ಮಂಡ್ಯ: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಮದ್ದೂರು ತಾಲೂಕಿನ ಗೂಳೂರು ಗ್ರಾಮದ ಶಿವಣ್ಣ(41) ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಹುಂಡಿ ಗ್ರಾಮ ಈಶ್ವರ್ (48) ಆತ್ಮಹತ್ಯೆಗೆ ಶರಣಾದ ರೈತರಾಗಿದ್ದಾರೆ.
ಮದ್ದೂರು ವರದಿ: ಮದ್ದೂರು ತಾಲೂಕಿನ ಗೂಳೂರು ಗ್ರಾಮದ ಶಿವಣ್ಣ ಅವರು ರೇಷ್ಮೆ ಕೃಷಿಗಾಗಿ 5 ಲಕ್ಷ ರೂ. ಸಾಲ ಮಾಡಿದ್ದು, ಸಾಲ ಮರುಪಾವತಿಯ ಒತ್ತಡ ಹೆಚ್ಚಾಗಿದ್ದರಿಂದ ಆತ್ಮಹತ್ಯೆಗೆ ಶರಣಾ ಗಿದ್ದಾರÉ ಎನ್ನಲಾಗಿದೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಪ್ರಕರಣ ನಡೆದಿದೆ.
ಶ್ರೀರಂಗಪಟ್ಟಣ ವರದಿ: ಶ್ರೀರಂಗಪಟ್ಟಣ ತಾಲೂಕು ಹೆಬ್ಬಾಡಿ ಹುಂಡಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಈಶ್ವರ್(48) ಅವರು ಬ್ಯಾಂಕ್ ಮತ್ತು ಕೈ ಸಾಲ ಸೇರಿ ಸುಮಾರು 7 ಲಕ್ಷ ಸಾಲ ಮಾಡಿ ಕೊಂಡಿದ್ದ ಎಂದು ಹೇಳಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.