿತ್ತು. ಆದರೆ, ಈಗ ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿ ತಪ್ಪು ಮಾಡಿದ್ದಾರೆ. ಇದು…

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

October 24, 2018

ಕೂಲಿಕಾರರಿಂದ ತಾಪಂ ಕಚೇರಿ ಮುತ್ತಿಗೆ, ಬೇಡಿಕೆ ಈಡೇರಿಸಲು ನ.11ರಂದು ಸಭೆ ಮದ್ದೂರು: ನರೇಗಾ ಯೋಜನೆ ಯಡಿ ಕೆಲಸ ಸಮರ್ಪಕವಾಗಿ ಜಾರಿ ಮಾಡಬೇಕು. ಮಂಜೂರಾಗಿರುವ ನಿರುದ್ಯೋಗ ಭತ್ಯೆ ನೀಡಬೇಕು ಎಂಬುದು ಸೇರಿ ದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ ನಡೆಯಿತು. ತಾಲೂಕು ಪಂಚಾಯಿತಿ ಕಚೇರಿ ಮುಂದೆ ಸಮಾವೇಶಗೊಂಡ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗುತ್ತ ಕಚೇರಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ…

ಸೈನಿಕರಿಗೆ ಸಲ್ಲುವ ಗೌರವ ಹುತಾತ್ಮ ಪೊಲೀಸರಿಗೂ ದೊರೆಯಲಿ: ಡಿಸಿ
ಮಂಡ್ಯ

ಸೈನಿಕರಿಗೆ ಸಲ್ಲುವ ಗೌರವ ಹುತಾತ್ಮ ಪೊಲೀಸರಿಗೂ ದೊರೆಯಲಿ: ಡಿಸಿ

October 22, 2018

ರಾಜ್ಯದ 15 ಪೊಲೀಸರು ಸೇರಿ 414 ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಣೆ ಮಂಡ್ಯ: ಸೈನಿಕರು ಗಡಿ ಕಾಯುತ್ತಾ ದೇಶ ರಕ್ಷಣೆ ಮಾಡಿದರೆ, ಪೊಲೀಸರು ನಾಗರಿಕರನ್ನು ರಕ್ಷಣೆ ಮಾಡುತ್ತಾ ಸೇವೆ ಸಲ್ಲಿಸುತ್ತಾ ದೇಶದೊಳಗಿನ ಸೈನಿಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್. ಮಂಜುಶ್ರೀ ತಿಳಿಸಿದರು. ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ಹುತಾತ್ಮರ ದಿನಾ ಚರಣೆ ಅಂಗವಾಗಿ ಸೇವೆ ವೇಳೆಯಲ್ಲಿ ಮೃತರಾದ ಪೆÇಲೀಸ್ ಅಧಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಪೊಲೀಸ್ ಸೇವೆ ಕಷ್ಟವಾಗಿದೆ. ದೇಶದ ಗಡಿಯಲ್ಲಿ ಸೈನಿಕರು…

