Tag: Mandya

ಆಯುಧ ಪೂಜೆ: ವ್ಯಾಪಾರ ಭರಾಟೆ ಜೋರು
ಮಂಡ್ಯ

ಆಯುಧ ಪೂಜೆ: ವ್ಯಾಪಾರ ಭರಾಟೆ ಜೋರು

October 18, 2018

ನಗರದೆಲ್ಲೆಡೆ ಕಳೆಗಟ್ಟಿದ ಸಂಭ್ರಮ, ಹೂ, ಹಣ್ಣು, ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಮಂಡ್ಯ: ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ನಗರದ ಮಾರು ಕಟ್ಟೆಯಲ್ಲಿ ಮುನ್ನ ದಿನವಾದ ಬುಧವಾರ ವ್ಯಾಪಾರ-ವಹಿವಾಟು ಚುರುಕಾಗಿತ್ತು. ಪೂಜಾ ಸಾಮಗ್ರಿಗಳು ಹಾಗೂ ವಾಹನಗಳ ಅಲಂಕಾರಿಕ ವಸ್ತುಗಳಿಗೆ ಸಾಕಷ್ಟು ಬೇಡಿಕೆ ಕಂಡು ಬಂತು. ಆಯುಧಪೂಜೆಗೆ ಅಗತ್ಯವಾದ ಪೂಜೆ ಸಾಮಗ್ರಿ, ಹಣ್ಣು- ಹಂಪಲು, ಬಾಳೆ ದಿಂಡು, ಮಾವಿನ ಸೊಪ್ಪನ್ನು ಕೊಳ್ಳಲು ಗ್ರಾಹಕರು ಮುಗಿ ಬಿದ್ದಿದ್ದರು. ಹೂವಿಗೆ ಭಾರಿ ಬೇಡಿ ಕೆಯಿದ್ದು, ಎಲ್ಲೆಂದರಲ್ಲಿ ಹೂ ಮಾರಾಟ ಕಂಡು ಬಂತು….

ಸಾಲಬಾಧೆಯಿಂದ ಜೆಡಿಎಸ್ ಮುಖಂಡ ಆತ್ಮಹತ್ಯೆ
ಮಂಡ್ಯ

ಸಾಲಬಾಧೆಯಿಂದ ಜೆಡಿಎಸ್ ಮುಖಂಡ ಆತ್ಮಹತ್ಯೆ

October 18, 2018

ಮಂಡ್ಯ:  ಸಾಲಬಾಧೆ ತಾಳಲಾರದೆ ಜೆಡಿಎಸ್ ಮುಖಂಡ ಹಾಗೂ ಉದ್ಯಮಿಯೋರ್ವ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸ್ವರ್ಣಸಂದ್ರ ಫ್ಯಾಕ್ಟರಿ ವೃತ್ತದಲ್ಲಿ ನಡೆದಿದೆ. ಚಿಕ್ಕೇಗೌಡನದೊಡ್ಡಿಯ ನಿವಾಸಿ ಲೋಕೇಶ್ (35) ಆತ್ಮಹತ್ಯೆಗೆ ಶರಣಾಗಿರುವ ಉದ್ಯಮಿ. ನಗರದ ಸ್ವರ್ಣಸಂದ್ರ ಫ್ಯಾಕ್ಟರಿ ವೃತ್ತದ ಬಳಿ ಲೋಕೇಶ್ ಅವರು ಮಹಿಂದ್ರಾ ಟ್ರ್ಯಾಕ್ಟರ್ ಶೋರೂಂ ನಡೆಸುತ್ತಿದ್ದರು. ಕಳೆದ ನಗರಸಭೆ ಚುನಾವಣೆಯಲ್ಲಿ 34ನೇ ವಾರ್ಡ್‍ನಿಂದ ಜೆಡಿಎಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಲೋಕೇಶ್ ವ್ಯವಹಾರದ ಸಲುವಾಗಿ 5 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದು, ವ್ಯವ ಹಾರದಲ್ಲಿ ನಷ್ಟ…

