ಮಂಡ್ಯ: ಸಾಲಸೌಲಭ್ಯ ನೀಡುವುದರ ಜೊತೆಗೆ ಗುಡಿಕೈಗಾರಿಕೆ, ಹೈನು ಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಆರ್ಥಿಕ ನೆರವು ಕಲ್ಪಿಸುತ್ತಿರುವ ಸಹಕಾರಿ ಸಂಘಗಳು ದುಡಿಯುವ ವರ್ಗಗಳ ಪಾಲಿಗೆ ಆಶಾಕಿರಣವಾಗಿವೆ ಎಂದು ಹಿರಿಯ ಸಹಕಾರಿ ಧುರೀಣ ಕೌಡ್ಲೆ ಚನ್ನಪ್ಪ ಹೇಳಿದರು.
ನಗರದ ಸುಭಾಷ್ ನಗರದಲ್ಲಿರುವ ಕಾಯಕಯೋಗಿ ಸಹಕಾರ ಸಂಘದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ರೈತ ಮಹಿಳೆಯರಿಗೆ ಕಲ್ಪವೃಕ್ಷ ವಿತರಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳು ವಿವಿಧ ಕಾಯಕಗಳನ್ನು ಮಾಡುವ ಮಹಿಳೆ ಯರು, ವರ್ತಕರು, ಕೃಷಿಕರು, ಮೀನು ಗಾರಿಕೆ, ಹಸು ಸಾಕಾಣಿಕೆಗೆ ಅಗತ್ಯ ಸಾಲ ಸೌಲಭ್ಯ ನೀಡಿ ಉದ್ಯೋಗ ಸೃಷ್ಟಿಸುತ್ತಿರು ವುದು ಸಂತೋಷಕರ ಸಂಗತಿ. ಜಿಲ್ಲಾ ಸಹಕಾರ ಬ್ಯಾಂಕ್ ವಿವಿಧ ಉದ್ದೇಶಗಳ ಅನುಷ್ಠಾನಕ್ಕೆ ಸ್ಥಾಪನೆಗೊಳ್ಳುವ ಸಹಕಾರಿ ಸಂಘಗಳಿಗೆ ಅಗತ್ಯ ನೆರವು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕಚೇರಿ ಉದ್ಘಾಟನೆ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಅಶ್ವಥ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಕಡಿಮೆ ದರದ ಬಡ್ಡಿ ಯಲ್ಲಿ ವಿವಿಧ ಉದ್ಯಮಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಆರ್ಥಿಕ ನೆರವು ಪಡೆಯುವುದರ ಜೊತೆಗೆ ಸಹಕಾರಿ ಕ್ಷೇತ್ರ ಉಳಿಯಬೇಕಾದರೆ ಷೇರುದಾರರು ಸಾಲ ಮರುಪಾವತಿ ಮಾಡುವುದು ತಮ್ಮ ಜವಾಬ್ದಾರಿ ಎಂಬುದನ್ನು ಅರಿತು ಸಂಘಗಳ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಕಾಯಕಯೋಗಿ ಸಮೂಹ ಸಂಸ್ಥೆ ಬಡವರ್ಗದ ಜನತೆಗೆ ಅನುಕೂಲವಾಗ ಲೆಂದು ಸ್ಥಾಪಿಸಿರುವ ಕಾಯಕಯೋಗಿ ಸಹಕಾರ ಸಂಘ ಉನ್ನತ ಮಟ್ಟಕ್ಕೆ ಬೆಳೆ ಯಲಿ. ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರು ಕಾಯಕಯೋಗಿ ಜನೋಪಯೋಗಿ ಯಾಗಿ ಬೆಳೆಯಲಿ ಎಂದು ಹಾರೈಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಸಂಚಾ ಲಕ ಬಿ.ಎಂ.ಅಪ್ಪಾಜಪ್ಪ ಮಾತನಾಡಿ, ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಸಹಕಾರಿ ಸಂಘಗಳು ಮುಂದಾಗಬೇಕು. ಆರ್ಥಿಕ ನೆರವು ನೀಡುವ ಮೂಲಕ ದುಡಿಯುವ ಯುವಶಕ್ತಿಗಳಿಗೆ ಉದ್ಯೋಗ ಸೃಷ್ಟಿಸಿದರೆ ಸಹಕಾರಿ ಕ್ಷೇತ್ರ ಮಾದರಿ ಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಾಯಕಯೋಗಿ ಮಹಿಳಾ ಸ್ವಸಹಾಯ ಸಂಘದ ಪ್ರತಿ ನಿಧಿಗಳಿಗೆ ನಗರಸಭೆ ಸದಸ್ಯೆ ಮಂಜುಳಾ ಉದಯಶಂಕರ್ ಹಾಗೂ ಕಾಂಗ್ರೆಸ್ ಮುಖಂಡ ಅಮರಾವತಿ ನಾಗರಾಜ್ ತೆಂಗಿನ ಸಸಿ ವಿತರಿಸಿದರು.
ಕಾಯಕಯೋಗಿ ಸಹಕಾರಿ ಸಂಘದ ಮುಖ್ಯ ಪ್ರವರ್ತಕರಾದ ಎಚ್.ಪಿ. ಅಪರ್ಣ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ವೇದಿಕೆಯಲ್ಲಿ ವೀರಶೈವ ವಿದ್ಯಾರ್ಥಿ ನಿಲಯದ ಟ್ರಸ್ಟಿ ಮಲ್ಲಿಕಾರ್ಜುನಯ್ಯ, ಕಾಯಕ ಯೋಗಿ ಸಹಕಾರ ಸಂಘದ ಪ್ರವರ್ತಕ ರಾದ ಸರ್ವ ಮಂಗಳಗೌಡ, ಉದ್ಯಮಿ ಗಳಾದ ಶಿವಕುಮಾರ್, ಅಂಬಿಕಾ ಬಿಳ ಗೂಲಿ, ರಮೇಶ್, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ರಮೇಶ್, ಮುಖಂಡ ನಾರಾ ಯಣಸ್ವಾಮಿ ಹಾಜರಿದ್ದರು.