ಕೆರೆ ಸ್ವಚ್ಛಗೊಳಿಸಿದ ಕೊತ್ತತ್ತಿ ಗ್ರಾಮದ ಯುವಕರು
ಮಂಡ್ಯ

ಕೆರೆ ಸ್ವಚ್ಛಗೊಳಿಸಿದ ಕೊತ್ತತ್ತಿ ಗ್ರಾಮದ ಯುವಕರು

October 22, 2018

ಮಂಡ್ಯ:  ಹಳ್ಳಿಗರ ಜೀವಾಳವೆಂದರೆ ಕೆರೆಗಳು. ಇತ್ತೀಚೆಗೆ ಕೆರೆಗಳಲ್ಲಿ ಹೂಳು ತುಂಬಿಕೊಂಡು ರೈತರಿಗೆ ಆತಂಕ ತಂದಿದೆ. ಸರ್ಕಾರಗಳು ಕೆರೆಗಳ ರಕ್ಷಣೆಗೆ ಮುಂದಾಗುತ್ತವೆ ಎಂಬ ನಂಬಿಕೆ ಈಗ ರೈತರಲ್ಲಿ ಇಲ್ಲ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ರೈತರು, ಗ್ರಾಮದ ಯುವಕರು ಕೆರೆಗಳ ಸ್ವಚ್ಛತೆಗೆ ಮುಂದಾಗಿದ್ದಾರೆ. ಸರ್ಕಾರದ ಹಣಕ್ಕೆ ಆಸೆ ಪಡೆದೇ, ತಾವೇ ಖುದ್ದು ಹಣ ಹಾಕಿ ಕೆರೆಗಳ ರಕ್ಷಣೆಗೆ ಮುಂದಾಗಿದ್ದಾರೆ. ಇದಕ್ಕೆ ಕೊತ್ತತ್ತಿ ಗ್ರಾಮದ ಯುವಕರು ಗ್ರಾಮದ ಕೆರೆಯನ್ನು ಸ್ವಚ್ಛಗೊಳಿಸುತ್ತಿರುವುದೇ ನಿದರ್ಶನವಾಗಿದೆ. ಇತ್ತೀಚೆಗೆ ಕೆರೆಗಳಲ್ಲಿ ಹೂಳು ತುಂಬಿಕೊಂಡು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ….

ಸಹಕಾರಿ ಸಂಘಗಳು ದುಡಿಯುವ ವರ್ಗದ ಆಶಾಕಿರಣ
ಮಂಡ್ಯ

ಸಹಕಾರಿ ಸಂಘಗಳು ದುಡಿಯುವ ವರ್ಗದ ಆಶಾಕಿರಣ

October 22, 2018

ಮಂಡ್ಯ: ಸಾಲಸೌಲಭ್ಯ ನೀಡುವುದರ ಜೊತೆಗೆ ಗುಡಿಕೈಗಾರಿಕೆ, ಹೈನು ಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಆರ್ಥಿಕ ನೆರವು ಕಲ್ಪಿಸುತ್ತಿರುವ ಸಹಕಾರಿ ಸಂಘಗಳು ದುಡಿಯುವ ವರ್ಗಗಳ ಪಾಲಿಗೆ ಆಶಾಕಿರಣವಾಗಿವೆ ಎಂದು ಹಿರಿಯ ಸಹಕಾರಿ ಧುರೀಣ ಕೌಡ್ಲೆ ಚನ್ನಪ್ಪ ಹೇಳಿದರು. ನಗರದ ಸುಭಾಷ್ ನಗರದಲ್ಲಿರುವ ಕಾಯಕಯೋಗಿ ಸಹಕಾರ ಸಂಘದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ರೈತ ಮಹಿಳೆಯರಿಗೆ ಕಲ್ಪವೃಕ್ಷ ವಿತರಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳು ವಿವಿಧ ಕಾಯಕಗಳನ್ನು ಮಾಡುವ ಮಹಿಳೆ ಯರು, ವರ್ತಕರು, ಕೃಷಿಕರು, ಮೀನು ಗಾರಿಕೆ, ಹಸು ಸಾಕಾಣಿಕೆಗೆ ಅಗತ್ಯ…

ಉನ್ನತ ಹುದ್ದೆ ಅಲಂಕರಿಸುವ ಕನಸು ಹೊಂದಿ: ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಸಲಹೆ
ಮಂಡ್ಯ

ಉನ್ನತ ಹುದ್ದೆ ಅಲಂಕರಿಸುವ ಕನಸು ಹೊಂದಿ: ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಸಲಹೆ

October 22, 2018

ಮಂಡ್ಯ:  ‘ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಕನಸು ಉನ್ನತ ಹುದ್ದೆ ಅಲಂಕರಿಸುವುದು ಆಗಬೇಕು. ಇದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಛಲ ಮೈಗೂಡಿಸಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿಕ್ ಸರ್ವೋದಯ ಟ್ರಸ್ಟ್ ಸೂಕ್ತ ತರಬೇತಿಯನ್ನು ನೀಡುತ್ತಿದ್ದು, ಉದ್ಯೋಗ ಆಕಾಂಕ್ಷಿಗಳು ಇದರ ಸದುಪ ಯೋಗ ಪಡೆದುಕೊಳ್ಳಬೇಕು ಎಂದು ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಸಲಹೆ ನೀಡಿದರು. ನಗರದ ಕೃಷಿಕ್ ಸರ್ವೋದಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಬುನಾದಿ ತರಬೇತಿ ಸಮಾ ರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಐಎಎಸ್, ಐಎಫ್‍ಎಸ್…