ಪ್ರತ್ಯೇಕ ಪ್ರಕರಣ: ಸಾಲಬಾಧೆಗೆ ಇಬ್ಬರು ರೈತರು ಆತ್ಮಹತ್ಯೆ
ಮಂಡ್ಯ

ಪ್ರತ್ಯೇಕ ಪ್ರಕರಣ: ಸಾಲಬಾಧೆಗೆ ಇಬ್ಬರು ರೈತರು ಆತ್ಮಹತ್ಯೆ

October 18, 2018

ಮಂಡ್ಯ: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ. ಮದ್ದೂರು ತಾಲೂಕಿನ ಗೂಳೂರು ಗ್ರಾಮದ ಶಿವಣ್ಣ(41) ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಹುಂಡಿ ಗ್ರಾಮ ಈಶ್ವರ್ (48) ಆತ್ಮಹತ್ಯೆಗೆ ಶರಣಾದ ರೈತರಾಗಿದ್ದಾರೆ. ಮದ್ದೂರು ವರದಿ: ಮದ್ದೂರು ತಾಲೂಕಿನ ಗೂಳೂರು ಗ್ರಾಮದ ಶಿವಣ್ಣ ಅವರು ರೇಷ್ಮೆ ಕೃಷಿಗಾಗಿ 5 ಲಕ್ಷ ರೂ. ಸಾಲ ಮಾಡಿದ್ದು, ಸಾಲ ಮರುಪಾವತಿಯ ಒತ್ತಡ ಹೆಚ್ಚಾಗಿದ್ದರಿಂದ ಆತ್ಮಹತ್ಯೆಗೆ ಶರಣಾ ಗಿದ್ದಾರÉ ಎನ್ನಲಾಗಿದೆ. ಈ ಸಂಬಂಧ ಕೊಪ್ಪ ಪೊಲೀಸ್…

ಅಪ್ರಾಪ್ತ ನವವಿವಾಹಿತೆ ಆತ್ಮಹತ್ಯೆ
ಮಂಡ್ಯ

ಅಪ್ರಾಪ್ತ ನವವಿವಾಹಿತೆ ಆತ್ಮಹತ್ಯೆ

October 18, 2018

ಮಂಡ್ಯ: ಕೌಟುಂಬಿಕ ಕಲಹ ಹಿನ್ನೆಲೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಅಪ್ರಾಪ್ತ ನವವಿವಾಹಿತೆ ನೇಣಿಗೆ ಶರಣಾದ ಘಟನೆ ಮದ್ದೂರು ತಾಲೂಕಿನ ಮಣಿಗೆರೆ ಗ್ರಾಮದಲ್ಲಿ ನಡೆದಿದೆ. ಮಣಿಗೆರೆ ಗ್ರಾಮದ ಶಿಲ್ಪ(16) ಮೃತ ದುರ್ದೈವಿ. ಒಂದು ತಿಂಗಳ ಹಿಂದೆಯಷ್ಟೇ ಗ್ರಾಮದ ಕೃಷ್ಣ ಎಂಬವರ ಜೊತೆ ಈಕೆಯ ವಿವಾಹವಾಗಿತ್ತು. ಶಿಲ್ಪ ಮೂಲತಃ ರಾಮನಗರ ಜಿಲ್ಲೆಯವಳಾಗಿದ್ದು, ಬಡತನದ ಹಿನ್ನೆಲೆಯಲ್ಲಿ ವಿವಾಹ ಮಾಡಿಕೊಡಲಾಗಿತ್ತು ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು ಸೇರಿದಂತೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಬಾಲಕಿಯನ್ನು ಮದುವೆ ಮಾಡಿಕೊಂಡಿದ್ದ ಕುಟುಂಬದ ವಿರುದ್ಧ ಪ್ರಕರಣ…

ಮಂಡ್ಯ ಲೋಕಸಭಾ ಕ್ಷೇತ್ರ ಉಪ ಚುನಾವಣೆ: ಜೆಡಿಎಸ್‍ನ ಶಿವರಾಮೇಗೌಡ, ಬಿಜೆಪಿಯ ಡಾ.ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ
ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರ ಉಪ ಚುನಾವಣೆ: ಜೆಡಿಎಸ್‍ನ ಶಿವರಾಮೇಗೌಡ, ಬಿಜೆಪಿಯ ಡಾ.ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ

October 16, 2018

ಮಂಡ್ಯ:ಮಂಡ್ಯ ಲೋಕ ಸಭಾ ಕ್ಷೇತ್ರದ ಉಪ ಚುನಾವಣೆಗೆ ಸೋಮವಾರ ಒಟ್ಟು 6 ನಾಮಪತ್ರ ಸಲ್ಲಿಕೆಯಾದವು. ಸ್ಥಳೀಯ ಹಲವು ನಾಯಕರ ಅಸಮಾಧಾನದ ನಡುವೆ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ನಾಮಪತ್ರ ಸಲ್ಲಿಸಿದರು. ಎಲ್.ಆರ್.ಶಿವರಾಮೇಗೌಡ ನಾಮಪತ್ರ ಸಲ್ಲಿಕೆ: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ, ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಸಣ್ಣ ನೀರಾವರಿ ಹಾಗೂ ಜಿಲ್ಲಾ…

