ಸಾಲಬಾಧೆಯಿಂದ ಜೆಡಿಎಸ್ ಮುಖಂಡ ಆತ್ಮಹತ್ಯೆ
ಮಂಡ್ಯ

ಸಾಲಬಾಧೆಯಿಂದ ಜೆಡಿಎಸ್ ಮುಖಂಡ ಆತ್ಮಹತ್ಯೆ

October 18, 2018

ಮಂಡ್ಯ:  ಸಾಲಬಾಧೆ ತಾಳಲಾರದೆ ಜೆಡಿಎಸ್ ಮುಖಂಡ ಹಾಗೂ ಉದ್ಯಮಿಯೋರ್ವ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸ್ವರ್ಣಸಂದ್ರ ಫ್ಯಾಕ್ಟರಿ ವೃತ್ತದಲ್ಲಿ ನಡೆದಿದೆ.

ಚಿಕ್ಕೇಗೌಡನದೊಡ್ಡಿಯ ನಿವಾಸಿ ಲೋಕೇಶ್ (35) ಆತ್ಮಹತ್ಯೆಗೆ ಶರಣಾಗಿರುವ ಉದ್ಯಮಿ. ನಗರದ ಸ್ವರ್ಣಸಂದ್ರ ಫ್ಯಾಕ್ಟರಿ ವೃತ್ತದ ಬಳಿ ಲೋಕೇಶ್ ಅವರು ಮಹಿಂದ್ರಾ ಟ್ರ್ಯಾಕ್ಟರ್ ಶೋರೂಂ ನಡೆಸುತ್ತಿದ್ದರು. ಕಳೆದ ನಗರಸಭೆ ಚುನಾವಣೆಯಲ್ಲಿ 34ನೇ ವಾರ್ಡ್‍ನಿಂದ ಜೆಡಿಎಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಲೋಕೇಶ್ ವ್ಯವಹಾರದ ಸಲುವಾಗಿ 5 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದು, ವ್ಯವ ಹಾರದಲ್ಲಿ ನಷ್ಟ ಉಂಟಾಗಿ ಸಾಲದ ಒತ್ತಡ ಹೆಚ್ಚಾಗಿದ್ದರಿಂದ ಶೋರೂಂ ನಲ್ಲಿ ನೇಣಿಗೆ ಶರಣಾಗಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Translate »