ಜಿಲ್ಲಾದ್ಯಂತ ಸಂಭ್ರಮದ ಆಯುಧಪೂಜೆ, ವಿಜಯದಶಮಿ
ಮಂಡ್ಯ

ಜಿಲ್ಲಾದ್ಯಂತ ಸಂಭ್ರಮದ ಆಯುಧಪೂಜೆ, ವಿಜಯದಶಮಿ

October 20, 2018

ಎಲ್ಲೆಡೆ ಸಡಗರ, ದೇವಾಲಯಗಳಲ್ಲಿ ವಿಶೇಷ ಪೂಜೆ, ಜಾನಪದ ಕಲಾತಂಡಗಳ ಅದ್ಧೂರಿ ಮೆರವಣಿಗೆ ಮಂಡ್ಯ:  ಜಿಲ್ಲೆಯಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಆಯುಧಪೂಜೆ ಅಂಗವಾಗಿ ಸರ್ಕಾರಿ ಕಚೇರಿಗಳು, ಬಸ್ ಡಿಪೋ, ಲಾರಿ, ಆಟೋ ನಿಲ್ದಾಣ, ಮನೆ, ಕಾರ್ಖಾನೆ, ಆಲೆಮನೆ, ಪಂಪ್‍ಸೆಟ್, ಅಂಗಡಿ-ಮುಂಗಟ್ಟುಗಳಲ್ಲಿ ವಿಶೇಷ ಪೂಜೆ ನಡೆದರೆ. ದಸರಾ ಅಂಗ ವಾಗಿ ಜಿಲ್ಲೆಯ ವಿವಿಧೆಡೆ ಜಾನಪದ ಕಲಾ ತಂಡಗಳೊಂದಿಗೆ ಚಾಮುಂಡೇಶ್ವರಿ ತಾಯಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು….

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು
ಮಂಡ್ಯ

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

October 20, 2018

ಮಂಡ್ಯ: ದ್ವಿಚಕ್ರ ವಾಹನ ತೊಳೆಯೋ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಉಜ್ಜನಿ ಚೆನ್ನನದೊಡ್ಡಿ ಗ್ರಾಮದಲ್ಲಿ ನಡೆದಿದೆ. ರಮೇಶ್ (40) ಮೃತ ವ್ಯಕ್ತಿ. ದ್ವಿಚಕ್ರ ವಾಹನ ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಮೋಟಾರ್‍ನಿಂದ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎಚ್1ಎನ್1 ಜ್ವರಕ್ಕೆ ಗೃಹಿಣಿ ಬಲಿ
ಮಂಡ್ಯ

ಎಚ್1ಎನ್1 ಜ್ವರಕ್ಕೆ ಗೃಹಿಣಿ ಬಲಿ

October 20, 2018

ಮಂಡ್ಯ: ಎಚ್1ಎನ್1 ಜ್ವರಕ್ಕೆ ಜಿಲ್ಲೆಯ ಗೃಹಿಣಿ ಯೊಬ್ಬರು ಬಲಿಯಾಗಿ ರುವ ಘಟನೆ ಮದ್ದೂರು ತಾಲೂಕಿನ ವಳಗೆರೆ ಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ವೆಂಕಟೇಶ್ ಎಂಬುವವರ ಪತ್ನಿ ಬಿ.ಎಸ್.ಜ್ಯೋತಿ(39) ಬೆಂಗಳೂರಿನ ರಾಜರಾಜೇಶ್ವರಿ ನಗರದ ಎಸ್‍ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮೂಲತಃ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ವೆಂಕಟೇಶ್ ಬೆಂಗ ಳೂರಿನಲ್ಲಿ ಗೂಡ್ಸ್ ವಾಹನ ಚಾಲಕರಾಗಿದ್ದು ಕೊಂಡು ಜೀವನ ನಿರ್ವಹಿಸುತ್ತಿದ್ದರು. ಪತಿ ಜೊತೆ ವಾಸವಿದ್ದ ಬಿ.ಎಸ್. ಜ್ಯೋತಿ ಅವರಿಗೆ ಕಳೆದ 23 ದಿನಗಳ ಹಿಂದೆ ತೀವ್ರ ಜ್ವರ, ಉಸಿರಾಟದ ತೊಂದರೆ ಕಾಣಿಸಿ…

1 33 34 35 36 37 56
Translate »