ಮಂಡ್ಯ ಲೋಕಸಭಾ ಉಪ ಚುನಾವಣೆ ಗರಿಗೆದರಿದ ರಾಜಕೀಯ ಚಟುವಟಿಕೆ
ಮಂಡ್ಯ

ಮಂಡ್ಯ ಲೋಕಸಭಾ ಉಪ ಚುನಾವಣೆ ಗರಿಗೆದರಿದ ರಾಜಕೀಯ ಚಟುವಟಿಕೆ

October 11, 2018

ಮಂಡ್ಯ: ಲೋಕಸಭಾ ಉಪ ಸಮರಕ್ಕೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಜಿಲ್ಲೆಯಲ್ಲಿ ಗರಿಗೆದರಿವೆ. ಸಿಕ್ಸ್ ಮಂತ್ ಕಾ ಸುಲ್ತಾನ್ ಯಾರಾಗಲಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಸಿ.ಎಸ್.ಪುಟ್ಟರಾಜು ರಾಜೀನಾಮೆಯಿಂದ ಈ ಚುನಾವಣೆ ಎದುರಾಗಿದೆ. ಸಾರ್ವತ್ರಿಕ ಚುನಾವಣೆಗೆ 6 ತಿಂಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯೋದಿಲ್ಲ ಎಂಬ ಭಾವನೆ ಬಹುತೇಕರಲ್ಲಿತ್ತು. ಆದರೆ, ಇದೀಗ ಆಯೋಗ ಉಪ ಚುನಾವಣೆ ಘೋಷಿಸಿರುವ ಹಿನ್ನೆಲೆಯಲ್ಲಿ ಒಲ್ಲದ ಮನಸ್ಸಿನಿಂದಲೇ ಚುನಾವಣೆಗೆ ರೆಡಿಯಾಗ ಬೇಕಾದ ಸಂದಿಗ್ಧ ಪರಿಸ್ಥಿತಿ ರಾಜಕಾರಣಿಗಳಿಗೆ ಮಾತ್ರವಲ್ಲ ಮತದಾರರಿಗೂ…

ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಅಪಾಯವಿಲ್ಲ: ಸ್ಪಷ್ಟನೆ
ಮಂಡ್ಯ

ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಅಪಾಯವಿಲ್ಲ: ಸ್ಪಷ್ಟನೆ

October 11, 2018

ಮಂಡ್ಯ:ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲ ಎಂದು ಗಣಿ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಡವಪುರ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ ಅವರು, ಬೇಬಿ ಬೆಟ್ಟದ ಸುತ್ತಲಿನ ಸುಮಾರು 24 ಗಣಿಗಾರಿಕೆಗಳು ಕಾನೂನು ಬದ್ದವಾಗಿಯೇ ನಡೆಯುತ್ತಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾನದಂಡದಂತೆಯೇ ನಡೆಸಲಾಗುತ್ತಿದೆ. ಆದರೂ, ನಮ್ಮ ಗಣಿಗಾರಿಕೆಗಳನ್ನು ಸ್ಥಗಿತಗೊಳಿಸುವ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದರು. ಕೆಆರ್‌ಎಸ್‌ ವ್ಯಾಪ್ತಿಯ…

