ರಾಜ್ಯದ 15 ಪೊಲೀಸರು ಸೇರಿ 414 ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಣೆ
ಮಂಡ್ಯ: ಸೈನಿಕರು ಗಡಿ ಕಾಯುತ್ತಾ ದೇಶ ರಕ್ಷಣೆ ಮಾಡಿದರೆ, ಪೊಲೀಸರು ನಾಗರಿಕರನ್ನು ರಕ್ಷಣೆ ಮಾಡುತ್ತಾ ಸೇವೆ ಸಲ್ಲಿಸುತ್ತಾ ದೇಶದೊಳಗಿನ ಸೈನಿಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್. ಮಂಜುಶ್ರೀ ತಿಳಿಸಿದರು.
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ಹುತಾತ್ಮರ ದಿನಾ ಚರಣೆ ಅಂಗವಾಗಿ ಸೇವೆ ವೇಳೆಯಲ್ಲಿ ಮೃತರಾದ ಪೆÇಲೀಸ್ ಅಧಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಪೊಲೀಸ್ ಸೇವೆ ಕಷ್ಟವಾಗಿದೆ. ದೇಶದ ಗಡಿಯಲ್ಲಿ ಸೈನಿಕರು ಸಾವನ್ನಪ್ಪಿದರೆ ದೊಡ್ಡ ಮಟ್ಟದ ಗೌರವ ಸಲ್ಲಿಸುತ್ತೇವೆ. ಆದರೆ, ದೇಶದೊಳಗೆ ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಾ, ನಮ್ಮ ನಡುವೆಯೇ ಪ್ರಾಣತ್ಯಾಗ ಮಾಡುತ್ತಾರೆ. ಪೆÇಲೀಸ್ ಸೇವೆ ಕಷ್ಟಕರ ವಾಗಿದ್ದು, ಹುತಾತ್ಮರ ದಿನಾಚರಣೆ ಮೂಲಕ ನಮ್ಮ ನಡುವೆಯೇ ದೇಶದ 414 ಜನ ಪೆÇಲೀಸರು ಪ್ರಾಣ ತ್ಯಾಗ ಮಾಡಿದ್ದಾರೆ. ಹೀಗಾಗಿ ಹುತಾತ್ಮ ದಿನಾಚರಣೆ ಮೂಲಕ ಮೃತ ಪೆÇಲೀಸರಿಗೆ ಗೌರವ ಶ್ರದ್ಧಾಂಜಲಿ ಅರ್ಪಿಸುವ ಹಾಗೂ ಎಲ್ಲಾ ಪೆÇಲೀಸ್ ಅಧಿಕಾರಿಗಳಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಬೇಕು ಎಂದರು.
ಪೊಲೀಸರು ಕರ್ತವ್ಯಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ನಂಬಿಕೆ, ವಿಶ್ವಾಸ ಮೂಡುವಂತೆ ಕೆಲಸ ಮಾಡಬೇಕು. ಇತ್ತೀಚೆಗೆ ಹೆಚ್ಚುತ್ತಿರುವ ವಿಧ್ವಂಸಕ ಕೃತ್ಯಗಳು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಕರೆ ನೀಡಿದರು. ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾ ದರೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಸೌಹಾದರ್ ಸಂಬಂಧ ಅತ್ಯಗತ್ಯವಾದುದು, ಸಾರ್ವಜನಿಕರ ನಡುವೆ ಸೌಹಾರ್ದತೆ ಕಾಪಾಡಿಕೊಳ್ಳದಿದ್ದರೆ ಅಶಾಂತಿ, ಅನಾಹುತಗಳಿಗೆ ನಾಂದಿಯಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಸೆ. 2017ರಿಂದ ಆ. 2018ರವರೆಗೆ ಸೇವೆ ವೇಳೆಯಲ್ಲಿಯೇ ಮೃತರಾದ ರಾಜ್ಯದ 15 ಪೆÇಲೀಸರು ಸೇರಿದಂತೆ ದೇಶದ 414 ಪೆÇಲೀಸ್ ಅಧಿಕಾರಿಗಳ ಹೆಸರನ್ನು ಓದುವ ಮೂಲಕ ಎಲ್ಲರಿಗೂ ಗೌರವ ಸಮರ್ಪಿಸಲಾಯಿತು.
ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಎಲ್ಲಾ ಗಣ್ಯರು ಪುಷ್ಟಾರ್ಚನೆ ಮಾಡಿದರು. ಜೊತೆಗೆ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುತಾತ್ಮ ಪೆÇಲೀಸ್ ಅಧಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.