ಕೆ.ಆರ್.ಪೇಟೆ: ಪ್ರತ್ಯೇಕ ಪ್ರಕರಣ ಗಳಲ್ಲಿ ತಾಲೂಕಿನಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಜಾನುವಾರು ತೊಳೆಯಲು ಹೋಗಿ ಅಂಚನಹಳ್ಳಿಯಲ್ಲಿ ರೈತ ರಮೇಶ್(50) ಹಾಗೂ ಸ್ನಾನ ಮಾಡಲು ಹೋಗಿ ಶೀಳನೆರೆ ಬಳಿ ಹರಿಯುವ ಹೇಮಾವತಿ ಮುಖ್ಯ ಕಾಲುವೆಯಲ್ಲಿ ಕಾರ್ಮಿಕ ಮಹೇಶ್ ಕುಮಾರ್ ಅಲಿಯಾಸ್ ಮಾದ(20) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ರಮೇಶ್: ರೈತ ರಮೇಶ್ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಮುಗಿಸಿ ನಂತರ ತಮ್ಮ ಜಾನುವಾರುಗಳನ್ನು ಕಾಲುವೆ ಯಲ್ಲಿ ತೊಳೆಯಲು ಹೋದ ವೇಳೆ ಜಾನು ವಾರುಗಳು ಬೆದರಿದ ಪರಿಣಾಮ ಆಕಸ್ಮಿಕ ವಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತನ ಪತ್ನಿ ಅಂಬಿಕಾ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಎಸ್‍ಐ ಆನಂದ್‍ಗೌಡ ಮತ್ತು ಎಎಸ್‍ಐ ಈರೇಗೌಡ ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಹೇಶ್ ಕುಮಾರ್: ತಾಲೂಕಿನ ಶೀಳನೆರೆ ಬಳಿ ಹರಿಯುವ ಹೇಮಾವತಿ ಮುಖ್ಯ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿ ಕಾರ್ಮಿಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳ ವಾರ ಸಂಜೆ ನಡೆದಿದೆ. ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದ ಮಹೇಶ್ ಕುಮಾರ್ ಮೃತಪಟ್ಟ ಕೂಲಿ ಕಾರ್ಮಿಕ.
ಘಟನೆ ವಿವರ: ತಾಲೂಕಿನ ವಿವಿಧೆಡೆ ಇಟ್ಟಿಗೆ ಕೆಲಸ ಮಾಡಲು ಬಂದಿದ್ದ ಐದಾರು ಮಂದಿಯುಳ್ಳ ಗುಂಪು ಇಂದು ಶೀಳನೆರೆ ಬಳಿ ಕೆಲಸಕ್ಕೆ ಬಂದಿದ್ದರು. ಈ ವೇಳೆ ಸ್ನಾನ ಮಾಡಲು ಕಾಲುವೆಗೆ ಇಳಿದಿದ್ದ ಮಹೇಶ್ ಕುಮಾರ್ ನೀರಿನ ರÀಭಸಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಸಂಬಂಧ ಕಾರ್ಮಿಕರ ಗುಂಪಿನ ಮೇಸ್ತ್ರಿ ರಾಜು ಅವರು ಕೆ.ಆರ್.ಪೇಟೆ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.