ಮಂಡ್ಯ ಲೋಕಸಭಾ ಉಪ ಚುನಾವಣೆ: ಹಾಲಿ, ಮಾಜಿ ‘ದಳ’ಪತಿಗಳ ಕದನ
ಮಂಡ್ಯ

ಮಂಡ್ಯ ಲೋಕಸಭಾ ಉಪ ಚುನಾವಣೆ: ಹಾಲಿ, ಮಾಜಿ ‘ದಳ’ಪತಿಗಳ ಕದನ

October 10, 2018

ಮಂಡ್ಯ: ಲೋಕಸಭಾ ಉಪಚುನಾವಣಾ ಕಣ ದಿನೇ ದಿನೆ ಕಾವೇರುತ್ತಿದೆ. ಹಾಲಿ-ಮಾಜಿ ದಳಪತಿಗಳಾದ ಸಿ.ಎಸ್.ಪುಟ್ಟರಾಜು ಮತ್ತು ಎನ್.ಚೆಲುವರಾಯಸ್ವಾಮಿ ನಡುವೆ ಬಹಿರಂಗ ವಾಕ್ಸಮರ ಶುರುವಾಗಿರುವುದು ಒಂದೆಡೆಯಾದರೆ ದಳದೊಳಗೆ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಮತ್ತು ನಿವೃತ್ತ ಐಆರ್‍ಎಸ್ ಅಧಿಕಾರಿ ಲಕ್ಷ್ಮಿಅಶ್ವಿನ್ ಗೌಡರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದಾಟ ತಾರಕಕ್ಕೇರಿದೆ. ಡೆಡ್ ಹಾರ್ಸ್‍ಗಳೆಲ್ಲಾ ಮಾತನಾಡೋ ಹಾಗಾಗಿದೆ: ಡೆಡ್ ಹಾರ್ಸ್‍ಗಳೆಲ್ಲಾ ಮಾತ ನಾಡುವ ಹಾಗಾಗಿದೆ ಎನ್ನುವ ಮೂಲಕ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಅವರನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಹಿಯ್ಯಾಳಿಸಿದ್ದಾರೆ. ಪಾಂಡವಪುರ ತಾಲೂಕಿನ…

ಪ್ರತ್ಯೇಕ ಪ್ರಕರಣ: ನೀರಿನಲ್ಲಿ ಮುಳುಗಿ ಇಬ್ಬರ ಸಾವು
ಮಂಡ್ಯ

ಪ್ರತ್ಯೇಕ ಪ್ರಕರಣ: ನೀರಿನಲ್ಲಿ ಮುಳುಗಿ ಇಬ್ಬರ ಸಾವು

October 10, 2018

ಕೆ.ಆರ್.ಪೇಟೆ: ಪ್ರತ್ಯೇಕ ಪ್ರಕರಣ ಗಳಲ್ಲಿ ತಾಲೂಕಿನಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜಾನುವಾರು ತೊಳೆಯಲು ಹೋಗಿ ಅಂಚನಹಳ್ಳಿಯಲ್ಲಿ ರೈತ ರಮೇಶ್(50) ಹಾಗೂ ಸ್ನಾನ ಮಾಡಲು ಹೋಗಿ ಶೀಳನೆರೆ ಬಳಿ ಹರಿಯುವ ಹೇಮಾವತಿ ಮುಖ್ಯ ಕಾಲುವೆಯಲ್ಲಿ ಕಾರ್ಮಿಕ ಮಹೇಶ್ ಕುಮಾರ್ ಅಲಿಯಾಸ್ ಮಾದ(20) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ರಮೇಶ್: ರೈತ ರಮೇಶ್ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಮುಗಿಸಿ ನಂತರ ತಮ್ಮ ಜಾನುವಾರುಗಳನ್ನು ಕಾಲುವೆ ಯಲ್ಲಿ ತೊಳೆಯಲು ಹೋದ ವೇಳೆ ಜಾನು ವಾರುಗಳು ಬೆದರಿದ ಪರಿಣಾಮ…

ಮಂಡ್ಯ ಜಿಲ್ಲೆಯಲ್ಲಿ ರೈತರು, ಸವಡೆಗಳ ಪ್ರತ್ಯೇಕ ಪ್ರತಿಭಟನೆ
ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ರೈತರು, ಸವಡೆಗಳ ಪ್ರತ್ಯೇಕ ಪ್ರತಿಭಟನೆ

October 4, 2018

ಮಂಡ್ಯ:  ಸೇವೆ ಖಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸವಡೆಗಳು ಮತ್ತು ರೈತ ಸಂಘದ ಕಾರ್ಯಕರ್ತರ ಮೇಲೆ ಸುಳ್ಳುದೂರು ದಾಖಲಿಸಿರುವುದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ರೈತರು ಮತ್ತು ನೀರಾವರಿ ಇಲಾಖೆ ಕಾರ್ಯ ಪಾಲಕ ಅಭಿಯಂತರ ಕಚೇರಿ ಮುಂದೆ ಸವಡೆಗಳು ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆ: ತಾಲೂಕಿನ ಶಿವಳ್ಳಿ ಪೊಲೀಸರು ಗಾಯಾಳುಗಳ ಮೇಲೆ ದ್ವೇಷದ ರಾಜಕಾರಣದಿಂದ ಪ್ರಕರಣ ದಾಖಲು ಮಾಡಿ ಗ್ರಾಮದಲ್ಲಿ…

1 34 35 36 37 38 56
Translate »